0 Shares

ಬೆಂಗಳೂರು : ಬೆಂಗಳೂರಿನಲ್ಲಿ ರಾಜ ಕಾಲುವೆ ಒತ್ತುವರಿ ಆರೋಪಕ್ಕೆ ಸಂಬಂಧಪಟ್ಟಂತೆ, ಪ್ರೆಸ್ಟೀಜ್ ಗ್ರೂಪ್‌ನ ಮಾಲೀಕರಿಂದ ರಾಜ್ಯಕಾಲುವೆ ಒತ್ತುವರಿ ಆಗಿದ್ದಗಿಯಾ ಎಂಬುದು ಪ್ರಶ್ನೆ ಎದುರಾಗಿದ್ದು, ಸಮತಾ ಸೈನಿಕ ದಳವತಿಯಿಂದ ಬೃಹತ್‌ ತಮಟೆ ಚಳುವಳಿ ನಡೆಯಿತು.

ಬೆಂಗಳೂರು ಪೂರ್ವ ತಾಲ್ಲೂಕು ದೊಡ್ಡಬನಹಳ್ಳಿ ಗ್ರಾಮದ ಸರ್ಕಾರಿ ಜಾಗವನ್ನು ಕಬಳಿಕೆ ಮಾಡಿರುವ ಪ್ರೆಸ್ಟೀಜ್ ಗ್ರೂಪ್‌ನ ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಿ ಹಾಗೂ ಶಾಮೀಲಾಗಿರುವ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಹಾಗೂ ಪೂರ್ವ ತಾಲೂಕು ತಹಸಿಲ್ದಾರ್ ರಾಜೀವ್ ಅವರನ್ನು ಅಮಾನತುಗೊಳಿಸಲು ಒತ್ತಾಯಿಸಿ ಸಮತಾ ಸೈನಿಕ ದಳವತಿಯಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಅನೇಕ ಕಡೆ ಪ್ರೆಸ್ಟೀಜ್ ಗ್ರೂಪ್ ನ ಪ್ರೊಜೆಕ್ಟ್ ಗಳು ತಲೆ ಎತ್ತಿ ನಿಂತಿವೆ,ಆದರೆ ಈ ಕಂಪನಿಯು ಗಣನೀಯ ಪ್ರಮಾಣದಲ್ಲಿ ಎಲ್ಲಾ ಕಡೆ ಸರ್ಕಾರಿ ಜಾಗವನ್ನು ಕಬಳಿಸುವುದು ಇವರಿಗೆ ವಾಡಿಕೆ, ನಾಗರಿಕರೇ ಇದು ಸತ್ಯ ರಾಜ್ಯದ ಬಹುತೇಕ ಎಲ್ಲಾ ಕಡೆ ಇವರ ಪ್ರಾಜೆಕ್ಟ್ ಮಾಡಿರುವ ಎಲ್ಲಾ ಕಡೆ ಇದೆ ಕೇಸುಗಳು ಸಾಕಷ್ಟು ಸಂಖ್ಯೆಯಲ್ಲಿ ಇದೆ, ಎಲ್ಲಾ ಕಡೆಯೂ ಸರ್ಕಾರಿ ಜಮೀನು ಬಡವರ ಜಮೀನು ಕಬಳಿಕೆ ಮಾಡಿದರು ಇವರ ದಾಹ ತೀರಿಲ್ಲ, ಈಗ ಇದೇ.

ಆದರೂ ಸಹಾ ಇವರ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ? ಎಂದು ಡಾ. ದಲಿತ ಚಳುವಳಿ ರಾಜ್ಯಾಧ್ಯಕ್ಷರಾದ ಎಂ.ನಾಗೇಶ್ ತಿಳಿದಿದ್ದರು. ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕೆ. ಗೋಪಾಲ್, ಜಿ ಸಿ ವೆಂಕಟರಮಣಪ್ಪ, ಜಿ ಗೋವಿಂದಯ್ಯ, ಮಂಜುನಾಥ ಸೇರಿದಂತೆ ಅನೇಕ ಮುಖಂಡರು ಹೋರಾಟದಲ್ಲಿ ಭಾಗಿಯಾಗಿದ್ದರು.

0 Shares

By admin

Leave a Reply

Your email address will not be published. Required fields are marked *