0 Shares

ಬೆಂಗಳೂರು : ಭೀಮಣ್ಣ ಖಂಡ್ರೆ ಜೀ ಕರುನಾಡು ಕಂಡ ಗಾಂಧೀಜಿ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರರಾದ ಭೀಮಣ್ಣ ಖಂಡ್ರೆ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಹೋಟೆಲ್ ಮೌರ್ಯ ಸಭಾಂಗಣದಲ್ಲಿ ಲೋಕನಾಯಕ ಶತಾಯುಷಿ ಡಾ||ಭೀಮಣ್ಣ ಖಂಡ್ರೆ ರವರ ನುಡಿನಮನ ಕಾರ್ಯಕ್ರಮ ಫೆಬ್ರವರಿ 14ರಂದು ಅರಮನೆ ಮೈದಾನ ಗಾಯಿತ್ರಿ ವಿಹಾರ ಆಯೋಜಿಸಲಾಗಿದೆ ಇದರ ಕುರಿತು ಪೂರ್ವಭಾವಿ ಸಭೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

*ಸ್ಸಾತಂತ್ರ್ಯ ಹೋರಾಟಗಾರರು ಶತಯುಷಿ ಕರ್ನಾಟಕ ಏಕೀಕರಣದ ಹೋರಾಟಗಾರರು ಆದ ಡಾ||ಭೀಮಣ್ಣ ಖಂಡ್ರೆ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಸಾಹಿತಿಗಳು ಕನ್ನಡಪರ ಹೋರಾಟಗಾರರು ಹಾಗೂ ಚಿಂತಕರು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ಮಾನ್ಯ ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿರವರು, ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ರವರು ಮತ್ತು ಎಂ.ಇ.ಐ. ಅಧ್ಯಕ್ಷರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ರವರು, ಕೆಪಿಸಿಸಿ ವಕ್ತಾರರಾದ ಎಂ ಲಕ್ಷ್ಮಣ್, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಮಾಜಿ ಉಪಮಹಾಪೌರರಾದ ಬಿ.ಎಸ್.ಪುಟ್ಟರಾಜು, ಬಿ.ಎಂ.ಟಿ.ಸಿ ನಿಗಮ ಮಂಡಳಿ ಅಧ್ಯಕ್ಷರಾದ ವಿ.ಎಸ್.ಆರಾಧ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನಗರ ಅಧ್ಯಕ್ಷರಾದ ಜಿ.ಕೃಷ್ಣಪ್ಪ, ಮಾಜಿ ಪಾಲಿಕೆ ಸದಸ್ಯ ಬಿ.ಟಿ.ಶ್ರೀನಿವಾಸಮೂರ್ತಿ, ಸಾಹಿತಿಗಳಾದ ತಲಕಾಡು ಚಿಕ್ಕರಂಗೇಗೌಡ ರವರು ಶತಾಯುಷಿ ಭೀಮಣ್ಣ ಖಂಡ್ರೆರವರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪೂರ್ವಭಾವಿ ಸಭೆಗೆ ಚಾಲನೆ ನೀಡಿದರು.

ಸಚಿವರಾದ ರಾಮಲಿಂಗಾರೆಡ್ಡಿರವರು ಮಾತನಾಡಿ ಶಾಸಕರಾಗಿ ಮತ್ತು ಸಚಿವರಾಗಿ ಭೀಮಣ್ಣ ಖಂಡ್ರೆ ರವರು ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣವನ್ನು ಭೀಮಣ್ಣ ಖಂಡ್ರೆರವರು ಈ ಹಿಂದೆ ಸಾರಿಗೆ ಮಂತ್ರಿಗಳಾದದ್ದಾಗ ಗುದ್ದಲಿ ಪೂಜೆ ಮಾಡಿ ನೇರವೆರಿಸಿದ್ದರು.

ಭೀಮಣ್ಣ ಖಂಡ್ರೆರವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕಾರಣದಿಂದ ಬ್ರಿಟಿಷರು ಅವರ ಸಂಪತ್ತನ್ನು ಜಪ್ತಿ ಮಾಡಿದ್ದರು. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಬೀದರ್ ನಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಹೆಚ್ಚು ಶ್ರಮಪಟ್ಟಿದ್ದರಿಂದ ಇಂದಿಗೂ ಸಹ ಅಲ್ಲಿ ಕನ್ನಡ ಉಳಿಯಲು ಸಾಧ್ಯವಾಯಿತು. ಆರ್.ಎಸ್.ಎಸ್. ಮತ್ತು ವಿಶ್ವ ಹಿಂದೂ ಪರಿಷತ್ತು ನವರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ.

