ಬೆಂಗಳೂರು : ಬೆಂಗಳೂರಿನ ಸರ್ಜಾಪುರದ ರಾಜಗೋಪಾಲ್ ರೆಡ್ಡಿ ಎಸ್ಟೇಟ್ ನಲ್ಲಿ SSB ವನಮಹೋತ್ಸವ 2026 ಬೆಂಗಳೂರು ಸರ್ಜಿಕಲ್ ಸೊಸೈಟಿ, ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ (ASI) ಹಾಗೂ ಅದರ ಕರ್ನಾಟಕ ರಾಜ್ಯ ಘಟಕದ (KSCASI) ಸಹಯೋಗದಲ್ಲಿ ಈ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಶ್ರೀಯುತ ರಾಜಗೋಪಾಲ್ ರೆಡ್ಡಿ ಹಾಗೂ ಶ್ರೀಮತಿ ಭಾರತಿಯವರು ಭೂಮಿ ಹಾಗೂ ವನ ದೇವತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

“ಒಂದು ಶಸ್ತ್ರಚಿಕಿತ್ಸೆ – ಒಂದು ಗಿಡ” (ASI Green Legacy) ಎಂಬ ವಿಶೇಷ ಅಭಿಯಾನದಡಿ ನಡೆದ ಈ ಕಾರ್ಯಕ್ರಮದಲ್ಲಿ ವೈದ್ಯರು, ಶಸ್ತ್ರಚಿಕಿಸ್ತಕರು, ಸ್ವಯಂಸೇವಕರು ಮತ್ತು ಸಾರ್ವಜನಿಕರು ಭಾಗವಹಿಸಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದರು. ರೋಗಿಗಳ ಗುಣಮುಖತೆಯ ಸಂದರ್ಭದಲ್ಲಿ ಗಿಡಗಳನ್ನು ಉಡುಗೊರೆಯಾಗಿ ನೀಡುವ ವಿಶಿಷ್ಟ ಆಲೋಚನೆಯೂ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಫಲವತ್ತಾದ ಗಿಡಗಳನ್ನು ವಿತರಿಸುವುದು ಮತ್ತು ಗಿಡ ನೆಡುವ ಕಾರ್ಯಗಳು ನಡೆಯಿತು. ಪರಿಸರ ಮತ್ತು ಆರೋಗ್ಯ ಎರಡನ್ನೂ ಸಮಾನವಾಗಿ ಕಾಪಾಡಬೇಕೆಂಬ ಸಂದೇಶವನ್ನು ಈ ಮೂಲಕ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಾ. ಸುನಿಲ್ ಕುಮಾರ್, ಕಾರ್ಯದರ್ಶಿ ಡಾ. ವಿಕ್ರಮ್ ಬಿಳಿಗಿರಿ ಡಾ. ರವೀಂದ್ರ ಡಾ. ವೆಂಕಟೇಶ್, ಡಾ. ವೆಂಕಟಾಚಲ, ಡಾ. ಪ್ರೇಮ್. ಡಾ.ಸುನಿಲ್ ಅಲೂರ್ ಕಮಾಂಡೋ ಏರ್ ಫೋರ್ಸ್ ಆಸ್ಪತ್ರೆಯ ಡಾ.ಅಮಿತ್ ಕುಮಾರ್, ಡಾ. ಬಿಶ್ವಾಸ್ ಇತರೆ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕಾರ್ಯನಿರತ ಪತ್ರಕರ್ತ ಸಂಘ ಬೆಂಗಳೂರು ಘಟಕದ ಉಪಾಧ್ಯಕ್ಷೇ ಶ್ರೀ ಪರಿಮಳ , ಜಯಶ್ರೀ ಮುದ್ದಪ್ಪ, ಭಾಗವಹಿಸಿದ್ದರು.
