0 Shares

ಬೆಂಗಳೂರು : ಇಂದು ಒಟ್ಟು 1823 ಮಂದಿ (RWAs) ಸಹಯೋಗದೊಂದಿಗೆ 42 ಪ್ಲಾಗಿಂಗ್ ಕಾರ್ಯಕ್ರಮಗಳ ಮೂಲಕ ಒಟ್ಟು 35.65 ಟನ್ ತ್ಯಾಜ್ಯ ತೆರವು 81 ಖಾಲಿ ನಿವೇಶನಗಳಲ್ಲಿ ಸ್ವಚ್ಛತಾ ಕಾರ್ಯ, ನಗರವನ್ನು ಸ್ವಚ್ಛ, ಸುಂದರ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವ ಉದ್ದೇಶದಿಂದ ಹಾಗೂ ನಾಗರಿಕರಲ್ಲಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ರವರ ಮಾರ್ಗದರ್ಶನದಲ್ಲಿ ನಗರ ಪಾಲಿಕೆಯ 7 ವಿಭಾಗಗಳಲ್ಲಿ ಇಂದಿನಿಂದ ಒಂದು ವಾರದ ಕಾಲ “ಸುಂದರ ನಗರ ಪಾಲಿಕೆಗಾಗಿ ಸಾಮೂಹಿಕ ಮಹಾ ಸ್ವಚ್ಛತಾ ಅಭಿಯಾನ”ವನ್ನು ಏರ್ಪಡಿಸಲಾಗಿದೆ.

ಇಂದು ಒಟ್ಟು 1823 ಮಂದಿ ಯಿಂದ (RWAs) ಸಹಯೋಗದೊಂದಿಗೆ 42 ಪ್ಲಾಗಿಂಗ್ ಕಾರ್ಯಕ್ರಮಗಳ ಮೂಲಕ ಒಟ್ಟು 35.65 ಟನ್ ತ್ಯಾಜ್ಯ ತೆರವು..,

