ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆ ಸಮೀಪದ ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯ ಅತ್ತೂರಿನಲ್ಲಿ ಯುವಕರಿಬ್ಬರಿಗೆ ಚಿರತೆ ಕಾಣಸಿಕ್ಕಿದೆ. ಇದರ ಬೆನ್ನಲೇ ಅದೇ ದಿನ ರಾತ್ರಿ ಪಂಚಾಯತ್ ವ್ಯಾಪ್ತಿಯ ಮುಲ್ಲಡ್ಕ ಎಂಬಲ್ಲಿ ಸುಮಾರು 4 ಕಿಲೋ ಮೀಟರ್ ದೂರದಲ್ಲಿ ಚಿರತೆ ಕಂಡು ಬಂದಿದ್ದು, ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.
ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯ ಪದ್ಮನೂರು ಸಮೀಪ ಮುಲ್ಲಡ್ಕ ನಿವಾಸಿ ನಿವೃತ್ತ ಸೈನ್ಯಾಧಿಕಾರಿ ನೋಬೆಲ್ ಡಿಸೋಜ ಅವರ ಮನೆಯ ನಾಯಿಯನ್ನು ಚಿರತೆ ಕೊಂಡು ಹೋಗಿದೆ. ಮನೆಯ ಅವರಣ ಗೋಡೆಗೆ ಸಿಸಿ ಟಿವಿ ಅಳವಡಿಸಲಾಗಿದ್ದು, ಚಿರತೆಯ ಚಲನವಲನ ಸೆರೆಯಾಗಿದೆ. ಈ ಸ್ಥಳಕ್ಕೆ ಕೆಮ್ರಾಲ್ ಪಂಚಾಯತ್ ಅಧ್ಯಕ್ಷ ಮಯ್ಯದಿ ಪಕ್ಷಿಕೆರೆ ಭೇಟಿ ನೀಡಿದ್ದು, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
