ಬೆಂಗಳೂರು : ಮದ್ದೂರು ಮೂಲದ ಯುವ ಉದ್ಯಮಿ ಕಿರಣ್ ಎಂಬಾತನು ಮೆಗೇಂಟಾ ಟ್ರಾವಲ್ಸ್ ಎಂಬ ಹೆಸರಿನಲ್ಲಿ ಬೆಂಗಳೂರಿನ ಕೆಂಗೇರಿಯಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ಮತ್ತು ಸಿನೆಮಾ ಕ್ಷೇತ್ರದವರಿಗೆ ಸೇರಿದಂತೆ ಇತರರಿಗೆ ವಾಹನಗಳನ್ನು ದಿನ, ವಾರ ಮತ್ತು ತಿಂಗಳ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿದ್ದನು. ತಾನೇ ಖುದ್ದಾಗಿ ಹತ್ತಕ್ಕೂ ಹೆಚ್ಚು ವಾಹನಗಳನ್ನು ಖರೀದಿಸಿಸುವುದರ ಜೊತೆಗೆ ತನ್ನ ಪರಿಚಯಸ್ಥರ ಮತ್ತು ಇತರೆ ಉದ್ಯಮಿಗಳಿಂದ ಸುಮಾರು ಹದಿನೈದು ವಾಹನಗಳನ್ನು ಬಾಡಿಗೆಗೆ ಪಡೆದು ಟ್ರಾವಲ್ಸ್ ಉದ್ಯಮವನ್ನು 2020ರಿಂದ ನಡೆಸುತ್ತಿದ್ದನು.
ಕೆಲವು ಕಿಡಿಗೇಡಿಗಳು ಕಿರಣ್ ಏಳಿಗೆಯನ್ನು ತಾಳಲಾರದೆ, ಅವನ ಉದ್ಯಮದಲ್ಲಿ ಪಾಲುದಾರರಾಗಬೇಕೆಂಬ ದುರುದ್ದೇಶದಿಂದ ಕಿರಣ್ ಬಗ್ಗೆ ಅಪಪ್ರಚಾರ ಮಾಡಿ, ಅವನಿಗೆ ಸಿಗುತ್ತಿದ್ದ, ಲಾಭದಲ್ಲಿ ಸಂಪೂರ್ಣ ಪಾಲನ್ನು ಪಡೆದು ಮಾಲೀಕನಾದ ಕಿರಣ್‌ಗೆ ಹೆದರಿಸಿ-ಬೆದರಿಸಿ, ಮೋಸ ಮಾಡುತ್ತಿದ್ದರು. ಇವರ ಬೆದರಿಕೆಗೆ ಹೆದರಿ ಸಂಪೂರ್ಣ ಲಾಭವನ್ನು ನೀಡಿ ಸ್ವಲ್ಪ ಮಟ್ಟಿಗೆ ಕಿರಣ್ ಸಾಲಗಾರನಾಗುತ್ತಾನೆ.
ಉದ್ಯಮವನ್ನು ಮುನ್ನೆಡೆಸಲು ಹಿಂಸಿಸುತ್ತಿದ್ದ, ಕಿಡಿಗೇಡಿಗಳ ವಾಹನಗಳನ್ನು ಹಿಂದಿರುಗಿಸಿ, ಇತರರಿಂದ ವಾಹನಗಳನ್ನು ಪಡೆದು ಬಾಡಿಗೆಗೆ ನೀಡುತ್ತಿದ ಸಂದರ್ಭದಲ್ಲಿ ಕೆಂಗೇರಿಯ ಬಾರ್ ಕ್ಯಾಶಿಯರ್ ಮಧು ಸಿ.ಎಂ KA-05/AJ-8213 ಸಂಖ್ಯೆಯ ಇನ್ನೋವ ವಾಹನವನ್ನು ಮತ್ತು ಬ್ಯಾಡ್ರಳ್ಳಿ ಕಿರಣ್ ಎಂಬಾತನ್ನು ಪಾಲುದಾರಿಕೆ ನೀಡಲಿಲ್ಲ ಎಂಬ ಕಾರಣದಿಂದ ಸಮಾಜ ಘಾತುಕ ಶಕ್ತಿಗಳ ಸಹಾಯದಿಂದ ಕಛೇರಿಗೆ ಬೀಗವನ್ನು ಹಾಕಿ KA-15/A-8403 ಸಂಖ್ಯೆಯ ಎರ್ಟಿಗಾ ವಾಹನವನ್ನು ಬಲವಂತದಿಂದ ಚಾಲಕನಿಂದ ಕಿತ್ತುಕೊಂಡು ಹೋಗಿರುತ್ತಾನೆ.

