0 Shares

ಬೆಂಗಳೂರು : ಎಲ್ಲರೂ ಒಂದಾಗಿ ಭಾರತದ ಭವಿಷ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲಾ ರಾಜಕೀಯ ಬದಿಗೊತ್ತಿ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಬೆಂಬಲ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಡಿದ್ದು ಲೋಕಸಭಾ ವಿಶೇಷ ಅಧಿವೇಶನ ನಡೆಯುತ್ತಿದೆ. ಅತ್ಯಂತ ಸಂತೋಷದಿಂದ ಪಾರ್ಲಿಮೆಂಟ್ ನೋಡುತ್ತಿದ್ದೇವೆ. ಕ್ರಾಂತಿಕಾರಿಯಾಗಿರುವ ಮಹಿಳಾ ಮೀಸಲಾತಿ ಮತ್ತು ಡಿ ಲಿಮಿಟೇಷನ್ ವಿಚಾರ ಚರ್ಚೆಗೆ ಬರ್ತಿದೆ. ಅಂಬೇಡ್ಕರ್ ಅವರು ಹಿಂದು ಕೋಡ್ ಬಿಲ್ ತಂದಾಗ ಎಲ್ಲಾ ಮಹಿಳೆಯರಿಗೆ ಮೀಸಲಾತಿ ನೀಡಿದ್ದರು. ಅಂಬೇಡ್ಕರ್ ಅವರ ಚಿಂತನೆಯಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಚಿಂತನೆಯಾಗಿದೆ.

ಕಾಂಗ್ರೆಸ್‌ನ ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ‌ ಅವರ ಅಪೇಕ್ಷೇ ಕೂಡ ಇದಾಗಿತ್ತು. ಎಲ್ಲರೂ ಒಂದಾಗಿ ಭಾರತದ ಭವಿಷ್ಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಅನ್ನುವುದು ಎಲ್ಲರ ಅಪೇಕ್ಷೆ. ಎಲ್ಲಾ ರಾಜಕೀಯ ಬದಿಗೊತ್ತಿ ಮಹಿಳಾ ಮೀಸಲಾತಿ ವಿಧೆಯಕಕ್ಕೆ ಬೆಂಬಲ ಕೊಡಿ ಎಂದು ವಿಪಕ್ಷಗಳಿಗೆ ಕರೆ ಕೊಡುತ್ತೇನೆ. ಇಂತಹ ಐತಿಹಾಸಿಕ ವಿಧೇಯಕ ಬರುವ ಸಂಧರ್ಭದಲ್ಲಿ ಭಾಗಿಯಾಗುವ ಅದೃಷ್ಟ ನಮ್ಮದು ಎಂದು ಹೇಳಿದರು.

ಕಾಂಗ್ರೆಸ್ ಬೆಲೆ ತೆರಲಿದೆ – ಸರ್ಕಾರಿ ನೌಕರಿಗಾಗಿ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಸರ್ಕಾರ ಪ್ರಕರಣ ದಾಖಲಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸರ್ಕಾರಿ ನೌಕರಿ ಬೇಡಿಕೆ ಇಟ್ಟು ಕಳೆದ ವರ್ಷದಿಂದ ಆಂದೋಲನ ನಡೆಯುತ್ತಿದೆ. ಅದು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಕರ್ನಾಟಕ ಸರ್ಕಾರ ಯುವಕರಿಗೆ ಮೋಸ ಮಾಡಿದೆ. ಮೊದಲ ಬಾರಿ ಮುಷ್ಕರ ಮಾಡಿದಾಗ ಸಿಎಂ, ಡಿಸಿಎಂ ಒಂದು ತಿಂಗಳೊಳಗೆ ನೋಟಿಫಿಕೇಷನ್ ಹೊರಡಿಸುತ್ತೇವೆ‌ ಅಂದರು. ಈಗ ನೋಟಿಫಿಕೇಷನ್‌ಗೆ ಕಿಮ್ಮತ್ತು ಇಲ್ಲದಂತಾಗಿದೆ. ಈಗ ಒಳ ಮೀಸಲಾತಿ ವಿಚಾರ ತಂದಿದ್ದಾರೆ.

ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಅವಕಾಶ ಕೊಡುತ್ತಿಲ್ಲ. ಈ ಸರ್ಕಾರ ಸಂವಿಧಾನ ವಿರೋಧಿಯಾಗಿದೆ. ಸಂವಿಧಾನ ಮತ್ತು ಅದರ ಆಶಯ ನಾಶ ಮಾಡಲು ಇದೆ. ಜನ ವಿರೋಧಿ ಮತ್ತು ಮಾತಿಗೆ ತಪ್ಪಿದ ಸರ್ಕಾರವಾಗಿದೆ. ಈಗ ಪೊಲೀಸರು ಬಂಧನ ಮಾಡಿ ತಡೆಯಬಹುದು. ಕಾಂಗ್ರೆಸ್ ಸರ್ಕಾರ ಭವಿಷ್ಯದಲ್ಲಿ ದೊಡ್ಡ ಬೆಲೆ ತೆರಬೇಕಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ಕಷ್ಟದ ದಿನಗಳು ಬರಲಿವೆ – ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಪ ಸಂಖ್ಯಾತ ನಾಯಕರ ವಿಚಾರದಲ್ಲಿ ನಡೆಯುತ್ತಿರುವ ಗೊಂದಲದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಯಾವ ಸಮುದಾಯಗಳನ್ನು ಓಲೈಸಿ, ಮತ ಬ್ಯಾಂಕಾಗಿ ಪರಿವರ್ತನೆ ಮಾಡಿಕೊಂಡಿದ್ದರು. ಅವೆಲ್ಲಾ ಸಮುದಾಯ ಭ್ರಮನಿರಸವಾಗಿವೆ. ಅಲ್ಪಸಂಖ್ಯಾತರ ನಾಯಕರ ಪ್ರಶ್ನೆ ಅಲ್ಲ, ಸಮುದಾಯದಲ್ಲೇ ಆಕ್ರೋಶ ಭುಗಿಲೆದ್ದಿದೆ.

