0 Shares

ನವದೆಹಲಿ : ದೆಹಲಿಯ 10 ಜನ್ ಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ನಾಯಕಿಯನ್ನು ಭೇಟಿ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. ಡಿಕೆಶಿ ಇಂದು (ಗುರುವಾರ) ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕಳೆದ ಎರಡು ದಿನಗಳಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಭೇಟಿಗೆ ಸಮಯ ಡಿಸಿಎಂ ಡಿಕೆ ಶಿವಕುಮಾರ್ ಕೇಳಿದ್ದಾರೆ. ಈಗಾಗಲೇ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ ಅವರನ್ನು ಡಿಕೆಶಿ ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಸಹೋದರ ಸುರೇಶ್ ಸಾಥ್ ನೀಡಿದರು.

ನಂತರ ಸೋನಿಯಾ ಗಾಂಧಿ ನಿವಾಸದ ಹೊರಗೆ ಸೇರಿದ್ದ, ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ, ನಾನು ದೆಹಲಿಗೆ ಬಂದಿರೋದು ರಾಜಕಾರಣ ಬಗ್ಗೆ ಮಾತನಾಡೋದಿಕ್ಕೆ, ಇಲ್ಲಿಯ ಗಾಳಿ ಕುಡ್ಕೊಂಡು ಹೋಗೋದಿಕ್ಕಲ್ಲ, ನನಗೆ ಏನು ಬೇಕೋ ಅದನ್ನು ಮಾತನಾಡಿದ್ದೇನೆ, ಅದನ್ನು ಬೀದೀಲಿ ನಿಂತಿಕೊಂಡು ಬಹಿರಂಗವಾಗಿ ಹೇಳೋದಿಕ್ಕಾಗೋದಿಲ್ಲ, ಅದು ನನ್ನ ಮತ್ತು ವರಿಷ್ಠರ ಮಧ್ಯೆ ನಡೆದ ಮಾತುಕತೆ ಎಂದರು.

ಅಸ್ಸಾಂ ಚುನಾವಣೆಗಳ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ, ಏಕೆಂದರೆ ಆ ರಾಜ್ಯ ನಮಗೆ ತುಂಬಾ ಮಹತ್ವದ್ದಾಗಿದೆ. ಅಸ್ಸಾಂನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಅಲ್ಲಿನ ಜನರು ಹೊಸ ನಾಯಕತ್ವದೊಂದಿಗೆ ಹೊಸ ಸರ್ಕಾರವನ್ನು ಬಯಸುತ್ತಿದ್ದಾರೆ. ದೆಹಲಿಗೆ ಬಂದಿದ್ದೆ ರಾಜಕೀಯ ಮಾಡಲು, ಎಲ್ಲ ವಿಚಾರ ಮಾತನಾಡದೆ ಸುಮ್ನೆ ಹೊಗ್ತೀವಾ, ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತ ಎಂದು ಹೇಳಿದ್ದಾರೆ.

0 Shares

By admin

Leave a Reply

Your email address will not be published. Required fields are marked *