ತುಮಕೂರು : ಆರ್ಎಸ್ಎಸ್ ನೊಂದಣಿಯಾಗದೇ ಅಕ್ರಮ ಹಣ ಸಂಗ್ರಹದಲ್ಲಿ ತೊಡಗಿದೆ ಎಂಬ ಹೇಳಿಕೆ ವಿಚಾರದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ ಖರ್ಗೆ ಅವರು ಮೊದಲು ನಾನು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಪೂರ್ವದಲ್ಲಿ ಆರ್ ಎಸ್ ಎಸ್, ಅನೇಕ ನಾಯಕರ ಕೊಡುಗೆ ಅಪಾರ ಇದೆ. ಅದನ್ನು ಅರ್ಥಮಾಡಿಕೊಳ್ಳದೆ ಮಾತನಾಡುವ ನಿಮ್ಮ ಬಾಲಿಶವಾದ ಹೇಳಿಕೆ ನಿಮಗೆ ಶೋಭೆ ತರುವಂತದ್ದಲ್ಲ. ರಾಜ್ಯದಲ್ಲಿ ಮಂತ್ರಿ ಅನ್ನೊದನ್ನ ಮರೆತು ಇನ್ನೊಬ್ಬರ ಬಗ್ಗೆ ಗದಪ್ರಹಾರ ಮಾಡುವ ನಿಮ್ಮ ನಡವಳಿಕೆ ನಿಮಗೆ ಶೋಬೆ ತರುವಂತದ್ದಲ್ಲ, ಗೌರವ ಕೊಡುವುದಿಲ್ಲ ಎಂದರು.
ಒಂದು ಸತ್ಯ ಆರ್ಎಸ್ಎಸ್ ಇತಿಹಾಸ ನಿಮಗೆ ಗೊತ್ತಿದ್ರೆ ನೀವು ಈ ರೀತಿ ಮಾತಾಡ್ತಿರಲಿಲ್ಲ. ಆರ್ಎಸ್ಎಸ್ ಇರ್ಲಿಲ್ಲ ಅಂದ್ರೆ ನೀವು ಇರ್ತಿರಲಿಲ್ಲ, ನಿಮ್ಮ ಕುಟುಂಬನೇ ಇರ್ತಿರಲಿಲ್ಲ. ಎಲ್ಲೋ ಒಂದು ಕಡೆ ದಿಕ್ಕಾಪಾಲಾಗ್ತಿದ್ರಿ..ಇದರ ಬಗ್ಗೆ ಇತಿಹಾಸ ತಿಳಿದುಕೊಳ್ಳಿ. ಅದನ್ನು ಬಿಟ್ಟು ಇವತ್ತು ನೀವು ಮಾತನಾಡ್ತಿರೊದು ಗೌರವವಲ್ಲ, ನಾನು ಖಂಡಿಸುತ್ತೇನೆ.
ರಾಜ್ಯದ ಮಂತ್ರಿಯಾಗಿ ಜನರನ್ನ ಕತ್ತಲಕೊಣೆಯಲ್ಲಿಡೊದು, ಗೊಂದಲಸೃಷ್ಠಿ ಮಾಡೊದು ಗೌರವ ತರುವುದಿಲ್ಲ. ಇಂತಹ ಬಾಲಿಶ ಹೇಳಿಕೆ ಕೊಡುವ ಮುಂಚೆ ನಿಮ್ಮ ಇತಿಹಾಸ, ಕುಟುಂಬ ನಡೆದು ಬಂದ ದಾರಿ ತಿಳಿದುಕೊಂಡು ಹೆಜ್ಜೆ ಇಟ್ರೆ ಗೌರವ ಇರುತ್ತದೆ. ಶಾಸಕರ ವಿದೇಶ ಪ್ರವಾಸ ವಿಚಾರದ ಬಗ್ಗೆ ಕಚ್ಚಾಡಿಕೊಂಡು ಅಡಳಿತ ಕುಸಿದು ಹೋಗಿದೆ, ಸರ್ಕಾರ ನಿರ್ಜೀವವಾಗಿದೆ. ಆ ನಿರ್ಲಿಪ್ತತೆಯನ್ನ ಮುಚ್ಚಿಕೊಳ್ಳಲು ಈ ರೀತಿ ಮಾಡ್ತಿದ್ದಾರೆ.
ಒಂದಂತೂ ಸತ್ಯ, ಶಾಸಕರ ಹೋಗ್ತಾರೆ ಅನ್ನೊದಕ್ಕಿಂತ ಮಾಧ್ಯಮ ವನ್ನ ಚೆನ್ನಾಗಿ ಉಪಯೋಗಿಕೊಳ್ತಿದಾರೆ. ಇವರೆಲ್ಲರಿಗೂ ಡಾಕ್ಟರೇಟ್ ಕೊಡಬೇಕು ಅಂತಾ ಕಾಣಿಸ್ತದೆ. ಜನರನ್ನು ಬೇರೆ ದಾರಿಗೆ ಕೊಂಡೊಯ್ದು, ಜನರ ಸಂಕಷ್ಟಕ್ಕೆ ಸ್ಪಂದಿಸದೇ, 3 ವರ್ಷ ಕಳೆಯುತ್ತಾ ಬರುತ್ತಿದೆ. ಇನ್ನೂ ಜನ ಏನು ಎಂಬುದನ್ನ ಅರ್ಥ ಮಾಡಿಕೊಳ್ಳದೆ ನಡೆದುಕೊಳ್ತಿರೋ.., ನಿಮ್ಮ ನೀಚತನ ಇದೆಯಲ್ಲಾ. ಇದು ಇನ್ಮುಂದೆಯಾದ್ರೂ ಬಿಡಬೇಕು ಎಂದರು.
