0 Shares

ಬೆಂಗಳೂರು : ನಗರವನ್ನು ಸ್ವಚ್ಛ, ಸುಂದರ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವ ಉದ್ದೇಶದಿಂದ ಹಾಗೂ ನಾಗರಿಕರಲ್ಲಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ರವರ ಮಾರ್ಗದರ್ಶನದಲ್ಲಿ ನಗರ ಪಾಲಿಕೆಯ 7 ವಿಭಾಗಗಳಲ್ಲಿ 01.03.2026 ರಿಂದ ಒಂದು ವಾರದ ಕಾಲ “ಸುಂದರ ನಗರ ಪಾಲಿಕೆಗಾಗಿ ಸಾಮೂಹಿಕ ಮಹಾ ಸ್ವಚ್ಛತಾ ಅಭಿಯಾನ”ವನ್ನು ಏರ್ಪಡಿಸಲಾಗಿದೆ.

ನಾಲ್ಕನೇ ದಿನವಾದ ಇಂದು, ದಿ:04.03.2026ರಂದು ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಟ್ಟು 818 ಮಂದಿ (RWAs, ಸಾರ್ವಜನಿಕರು ಹಾಗೂ ಸ್ವಯಂ ಸೇವಕರ) ಸಹಯೋಗದೊಂದಿಗೆ ಎಲ್ಲಾ ವಾರ್ಡ್ ಗಳಲ್ಲಿ ಮರದ ಹಸಿರು ಹಾಗೂ ಒಣ ಎಲೆಗಳನ್ನು ತೆರವು ಗೊಳಿಸುವ ಕಾರ್ಯಕ್ರಮಗಳ ಮೂಲಕ ಒಟ್ಟು 104 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ.

ಯಲಹಂಕ ವಿಭಾಗದ ವಿವಿಧ ವಾರ್ಡ್ ಗಳಿಗೆ ನಗರ ಪಾಲಿಕೆ ಆಯುಕ್ತರು ಭೇಟಿ ನೀಡಿ, ಎಲೆಗಳ ತೆರವು ಕಾರ್ಯವನ್ನು ಪರಿಶೀಲನೆ ಮಾಡಿದರು. ಅಲ್ಲಿನ ಸ್ಥಳೀಯ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಿಭಾಗಗಳಲ್ಲಿ ವ್ಯಾಪಕ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಯಿತು. ಈ ಅಭಿಯಾನದಡಿ ಎಲ್ಲಾ ವಾರ್ಡ್ ಗಳಲ್ಲಿ ಮರದ ಹಸಿರು ಹಾಗೂ ಒಣ ಎಲೆಗಳನ್ನು ತೆರವು ಗೊಳಿಸುವ ಸ್ವಚ್ಛತಾ- ಕಾರ್ಯ ನಿರ್ವಹಿಸಲಾಯಿತು.

  • ಬ್ಯಾಟರಾಯನಪುರ ವಿಭಾಗ-07 ವಾರ್ಡ್ – 285 ಮಂದಿ- 24 ಟನ್ ತ್ಯಾಜ್ಯ ತೆರವು
  • ದಾಸರಹಳ್ಳಿ ವಿಭಾಗದಲ್ಲಿ-04 ವಾರ್ಡ್ -40 ಮಂದಿ 30 ಟನ್ ತ್ಯಾಜ್ಯ ತೆರವು
  • ಹೆಬ್ಬಾಳ ವಿಭಾಗ- 8 ವಾರ್ಡ್ -250 ಮಂದಿ 22 ಟನ್ ತ್ಯಾಜ್ಯ ತೆರವು
  • ಪುಲಿಕೇಶಿನಗರ ವಿಭಾಗ- 7 ವಾರ್ಡ್ – 31 ಮಂದಿ- 1.8 ಟನ್ ತ್ಯಾಜ್ಯ ತೆರವು
  • ಆರ್.ಆರ್. ನಗರ ವಿಭಾಗ- 3 ವಾರ್ಡ್ – 65 ಮಂದಿ – 1 ಟನ್ ತ್ಯಾಜ್ಯ ತೆರವು
  • ಯಲಹಂಕ ವಿಭಾಗ- 4 ವಾರ್ಡ್ – 80 ಮಂದಿ – 21 ಟನ್ ತ್ಯಾಜ್ಯ ತೆರವು
  • ಸರ್ವಜ್ಞನಗರ ವಿಭಾಗ- 8 ವಾರ್ಡ್ – 67 ಮಂದಿ – 3.7 ಟನ್ ತ್ಯಾಜ್ಯ ತೆರವು

ಈ ಮಹಾ ಸ್ವಚ್ಛತಾ ಅಭಿಯಾನದಲ್ಲಿ ನಗರ ಪಾಲಿಕೆಯ ಆಯುಕ್ತರು ಆದ ಶ್ರೀ ಪೊಮ್ಮಲ ಸುನೀಲ್‍ ಕುಮಾರ್, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್ ಮತ್ತು ಪಲ್ಲವಿ ರವರ ಮಾರ್ಗದರ್ಶನದಲ್ಲಿ DGM ರಶ್ಮಿ ಹಾಗೂ ಎಲ್ಲಾ ವಿಭಾಗದ AGM ಗಳು, ಆರೋಗ್ಯ ಪರಿವೀಕ್ಷಕರು, ಮಾರ್ಷಲ್ ಗಳು, ಮೇಲ್ವಿಚಾರಕರು, ಲಿಂಕ್ ವರ್ಕರ್ಸ್ ಮತ್ತು ಪೌರಕಾರ್ಮಿಕರು ಸೇರಿದಂತೆ ನಗರ ಪಾಲಿಕೆಯ ಎಲ್ಲಾ ವಿಭಾಗದ ಸಿಬ್ಬಂದಿಗಳೊಂದಿಗೆ ಸ್ವಯಂ ಸೇವಕರು ಹಾಗೂ ಸ್ಥಳೀಯ ಸಂಘಟನೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರು.

0 Shares

By admin

Leave a Reply

Your email address will not be published. Required fields are marked *