0 Shares

ಬೆಂಗಳೂರು : ನಗರದ ಮೆಜೆಸ್ಟಿಕ್‌ನಲ್ಲಿರುವ ಕೇಂಪೇಗೌಡ ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕಕ್ಕೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರು ಹೈರಾಣಾದ ಘಟನೆ ನಡೆದಿದೆ.

ಬೆಂಗಳೂರು–ಶಿರಸಿ ನಾನ್ ಎಸಿ ಸ್ಲೀಪರ್ ಬಸ್‌ನ ಕಂಡಕ್ಟರ್ ಹಾಗೂ ಡ್ರೈವರ್‌ರ ಬ್ಯಾಗ್ ಸಮೇತ ಟಿಕೆಟ್ ಮಷೀನ್‌ನ್ನು ಖದೀಮರು ಕದ್ದೊಯ್ದಿದ್ದಾರೆ. ಕಂಡಕ್ಟರ್ ಬ್ಯಾಗ್‌ನಲ್ಲಿದ್ದ ಟಿಕೆಟ್ ಮಷೀನ್ ಕಳವಾದ ಪರಿಣಾಮ ಬಸ್ ಸರ್ವೀಸ್ ಆರಂಭವಾಗದೆ ಪ್ರಯಾಣಿಕರು ಎರಡರಿಂದ ಮೂರು ಗಂಟೆಗಳ ಕಾಲ ಮೆಜೆಸ್ಟಿಕ್‌ನಲ್ಲಿ ಪರದಾಡುವಂತಾಯಿತು.

ಟಿಕೆಟ್ ಮಷೀನ್ ಇಲ್ಲದ ಕಾರಣ ಕೆಎಸ್‌ಆರ್‌ಟಿಸಿ ಬಸ್ ತಡರಾತ್ರಿವರೆಗೂ ನಿಂತಲ್ಲೇ ನಿಂತಿತ್ತು. ನಂತರ ಸಿಬ್ಬಂದಿಗಳು ಮ್ಯಾನುವೆಲ್ ಟಿಕೆಟ್ ನೀಡಿ ಬಸ್ ಸೇವೆಯನ್ನು ಆರಂಭಿಸಿದರು.

ಖದೀಮರು ಬ್ಯಾಗ್ ಹೊತ್ತೊಯ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 Shares

By admin

Leave a Reply

Your email address will not be published. Required fields are marked *