ವಿಜಯನಗರ/ಹಂಪಿ : ರಾಜ್ಯದಲ್ಲಿ ಸಿಎಂ ಖುರ್ಚಿ ಕದನ ವಿಚಾರದ ಬಗ್ಗೆ ಹಂಪಿಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. 2028 ರವರೆಗೆ ಸಿಎಂ ಸಿದ್ದರಾಮಯ್ಯ ಅವರೇ, ಇರ್ತಾರೆ, ವಿಧಾನ ಸಭೆ ಚುನಾವಣೆಗೆ ಸಿದ್ದರಾಮಯ್ಯ ಅವರದ್ದೇ ನೇತೃತ್ವದಲ್ಲಿ ನಡೆಯುತ್ತದೆ.
ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಏನೇ ನಿರ್ಧಾರ ತಗೊಂಡ್ರು ನಾವು ಬದ್ಧ, ಬೀದಿಯಲ್ಲಿ ಹೋಗೋ ದಾಸಯ್ಯನ ಸಿಎಂ ಮಾಡಿದ್ರು ನಾವು ಒಪ್ಪಿಕೊಳ್ಳುತ್ತೇವೆ. ಪುನರುಚ್ಚರಿಸಿದ ಸಚಿವ ಜಮೀರ್
ಡಿಕೆಶಿ ಭೇಟಿಗೆ ಹೈಕಮಾಂಡ್ ಭೇಟಿಗೆ ಸಿಗ್ತಿಲ್ಲ. ನಮ್ಮ ಹೈಕಮಾಂಡ್ ಯಾರೇ ಹೋದ್ರು ಕೈಗೆ ಸಿಗ್ತಾರೆ ಎಂದರು.
ಸಿಎಂ ಸಿದ್ದರಾಮಯ್ಯ ಹೇಡಿ ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆಯ ಬಗ್ಗೆ ಜನಾರ್ದನ ರೆಡ್ಡಿ ಯಾವ ಕಡೆ ಯಾವಾಗ ವಾಲುತ್ತಾರೋ ಗೊತ್ತಿಲ್ಲ. ಸಮಯ ಸಂದರ್ಭಕ್ಕೆ ತಕ್ಕಂತೆ ಇರ್ತಾರೆ, ಅವರ ಬಗ್ಗೆ ನಾವು ಹೆಚ್ಚು ಮಾತನಾಡೋಲ್ಲ. ಸಂತೋಷ್ ಲಾಡ್ ಗೂ, ಹೇಗೆ ಬೇಕೋ ಹಾಗೆ ಮಾತಾಡಿದ್ದಾರೆ. ಅವರಿಗೆ ಬದ್ಧತೆ ಇಲ್ಲ ಎಂದು ಹೇಳಿದ್ರು.