ಇಂತಹವರು ಇಂದು ದೇಶ ಭಕ್ತರು ಎಂದು ಹೊಗಳಿಸಿಕೊಳ್ಳುತ್ತಿದ್ದಾರೆ ಇದು ದುರಂತ. ಯಾವ ಸೋಷಿಯಲ್ ಮೀಡಿಯದಿಂದ ಪ್ರಚಾರವನ್ನು ಗಿಟ್ಟಿಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷಕ್ಕೆ ಅದೇ ಸೋಷಿಯಲ್ ಮೀಡಿಯ ಇಂದು ಬಿಜೆಪಿ ಪಕ್ಷದ ಬಂಡವಾಳವನ್ನು ಬಹಿರಂಗಗೊಳಿಸುತ್ತಿದೆ.

ನೆಹರು ರವರ ಆಡಳಿತದಲ್ಲಿ ಬೆಂಗಳೂರಿನಲ್ಲಿ ಹಲವಾರು ಕಾರ್ಖಾನೆಗಳು ಕೇಂದ್ರ ಸರ್ಕಾರದ ಸಂಸ್ಥೆಗಳು ಪ್ರಾರಂಭಿಸಿ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದರು. ಸಾವರ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ಕೊಡಲು ಕೇಂದ್ರ ಸರ್ಕಾರ ಚಿಂತನೆ ಮಾಡುತ್ತಿದೆ ಮುಂದೊಂದು ದಿನ ಗೊಡ್ಸೆ ರವರಿಗೆ ಭಾರತರತ್ನ ಕೊಡುವ ಯೋಚನೆ ಮಾಡಿದರು ಆಶ್ಚರ್ಯ ಪಡಬೇಕಾಗಿಲ್ಲ ಇದು ನಮ್ಮ ದೇಶದ ದುರಂತ ಎಂದರು,ಇಂದಿನ ಯುವಕರಿಗೆ ಕಾಂಗ್ರೆಸ್ ಪಕ್ಷದ ಸಾಧನೆ, ಯೋಜನೆಗಳನ್ನು ತಿಳಿಸಬೇಕು ಎಂದು ಹೇಳಿದರು.

ಶತಾಯುಷಿ ಭೀಮಣ್ಣ ಖಂಡ್ರೆ ರವರಿಗೆ ಕರ್ನಾಟಕ ರತ್ನ ಕೊಡಮಾಡಬೇಕು ಮಾನ್ಯ ಮುಖ್ಯಮಂತ್ರಿಗಳ ಬಳಿ ನಾವೆಲ್ಲರೂ ನಿಯೋಗದ ಮೂಲಕ ಮನವಿ ಮಾಡಿಕೊಳ್ಳೊಣ ಎಂದು ತಿಳಿಸುವ ಮೂಲಕ ಸಾಹಿತಿಗಳು ಹಾಗೂ ಚಿಂತಕರು ಕನ್ನಡಪರ ಹೋರಾಟಗಾರರಾದ ಶ್ರೀ ತಲಕಾಡು ಚಿಕ್ಕಾಂಗೆ ಗೌಡರು ಶತಾಯುಷಿ ಡಾಕ್ಟರ್ ಭೀಮಣ್ಣ ಖಂಡ್ರೆ ಜೀ ರವರ ಇತಿಹಾಸ ಹಾಗೂ ಹೋರಾಟದ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿ ಅವರ ಇತಿಹಾಸವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎ. ಆನಂದ್,ಜನಾರ್ಧನ್, ಎಂ.ಎ.ಸಲೀಮ್,ಜಿ.ಪ್ರಕಾಶ್, ಚಂದ್ರಶೇಖರ, ಕುಶಾಲ್ ಹಾರುವೇ ಗೌಡ, ಸುಂಕದಕಟ್ಟೆ ನವೀನ್,ಉಮೇಶ್, ಹೇಮರಾಜ್, ಒಬ್ಬಳೇಶ್, ಚಿನ್ನಿಪ್ರಕಾಶ್, ರಂಜಿತ್, ಪುಟ್ಟರಾಜು, ಪ್ರವೀಣ್ ರಾವ್, ನವೀನ್ ಸಾಯಿ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.

0 Shares

By admin

Leave a Reply

Your email address will not be published. Required fields are marked *