ಮೇಲಿನ ವ್ಯಕ್ತಿಗಳೊಂದಿಗೆ ಶಾಮೀಲಾಗಿ ದೀಕ್ಷಿತ್ ಎ.ಆರ್ ಮತ್ತು ದರ್ಶನ್ ಎ.ಆರ್ ಎಂಬ ಸಹೋದರರು ಅವಾಚ್ಯ ಶಬ್ದಗಳಿಂದ ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಕಿರಣ್ ಬಗ್ಗೆ ನಿಂದಿಸಿ ತಮ್ಮ ಸಮುದಾಯಕ್ಕೆ ಸೇರಿದ ಕಿರಣ್ ಬಗ್ಗೆ ತಮ್ಮ ಸಮುದಾಯಕ್ಕೆ ಸೇರಿದ ವಾಟ್ಸಪ್ ಗುಂಪುಗಳಲ್ಲಿ ಅಸಭ್ಯವಾಗಿ ಧ್ವನಿ ಮತ್ತು ಚಿತ್ರ ಸಂದೇಶಗಳನ್ನು ಕಳಿಸಿ ಬಹಳಷ್ಟು ಮಾನ ಹಾನಿ ಮಾಡಿದ್ದಾರೆ.
ಇವುಗಳಿಂದ ಮಾನಸಿಕ ಒತ್ತಡಗೊಳಗಾಗಿ ಸ್ನೇಹಿತರ ಸಹಾಯ ಕೋರಿ ಮೈಸೂರಿಗೆ ಬಂದು ನಿರಾಸೆಗೊಂಡ ಕಿರಣ್ ಮೈಸೂರು ವಿಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಷ ಸೇವಿಸಿ, ಆತ್ಮಹತ್ಯೆಗೆ ಪ್ರಯತ್ನ ಮಾಡಿದರುವ ಘಟನೆ ವಿಜಯನಗರದ ಸ್ಮಶಾನದ ಬಳಿ ನಡೆದಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಇದರ ಸಂಬಂಧ ಕೇಸ್ ದಾಖಲಾಗಿದೆ. ಪ್ರಸ್ತುತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರು ಮುಂದಿನ 48 ಗಂಟೆಗಳ ಕಾಲ ಕಿರಣ್ ಜೀವದ ಬಗ್ಗೆ ಏನನ್ನು ತಿಳಿಸಲಾಗುವುದಿಲ್ಲ ಎಂದು ಹೇಳಿದಾರೆ ಎಂದು ತಿಳಿದುಬಂದಿದೆ.
ಕಾನೂನಿಬಾಹಿರವಾಗಿ ಒತ್ತಡ ಹೇರಿ ಅಕ್ರಮದಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಮತ್ತು ಅತ್ಯುತಮವಾಗಿ ನಡೆಯುತ್ತಿದ ಟ್ರಾವಲ್ಸ್ ಉದ್ಯಮದಲ್ಲಿ ಪಾಲುದಾರಿಕೆ ಪಡೆಯಬೇಕೆಂಬ ದುರುದೇಶದಿಂದ ಅಮಾಯಕ ನವ ಉದ್ಯಮಿ ಕಿರಣ್ ರವರಿಗೆ ಮಾನಸಿಕ ಹಿಂಸೆ ನೀಡಿ ಸಾಯಲು ಪ್ರಚೋದನೆ ನೀಡಿ ಆತ್ಮಹತ್ಯೆಗೆ ಕಿಡಿಗೇಡಿಗಳು ಕಾರಣಭೂತರಾಗಿದ್ದಾರೆ ಎಂದು ಕಿರಣ್ ಸಂಬಂಧಿಕರು ಮತ್ತು ಸ್ನೇಹಿತರು ಮಾಧ್ಯಮದವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