  • ಬ್ಯಾಟರಾಯನಪುರ ವಿಭಾಗದಲ್ಲಿ 07 ವಾರ್ಡ್‌ಗಳಿಂದ ಸುಮಾರು 350–400 ಮಂದಿ ಭಾಗವಹಿಸಿದ್ದು, ಕ್ರಮಬದ್ಧ ಪ್ಲಾಗಿಂಗ್ ಮತ್ತು ಸ್ವಚ್ಛತಾ ಕಾರ್ಯಗಳ ಮೂಲಕ ಸುಮಾರು 3.50 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಈ ಅಭಿಯಾನದಲ್ಲಿ ಲಿಟ್ಟರ್ ಪಿಕ್ಕಿಂಗ್, ಬ್ಲಾಕ್ ಸ್ಪಾಟ್ ನಿರ್ಮೂಲನೆ ಮತ್ತು ಸಾರ್ವಜನಿಕ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಯಿತು.
  • ದಾಸರಹಳ್ಳಿ ವಿಭಾಗದಲ್ಲಿ 4 ವಾರ್ಡ್‌ಗಳಿಂದ 5 ಪ್ಲಾಗಿಂಗ್ ಕಾರ್ಯಕ್ರಮಗಳ ಮೂಲಕ ಒಟ್ಟು 179 ಮಂದಿ ಭಾಗವಹಿಸಿದ್ದು, ಸುಮಾರು 3.25 ಟನ್ ತ್ಯಾಜ್ಯವನ್ನು ಸಂಗ್ರಹಿಸಿ ತೆರವುಗೊಳಿಸಲಾಯಿತು.
  • ಹೆಬ್ಬಾಳ ವಿಭಾಗದ 8 ವಾರ್ಡ್‌ಗಳಿಂದ ಒಟ್ಟು 320 ಮಂದಿ ಭಾಗವಹಿಸಿದ್ದು, ಸುಮಾರು 2.5 ಟನ್ ತ್ಯಾಜ್ಯವನ್ನು ಸಂಗ್ರಹಿಸಿ ತೆರವುಗೊಳಿಸಲಾಗಿದ್ದು, ಬ್ಲಾಕ್ ಸ್ಪಾಟ್ ಕಡಿತ ಹಾಗೂ ಪರಿಸರ ಸ್ವಚ್ಛತೆಯನ್ನು ಬಲಪಡಿಸುವ ಕಾರ್ಯ ಕೈಗೊಳ್ಳಲಾಯಿತು.
  • ಪುಲಿಕೇಶಿನಗರ ವಿಭಾಗದ 7 ವಾರ್ಡ್‌ಗಳಿಂದ ಸುಮಾರು 250 ಮಂದಿ ಭಾಗವಹಿಸಿದ್ದು, ಸುಮಾರು 10 ಟನ್ ತ್ಯಾಜ್ಯವನ್ನು ಪ್ಲಾಗಿಂಗ್ ಮತ್ತು ಸ್ವಚ್ಛತಾ ಕಾರ್ಯಗಳ ಮೂಲಕ ತೆರವುಗೊಳಿಸಲಾಯಿತು. ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ನಗರ ಸೌಂದರ್ಯ ವೃದ್ಧಿಗೆ ಆದ್ಯತೆ ನೀಡಲಾಯಿತು.
  • ಆರ್.ಆರ್. ನಗರ ವಿಭಾಗದ 3 ವಾರ್ಡ್‌ಗಳಿಂದ ಸುಮಾರು 75 ಮಂದಿ ಭಾಗವಹಿಸಿದ್ದು, ಸುಮಾರು 2 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಬ್ಲಾಕ್ ಸ್ಪಾಟ್ ನಿರ್ಮೂಲನೆ ಮತ್ತು ಸಾರ್ವಜನಿಕ ಸ್ವಚ್ಛತೆ ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು.
  • ಯಲಹಂಕ ವಿಭಾಗದ 4 ವಾರ್ಡ್‌ಗಳಿಂದ ಸುಮಾರು 250 ಮಂದಿ ಭಾಗವಹಿಸಿದ್ದು, ಕ್ರಮಬದ್ಧ ಪ್ಲಾಗಿಂಗ್ ಮತ್ತು ಸ್ವಚ್ಛತಾ ಕಾರ್ಯಗಳ ಮೂಲಕ ಸುಮಾರು 4.6 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
  • ಸರ್ವಜ್ಞನಗರ ವಿಭಾಗದ 8 ವಾರ್ಡ್‌ಗಳಿಂದ ಸುಮಾರು 430 ಮಂದಿ ಭಾಗವಹಿಸಿದ್ದು. ಕ್ರಮಬದ್ಧ ಪ್ಲಾಗಿಂಗ್ ಮತ್ತು ಸ್ವಚ್ಛತಾ ಕಾರ್ಯಗಳ ಮೂಲಕ ಸುಮಾರು 6.8 ಟನ್ ತ್ಯಾಜ್ಯವನ್ನು ಸಂಗ್ರಹಿಸಿ ತೆರವುಗೊಳಿಸಲಾಯಿತು.

ಇಂದು ಬೆಳಗ್ಗೆಯಿಂದ ಸಂಜೆಯವರೆಗೆ, ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಿಭಾಗಗಳಲ್ಲಿ ವ್ಯಾಪಕ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಈ ಅಭಿಯಾನದಡಿ ರಸ್ತೆ ಬದಿಯ ತ್ಯಾಜ್ಯ, ಸಿಲ್ಟ್, ಡೆಬ್ರಿಸ್, ಮರದ ರೆಂಬೆ-ಕೊಂಬೆಗಳು ತೆರವುಗೊಳಿಸುವುದು, ಚರಂಡಿಗಳ ಸ್ವಚ್ಛತೆ ಹಾಗೂ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಗಳನ್ನು ಸಮಗ್ರವಾಗಿ ನಡೆಸಲಾಯಿತು.

