0 Shares

ಮಂಡ್ಯ : ಚಿನ್ನದಂಗಡಿ ಮಾಲೀಕನ ಮುಖಕ್ಕೆ ಆ್ಯಸಿಡ್ ಅಟ್ಯಾಕ್ ಮಾಡಿ ಅಂಗಡಿಯಲ್ಲಿದ್ದ ಚಿನ್ನ, ಬೆಳ್ಳಿ ಕದ್ದು ಪರಾರಿಯಾಗಿದ್ರು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಈ ಆ್ಯಸಿಡ್ ಕಮ್ ದರೋಡೆ ಕಹಾನಿಯ ಸ್ಕ್ರೀಪ್ಟ್ ರೈಟರ್ ಬೇರೆ ಯಾರು ಅದು ಚಿನ್ನದಂಗಡಿಯ ಮಾಲೀಕನೇ ಎಂದು ತಿಳಿದಿದೆ.

ಅರ್ಧ ಮುಖ ಸುಟ್ಟಂತೆ ಕಾಣುತ್ತಿರೋ ವ್ಯಕ್ತಿಯ ಹೆಸರು ಜಿತೇಂದ್ರ ಸಿಂಗ್. ರಾಜಸ್ಥಾನ ಮೂಲದ ಈತ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಮಹಾಲಕ್ಷ್ಮಿ ಜುವೆಲರಿ ಎಂಬ ಚಿನ್ನದ ಅಂಗಡಿ ಇಟ್ಟಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ಇತನ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಜಿತೇಂದ್ರ ಸಿಂಗ್ ಮುಖಕ್ಕೆ ಆ್ಯಸಿಡ್ ಹಾಕಿ ಅಂಗಡಿಯಲ್ಲಿದ್ದ 170 ಗ್ರಾಂ ಚಿನ್ನ ಹಾಗೂ 8 ಕೆಜಿ ಬೆಳ್ಳಿಯನ್ನ ದರೋಡೆ ಮಾಡಕೊಂಡು ಪರಾರಿಯಾಗಿದ್ದರು. ಇದಾದ ಬಳಿಕ ಈ ಬಗ್ಗೆ ಜಿತೇಂದ್ರ ಪೊಲೀಸ್ ಠಾಣೆ ದೂರು ನೀಡಿದ್ದಾನೆ.

ದೂರನ್ನು ಆಧರಿಸಿ ತನಿಖೆಗೆ ಇಳಿದ ಪೊಲೀಸರಿಗೆ ಆರಂಭದಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಯಾಕಂದ್ರೆ ಅಂಗಡಿಯಲ್ಲಿದ್ದ ಸಿಸಿಟಿವಿ ವಿಷ್ಯೂವಲ್‌ನ ಡಿವಿಆರ್ ಕೂಡ ನಾಪತ್ತೆಯಾಗಿತ್ತು. ಅಲ್ಲದೇ ಬೇರೆ ಯಾವುದೇ ಸಾಕ್ಷಿಗಳು ಸಹ ಸಿಕ್ಕಿರಲಿಲ್ಲ. ನಂತರ ಜಿತೇಂದ್ರ ಮುಖಭಾವನ್ನ ಗಮನಿಸಿದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಆ್ಯಸಿಡ್ ಹಾಕಿದ್ರೆ ಕಣ್ಣಿನ ಭಾಗಕ್ಕೂ ಸಹ ಹಾನಿಯಾಗಿತ್ತಿತ್ತು.

ಆದರೆ ಇಲ್ಲಿ ಜಿತೇಂದ್ರ ಮುಖಕ್ಕೆ ಯಾವುದೋ ರಾಸಾಯನಿಕವನ್ನು ಲೇಪನ ಮಾಡಿದ ಹಾಗೆ ಕಂಡಿದೆ. ಅಲ್ಲದೇ ನಾಪತ್ತೆಯಾಗಿದ್ದ ಸಿಸಿಟಿವಿ ಡಿವಿಆರ್ ಕೆರೆಯಲ್ಲಿ ಪತ್ತೆಯಾಗಿದೆ. ಬಳಿಕ ಪೊಲೀಸರು ಜಿತೇಂದ್ರನನ್ನ ತನಿಖೆ ನಡೆಸಿದಾಗ ಈ ದರೋಡೆಯನ್ನು ಮಾಡಿಸಿರೋದು ಜಿತೇಂದ್ರನೇ ಎಂದು ಬೆಳಕಿಗೆ ಬಂದಿದೆ.

ಜಿತೇಂದ್ರ ಚಿನ್ನದ ಖರೀದಿಗೆ ಮೈಸೂರಿನಲ್ಲಿ ಸಾಲ ಪಡೆದಿದ್ದ. ಜೊತೆಗೆ ಕೆಲವರ ಬಳಿ ಒಡವೆಗಳನ್ನು ಅಡವಿಟ್ಟುಕೊಂಡಿದ್ದ. ಅವರನ್ನ ಯಾಮಾರಿಸುವ ಸಲುವಾಗಿ ಈ ಆ್ಯಸಿಡ್ ಕಮ್ ದರೋಡೆ ನಾಟಕವಾಡಿದ್ದಾನೆ. ಈ ಜಿತೇಂದ್ರ ತನ್ನ ಮುಖಕ್ಕೆ ಚಿನ್ನಕ್ಕೆ ಹಾಕುವ ರಾಸಾಯನಿಕವನ್ನ ಬಳಿದುಕೊಂಡು ಬಳಿಕ ತನ್ನ ಅಂಡಿಯ ಚಿನ್ನ, ಬೆಳ್ಳಿಯನ್ನು ಸ್ನೇಹಿತ ಬಳಿ ಕೊಟ್ಟಿದ್ದಾನೆ. ನಂತರ ರಾಜಸ್ತಾನಕ್ಕೆ ಹೋಗುವ ಪ್ಲ್ಯಾನ್‌ ಸಹ ಈತ ಹಾಕಿಕೊಂಡಿದ್ದನು. ಜನರಿಗೆ ಯಾಮಾರಿಸಲು ಆ್ಯಸಿಡ್ ಕಮ್ ದರೋಡೆ ನಾಟಕವಾಡಿದ ಜಿತೇಂದ್ರ ಪೊಲೀಸರ ಚಾಣಾಕ್ಷ ಇನ್ವೇಸ್ಟಿಕೇಶನ್‌ನಲ್ಲಿ ಸಿಕ್ಕಿ ಬಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

0 Shares

By admin

Leave a Reply

Your email address will not be published. Required fields are marked *