ಅದು ಈ ನಾಯಕರ ಮೂಲಕ ಕಾಣಿಸುತ್ತಿದೆ. ಎಸ್ಸಿ ಎಸ್ಟಿ ಸಮುದಾಯಗಳು ಭ್ರಮ ನಿರಸವಾಗಿದ್ದು, ಬರುವ ದಿನದಲ್ಲಿ ಅವರಿಂದಲೂ ದೊಡ್ಡ ಪ್ರಮಾಣದ ಪ್ರತಿರೋಧ ಎದುರಿಸಬೇಕಾಗುತ್ತದೆ. ಅಹಿಂದ ಸಮುದಾಯ ಅಂತ ಸಿದ್ದರಾಮಯ್ಯ ರಾಜ್ಯಭಾರ ಮಾಡಿದರು. ಅವರಿಗೂ ಏನೂ ಮಾಡಿಲ್ಲ ಅಂತ ಗೊತ್ತಾಗಿದೆ. ಬರುವ ದಿನದಲ್ಲಿ ದಲಿತ ಸಮುದಾಯಗಳು ಕೂಡ ಕಾಂಗ್ರೆಸ್‌ಗೆ ಪಾಠ ಕಲಿಸಲಿವೆ. ಸಿಎಂ ಸಿದ್ದರಾಮಯ್ಯ ತನ್ನ ಸ್ಥಾನ ಉಳಿಸಿಕೊಳ್ಳಲು, ಡಿಸಿಎಂ ಡಿ ಕೆ ಶಿವಕುಮಾರ ಪದವಿ ಪಡೆಯಲು ಕುರ್ಚಿ ಕಚ್ಚಾಟ ನಡೆಯುತ್ತಿದೆ. ಇವೆಲ್ಲಾ ಬೇರ ಪರಿಣಾಮ‌ ಬೀರಲಿದೆ. ಬರುವ ದಿನದಲ್ಲಿ ಕಷ್ಟದ ದಿನಗಳು ಕಾಣಲಿದೆ ಎಂದು ಹೇಳಿದರು.

ಹಿಡಿತ ಕಳೆದುಕೊಂಡ ಸಿಎಂ – ಕಾಂಗ್ರೆಸ್ ಶಾಸಕರ ದೆಹಲಿ ಪೆರೇಡ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೇನು ತೋರುಸುತ್ತಿದೆ ಅಂದರೆ, ಸಿಎಂ ತಮ್ಮ ಸಚಿವ ಸಂಪುಟ ಸದಸ್ಯರ ಮೇಲೆ ಮತ್ತು ಶಾಸಕರ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಅತಿ ದೀರ್ಘ ಕಾಲ ಆಡಳಿತ ಮಾಡಿರು ಸಿಎಂ. ಅವರ ಶಾಸಕರು ಅವರ ನಾಯಕತ್ವ ಮೀರಿ ಅವರ ವಿರುದ್ಧ ಹೊರಟಿದ್ದಾರೆ. ಇಷ್ಟು ಸೀನಿಯರ್ ಆಗಿ ತಮ್ಮ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ.

ಇದರ ಹಿಂದೆ ಮುಖ್ಯಮಂತ್ರಿಗಳೇ ಇದ್ದಾರೆ ಎನ್ನುವ ಅಭಿಪ್ರಾಯವೂ ಇದೆ. ಯಾಕಂದ್ರೆ ಉಪ ಮುಖ್ಯಮಂತ್ರಿಗಳು ಶಾಸಕರಿಗೆ ವಾರ್ನಿಂಗ್ ನೀಡಿದ್ದಾರೆ. ಸಂಪುಟ ಪುನಾರಚನೆ ಆದರೆ ನಾಯಕತ್ವ ತೀರ್ಮಾನ ಮುಂದೆ ಹೋಗಲಿದೆ ಅಂತ. ಡಿಸಿಎಂ ಡಿ.ಕೆ. ಶಿವಕುಮಾರ ವಾರ್ನಿಂಗ್ ನಿಡೀದ್ದಾರೆ. ಈ ಸಂಘರ್ಷ ಇಲ್ಲಿಗೆ ನಿಲ್ಲಲ್ಲ. ಕಾಂಗ್ರೆಸ್ ಪಕ್ಷ ಬರುವ ದಿನದಲ್ಲಿ ಅಲ್ಲೋಲ ಕಲ್ಲೋಲ ಆಗಲಿದೆ ಎಂದು ಭವಿಷ್ಯ ನುಡಿದರು.

0 Shares

By admin

Leave a Reply

Your email address will not be published. Required fields are marked *