81 ಖಾಲಿ ನಿವೇಶನಗಳಲ್ಲಿ ಸ್ವಚ್ಛತಾ ಕಾರ್ಯ – ನಗರ ಪಾಲಿಕೆಯ 7 ವಿಭಾಗಗಳಿಂದ ಒಟ್ಟು 81 ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲಾಗಿದ್ದು, ದಾಸರಹಳ್ಳಿ – 15, ಹೆಬ್ಬಾಳ – 8, ಬ್ಯಾಟರಾಯನಪುರ – 11, ಸರ್ವಜ್ಞನಗರ – 17, ಪುಲಿಕೇಶಿನಗರ – 8, ಆರ್.ಆರ್. ನಗರ – 10 ಹಾಗೂ ಯಲಹಂಕ – 12 ಖಾಲಿ ನಿವೇಶನಗಳಲ್ಲಿ ಸ್ವಚ್ಛತಾ ಕಾರ್ಯಗಳು ನಡೆದವು.

42 ಪ್ಲಾಗಿಂಗ್ ಕಾರ್ಯಕ್ರಮಗಳು – 7 ವಿಭಾಗಗಳಿಂದ ಒಟ್ಟು 42 ಪ್ಲಾಗಿಂಗ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 1823 ಮಂದಿ RWAs ಸದಸ್ಯರು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿದರು. ಕ್ರಮಬದ್ಧ ಪ್ಲಾಗಿಂಗ್ ಹಾಗೂ ಲಿಟ್ಟರ್ ಪಿಕ್ಕಿಂಗ್ ಕಾರ್ಯಗಳ ಮೂಲಕ ಒಟ್ಟು ಸುಮಾರು 35.65 ಟನ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ.

ಈ ಮಹಾ ಸ್ವಚ್ಛತಾ ಅಭಿಯಾನದಲ್ಲಿ ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್ ಮತ್ತು ಪಲ್ಲವಿ ರವರ ನೇತೃತ್ವದಲ್ಲಿ DGM ರಶ್ಮಿ ಹಾಗೂ ಎಲ್ಲಾ ವಿಭಾಗದ AGM ಗಳು ಸೇರಿದಂತೆ ಪೌರಕಾರ್ಮಿಕರು, ಮೇಲ್ವಿಚಾರಕರು, ಮಾರ್ಷಲ್ ಗಳು, ಇಂಜಿನಿಯರಿಂಗ್ ಸಿಬ್ಬಂದಿ, ಆರೋಗ್ಯ ವಿಭಾಗ, ಘನತ್ಯಾಜ್ಯ ನಿರ್ವಹಣಾ ವಿಭಾಗ, ರಸ್ತೆ ಮೂಲಸೌಕರ್ಯ (RI) ವಿಭಾಗ, ತೋಟಗಾರಿಕೆ ವಿಭಾಗ, ಅರಣ್ಯ ವಿಭಾಗ, ಕೆರೆಗಳ ನಿರ್ವಹಣಾ ವಿಭಾಗ, ಟ್ರಾಫಿಕ್ ಪೊಲೀಸ್ ಹಾಗೂ ಸ್ಥಳೀಯ ಸಂಘಟನೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರು.

ಈ ಅಭಿಯಾನದ ಮೂಲಕ ಗಾರ್ಬೇಜ್ ವಲ್ನರಬಲ್ ಪಾಯಿಂಟ್‌ಗಳು (GVP), ಬ್ಲಾಕ್ ಸ್ಪಾಟ್‌ಗಳ ನಿರ್ಮೂಲನೆ, ಸಾರ್ವಜನಿಕ ಸ್ಥಳಗಳ ಸುಂದರೀಕರಣ ಹಾಗೂ ಪರಿಸರ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗಿದೆ. ನಾಗರಿಕರ ಸಹಭಾಗಿತ್ವದೊಂದಿಗೆ ಸ್ವಚ್ಛ, ಹಸಿರು ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ಬೆಂಗಳೂರು ಉತ್ತರ ನಗರ ಪಾಲಿಕೆ ಬದ್ಧವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

0 Shares

By admin

Leave a Reply

Your email address will not be published. Required fields are marked *