0 Shares

ರಾಯಚೂರು : ಜಿಲ್ಲೆಯಲ್ಲಿ ಲೋಕಾಯುಕ್ತರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಭ್ರಷ್ಟಾಚಾರ ಆರೋಪದಡಿ ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಪಂಚಾಯತ್‌ನ ಚೀಫ್ ಆಫೀಸರ್ ಸುರೇಶ್ ಶೆಟ್ಟಿ, ಖಾತಾ ಮ್ಯೂಟೇಶನ್ ಮಾಡಲು ಲೇಔಟ್ ಮಾಲೀಕ ರಘರಾಮ್ ರೆಡ್ಡಿಯಿಂದ 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪದ ಹಿನ್ನೆಲೆ ಸುರೇಶ್​ನನ್ನು ವಶಕ್ಕೆ ಪಡೆಯಲಾಗಿದೆ.

ಸಿರವಾರ ಪಟ್ಟಣದ ಹೊಸ ಲೇಔಟ್‌ನ 34 ನಿವೇಶನಗಳ ಖಾತಾ ಮ್ಯೂಟೇಶನ್ ಪ್ರಕ್ರಿಯೆಗಾಗಿ ಸುರೇಶ್ ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಘರಾಮ್ ರೆಡ್ಡಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ಆಧಾರವಾಗಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ನಿನ್ನೆ ರಘರಾಮ್ ರೆಡ್ಡಿ ಅವರು 1 ಲಕ್ಷ ರೂ. ಹಣವನ್ನು ಸುರೇಶ್ ಶೆಟ್ಟಿಗೆ ನೀಡುವ ವೇಳೆ ದಾಳಿ ನಡೆಸಿದ್ದಾರೆ.

ಆದರೆ ದಾಳಿ ವೇಳೆ ಸುರೇಶ್ ಶೆಟ್ಟಿ ಕಾರಿನಲ್ಲಿ ಹಣ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಸಿರವಾರದಿಂದ ಕವಿತಾಳ ಕಡೆಗೆ ಕಾರಿನಲ್ಲಿ ತೆರಳಿ ಸ್ನೇಹಿತರ ಮನೆಯಲ್ಲಿ ಅಡಗಿಕೊಂಡಿದ್ದರು ಎನ್ನಲಾಗಿದೆ. ಲೋಕಾಯುಕ್ತ ತಂಡ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ ಕವಿತಾಳ ಪಟ್ಟಣದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ಇದೀಗ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

0 Shares

By admin

Leave a Reply

Your email address will not be published. Required fields are marked *