0 Shares

ಬೆಂಗಳೂರು : BDA ಅಧ್ಯಕ್ಷ ಎನ್.ಎ.ಹ್ಯಾರಿಸ್‌ ಮತ್ತು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನಿವಾಸದ ಮೇಲೆ ED ರೇಡ್ ಮಾಡಿದೆ. ಬೆಂಗಳೂರಿನ 17 ಕಡೆ ಕೇಂದ್ರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಅಶೋಕ್ ನಗರದಲ್ಲಿರುವ ನಲಪಾಡ್ ನಿವಾಸದ ಮೇಲೂ ಇಡಿ ದಾಳಿ ನಡೆಸಿದೆ

ಬೆಳಗ್ಗೆಯಿಂದ ಶೋಧ ಕಾರ್ಯಚರಣೆ ಆರಂಭವಾಗಿದ್ದು, ಹ್ಯಾರಿಸ್ ಮತ್ತು ನಲಪಾಡ್​ಗೆ ಸೇರಿದ ಕಟ್ಟಡಗಳು ಮತ್ತು ಇನ್ನಿತರ ವ್ಯವಹಾರಗಳ ಮೇಲೆ ED ರೇಡ್ ಮಾಡಿದೆ. ಕೇಂದ್ರ ಮೀಸಲು ಪಡೆ ಯೋಧರ ರಕ್ಷಣೆಯೊಂದಿಗೆ 100 ಮಂದಿ ಇಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದ್ದು, ಹ್ಯಾಕರ್ ಶ್ರೀಕಿ ಜೊತೆಯಲ್ಲಿ ಆರ್ಥಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ED ರೇಡ್ ಮಾಡಿದೆ. ಶ್ರೀಕಿ ಜೊತೆ ನಲಪಾಡ್ ಆರ್ಥಿಕ ವ್ಯವಹಾರ ಇಟ್ಟುಕೊಂಡಿದ್ದರು. ಶ್ರೀಕಿ ಜೊತೆ ನಲಪಾಡ್ 6 ವರ್ಷದ ಆರ್ಥಿಕ ವ್ಯವಹಾರ ಹೊಂದಿದ್ದರು. ಇಬ್ಬರೂ ಸೇರಿ ಕೋಟ್ಯಂತರ ಹಣ ವಹಿವಾಟು ನಡೆಸಿದ್ದರು. ಇದೀಗ ಸುಮಾರು 12 ಮಂದಿ ಇಡಿ ಅಧಿಕಾರಿಗಳಿಂದ ಶೋಧ ನಡೆಯುತ್ತಿದೆ.

0 Shares

By admin

Leave a Reply

Your email address will not be published. Required fields are marked *