0 Shares

ಬೆಂಗಳೂರು : ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ಸರ್ಕಾರ ಹತ್ತಿಕ್ಕಲು ಹೊರಟಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ (DPR) ಮಾಧ್ಯಮಗಳ ಮೇಲೆ ನಿಯಂತ್ರಣ ನಡೆಸಲು ಕ್ರಮ ಕೈಗೊಂಡಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಧಕ್ಕೆ ನೀಡಿರುವಂತೆ ತೋರುತ್ತಿದೆ.

ವಿಧಾನಸೌಧದಲ್ಲಿ ನಿಗದಿಪಡಿಸಿದ ಸ್ಥಳದಲ್ಲಿಯೇ ಮಾಧ್ಯಮಗಳು ಬೈಟ್ ಪಡೆದುಕೊಳ್ಳಬೇಕು ಎಂಬ ನಿಯಮವನ್ನು ಜಾರಿಗೊಳಿಸಿದ್ದು, ರಾಜಕೀಯ ನಾಯಕರ ಅಭಿಪ್ರಾಯ ಹಂಚಿಕೆ ಹಾಗೂ ವರದಿ ಮಾಡುವ ಹಕ್ಕಿಗೆ ಮಿತಿಗಳನ್ನು ಹೊತ್ತೊಯ್ಯಲು ಹೊರಟಿರುವಂತೆ ವರದಿಯಾಗಿದೆ. ವಾರ್ತಾ ಇಲಾಖೆ ಹಾಗೂ DPR ಸಿಬ್ಬಂದಿ ಇದಕ್ಕಾಗಿ ಪತ್ರ ಕಳುಹಿಸಿ ನಿಗದಿಪಡಿಸಿದ್ದು, ಭದ್ರತೆ ನೆಪದಲ್ಲಿ ಮಾಧ್ಯಮಗಳ ಮೇಲೆ ಸರ್ಕಾರದ ಸವಾರಿ ನಡೆಸಲಾಗಿದೆ.

ಇದಕ್ಕೆ ಹಿಂದಿನ ಹಿನ್ನೆಲೆಗಳಾಗಿ, ಕಳೆದ ವಾರ DPR ಸಿಬ್ಬಂದಿಯ ಕಳ್ಳತನ ಬಹಿರಂಗವಾಗಿತ್ತು. 300 ಗ್ರಾಂ ಚಿನ್ನದ ಕಳ್ಳತನ ಈ ಇಲಾಖೆಯ ಸಿಬ್ಬಂದಿಯಿಂದ ನಡೆದಿದೆ. ತಾವು ಮಾಡಿದ್ದಾರೆ ಲೋಪಗಳನ್ನು ಮುಚ್ಚಿಕೊಳ್ಳಲು DPR ಮತ್ತು ವಾರ್ತಾ ಇಲಾಖೆ ಮಾಧ್ಯಮಗಳ ಮೇಲೆ ನಿಯಂತ್ರಣ ಪ್ರಯತ್ನಿಸುತ್ತಿದ್ದಾರೆ ಎಂಬ ಅಭಿಪ್ರಾಯ ಹೊರಬಂದಿದೆ.

ವಿಧಾನಸೌಧದಲ್ಲಿ ಪದೇ ಪದೇ ಭದ್ರತಾ ಲೋಪಗಳು ಬಹಿರಂಗವಾಗುತ್ತಿರುವ ಸಂದರ್ಭದಲ್ಲಿ, ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತೊಂದು ದಾರಿ ಹಿಡಿದ DPR ಅಧಿಕಾರಿಗಳು ಮಾಧ್ಯಮಗಳ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಮಾಧ್ಯಮ ಸಂಘಟನೆಗಳು ಈ ಕ್ರಮವನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಾನಿ ಎಂದು ಟೀಕಿಸುತ್ತಿದ್ದು, ಸರ್ಕಾರದ ಮೇಲಿನ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

0 Shares

By admin

Leave a Reply

Your email address will not be published. Required fields are marked *