0 Shares

ಸಂಗೀತ ಸಂಯೋಜಕ, ರ‍್ಯಾಪರ್ ಹಾಗೂ ನಟ ಚಂದನ್ ಶೆಟ್ಟಿ ಅವರು ಈ ಮೊದಲು ನಿವೇದಿತಾ ಗೌಡ ಅವರನ್ನು ಮದುವೆ ಆಗಿದ್ದರು. ಬಿಗ್ ಬಾಸ್​​ನಲ್ಲಿ ಆದ ಪರಿಚಯ ಹಸೆಮಣೆವರೆಗೆ ಇವರನ್ನು ತಂದು ನಿಲ್ಲಿಸಿತು. ಮದುವೆ ಆಗಿ ಕೆಲವೇ ವರ್ಷಗಳಲ್ಲಿ ಇವರು ಬೇರೆ ಆದರು. ಈಗ ಇಬ್ಬರೂ ತಮ್ಮ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಚಂದನ್ ಶೆಟ್ಟಿ ಅವರು ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ವಿವಾಹ ಯಾವಾಗ ಎಂಬ ವಿಷಯ ರಿವೀಲ್ ಮಾಡಿದ್ದಾರೆ.

ಚಿತ್ರರಂಗದ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಸಾಮಾನ್ಯ ಎಂಬಂತಾಗಿದೆ. ಇದನ್ನು ಮುಚ್ಚಿಟ್ಟು ಯಾರೂ ದೂರ ಹೋಗುತ್ತಿಲ್ಲ. ಈ ಬಗ್ಗೆ ಸೆಲೆಬ್ರಿಟಿಗಳು ಓಪನ್ ಆಗಿ ಮಾತನಾಡುತ್ತಿದ್ದಾರೆ. ಚಂದನ್ ಹಾಗೂ ನಿವೇದಿತಾ ಡಿವೋರ್ಸ್ ಆದ ಬಳಿಕ ಇಬ್ಬರೂ ಸುದ್ದಿಗೋಷ್ಠಿ ನಡೆಸಿ ವಿಚ್ಛೇದನದ ಬಗ್ಗೆ ಸ್ಪಷ್ಟನೆ ಕೊಟ್ಟರು. ಹೊಂದಾಣಿಕೆ ಸಾಧ್ಯವಾಗದ ಕಾರಣ ಡಿವೋರ್ಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಈಗ ಚಂದನ್ ಎರಡನೇ ಮದುವೆ ಬಗ್ಗೆ ಆಲೋಚಿಸಿದ್ದಾರೆ.

ವಾಹಿನ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಚಂದನ್ ಮಾತನಾಡಿದ್ದಾರೆ. ‘ಚಂದನ್ ಎರಡನೇ ಮದುವೆ ಆಗ್ತಾರಾ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಮದುವೆ ಆಗುತ್ತೇನೆ. ಆದರೆ, ಈ ವರ್ಷ ಅಲ್ಲ. ಒಂದು ಒಳ್ಳೆಯ ಹುಡುಗಿ ನೋಡಿ ಮುಂದಿನ ವರ್ಷ ವಿವಾಹ ಆಗುತ್ತೇನೆ. ಹುಡುಗಿ ನೋಡುವ ಪ್ರಕ್ರಿಯೆ ಶುರುವಾಗಿಲ್ಲ’ ಎಂದರು. ‘ವೈಬ್ ಮ್ಯಾಚ್ ಆದರೆ ಸಾಕು. ಈ ಬಗ್ಗೆ ಈಗ ಏನನನ್ನೂ ಹೇಳೋಕೆ ಇಷ್ಟಪಡಲ್ಲ. ಮುಂದಿನ ವರ್ಷ ಈ ಬಗ್ಗೆ ಮಾತನಾಡುತ್ತೇನೆ’ ಎಂದು ಚಂದನ್ ಹೇಳಿದ್ದಾರೆ.

ಅಂದರೆ, 2027ರ ವೇಳೆಗೆ ಚಂದನ್ ಶೆಟ್ಟಿ ಎರಡನೇ ಬಾರಿಗೆ ಹಸೆಮಣೆ ಏರೋದು ಫಿಕ್ಸ್ ಎಂದು ಹೇಳಲಾಗುತ್ತಾ ಇದೆ. ಅವರು ಮದುವೆ ಆಗುವ ಹುಡುಗಿ ಹೇಗಿರುತ್ತಾರೆ ಎಂಬ ಕುತೂಹಲ ಮೂಡಿದೆ. ಚಂದನ್ ಶೆಟ್ಟಿ ಅವರು ಸದ್ಯ ‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಸುಜಯ್ ಶಾಸ್ತ್ರಿ ನಿರ್ದೇಶನ ಇದೆ. ಅರ್ಚನಾ ಕೊಟ್ಟಿಗೆ ಚಿತ್ರಕ್ಕೆ ನಾಯಕಿ.ಏಪ್ರಿಲ್ 24ರಂದು ಸಿನಿಮಾ ರಿಲೀಸ್ ಆಗುತ್ತಿದೆ.

0 Shares

By admin

Leave a Reply

Your email address will not be published. Required fields are marked *