0 Shares

ಬೆಂಗಳೂರು : ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಟಾರ್ಚರ್‌ ಹಾಗೂ ಶಾಲ ಶಿಕ್ಷಕಿ ಐದು ವರ್ಷದ ಬಾಲಕನಿಗೆ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಹನುಮಂತ ನಗರದ ಶ್ರೀನಿವಾಸನಗರ ಬಳಿ ಇರುವ ಶ್ರೀ ಕನಕ ಇಂಗ್ಲಿಷ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ.

ಕಳೆದ ಒಂದು ತಿಂಗಳ ಹಿಂದೆಯೂ ಹಲ್ಲೆ ಮಾಡಿದ್ದ ಶಿಕ್ಷಕಿ. ಈ ವೇಳೆ ಬಾಲಕನ ಪೋಷಕರು ಹೋಗಿ ಪ್ರಶ್ನೆ ಮಾಡಿದ್ದಾರೆ. ನಂತರ ಪೊಷಕರು ಹನುಮಂತ ನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ರು. ನಂತರ ಶಾಲ ಶಿಕ್ಷಕಿ ಪೊಲೀಸರ ಮುಂದೆ ಕ್ಷಮೆ ಕೇಳಿದ್ದರು.

ಆದ್ರೆ ನಿನ್ನೆಯೂ ಕೂಡ ಬಾಲಕನಿಗೆ ಶಿಕ್ಷಕಿ ಮತ್ತೆ ಹೊಡೆದಿರೊ ಘಟನೆ ನಡೆದಿದೆ. ಬೆನ್ನಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಕಾಪಾಳಕ್ಕೆ ಹೊಡೆರೊದಾಗಿ ಪೊಷಕರು ಆರೋಪ ಮಾಡಿದ್ದಾರೆ. ನಾವು ಮಕ್ಕಳಿಗೆ ಹೊಡದೆ ಪಾಠ ಮಾಡೋದು, ಬೇಡ ಅಂದ್ರೆ ಕರೆದುಕೊಂಡು ಹೋಗ್ತಿರೊ ಅಂತ ಹೇಳಿದ್ದಾರೆ.

ಕುರುಬರ ಸಂಘದ ಸೆಕ್ರೆಟರಿ ಎಂದು ಹೇಳಿ ಶಾಲಾ ಆಡಳಿತ ಮಂಡಳಿಯು ಪೋಷಕರ ಮೇಲೆ ದರ್ಪ ತೋರಿದರು. ಈ ವೇಳೆ ಶಾಲೆಯ ಎಚ್‌.ಎಂ, ಪೊಷಕರಿಗೆ ಅವಾಜ್ ಹಾಕಿ, ಟಿಸಿ ಕೊಟ್ಟು ಕಳಿಸೊದಾಗಿ ಬೆದರಿಕೆ, ಆಚೆ ಹೋಗಿ ಅಂತ ದಿಮಾಕಿ ಹಾಕಿದ್ದಾರೆ.

ಪೋಷಕರು ಪೊಲೀಸರನ್ನು ಕರೆಸಿದರು, ಸಹ ಯಾವುದೇ ರೀತಿಯ ಮರ್ಯಾದಿ ಕೊಡದೆ ಮಾತನಾಡಿದರು. ಪೋಷಕರು ದೂರು ನೀಡಲು ಹೋದ ಕಾರಣ ಆಡಳಿತ ಮಂಡಳಿಯು ದರ್ಪದಿಂದ ನಡೆದುಕೊಂಡಿದ್ದಾರೆ.

0 Shares

By admin

Leave a Reply

Your email address will not be published. Required fields are marked *