ದೇವನಹಳ್ಳಿ : ತಾಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಯರಪ್ಪನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಎಸ್ .ಬಿ .ಐ ಬೆಂಗಳೂರು ವೃತ್ತ ಮತ್ತು ಸುರಭಿ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಸಿಎಸ್ಆರ್ ಅನುದಾನದಡಿ “ಅಂಗನವಾಡಿಗಳ ಉನ್ನತೀಕರಣ ಕಾರ್ಯಕ್ರಮ”ವನ್ನು ದೇವನಹಳ್ಳಿ ಎಸ್ಬಿಐ ರೀಜನಲ್ ಮ್ಯಾನೇಜರ್ ರತನ್ ಕುಮಾರ್ ರತ್ನ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಈ ವೇಳೆಯಲ್ಲಿ ದೇವನಹಳ್ಳಿ ಎಸ್ಬಿಐ ರೀಜನಲ್ ಮ್ಯಾನೇಜರ್ ರತನ್ ಕುಮಾರ್ ರತ್ನ ಮಾತನಾಡಿದ, ಸುರಭಿ ಫೌಂಡೇಶನ್ ನೊಂದಿಗೆ ಸಂವಹನ ಮಾಡಿ ಈ ಕಾರ್ಯಕ್ರಮವನ್ನು ರೂಪಿಸಿರುವುದು ತುಂಬಾ ಸಂತೋಷದಾಯಕವಾಗಿದೆ. ಸಮಾಜದಲ್ಲಿನ ಅಭಿವೃದ್ಧಿ ಕಾರ್ಯಗಳು ಸಾಮಾಜಿಕ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬೇಕು ಎಂದು ಚಿಕ್ಕಂದಿನಿಂದಲೇ ಬೆಳೆಸಬೇಕು,ಸಮಾಜದಲ್ಲಿ ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಅವಕಾಶ ಕಲ್ಪಿಸಬೇಕು, ಶಿಕ್ಷಣದ ಕುರಿತು ಅರಿವು ಮೂಡಿಸಿ, ಸರ್ಕಾರಿ ಶಾಲೆಗಳ ಉಳಿಸುವ ಉದ್ದೇಶದೊಂದಿಗೆ ಮೂಲಕೇಂದ್ರವಾದ ಅಂಗವಾಡಿಗಳ ಅಭಿವೃದ್ಧಿ ಮಾಡುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.

ಸುರಭಿ ಫೌಂಡೇಶನ್ ಟ್ರಸ್ಟ್ ನಿರ್ದೇಶಕರು ಮತ್ತು ಜನರಲ್ ಸೆಕ್ರೆಟರಿ ಎ.ಎಸ್ ಪಾಟೀಲ್ ಮಾತನಾಡಿ ಸುರಭಿ ಟ್ರಸ್ಟ್ ವತಿಯಿಂದ ಖಾಸಗಿ ಶಾಲೆಗಳ ರೀತಿಯಲ್ಲಿಯೇ ಎಲ್ಲಾ ರೀತಿಯ ಆಟಿಕೆಗಳು ಮತ್ತು ಬ್ಯಾಗ್, ಲೇಖನ ಸಾಮಗ್ರಿಗಳನ್ನು ಅಂಗನವಾಡಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿದ್ದೇವೆ, ಕಾರಣ ಶಿಕ್ಷಣ ಪ್ರತಿಯೊಬ್ಬರ ಹಕ್ಕು,ಮಕ್ಕಳ ಬುದ್ದಿ ಬಲವರ್ಧನೆಗಾಗಿ ಪೂರಕ ವಾತಾವರಣ ನಿರ್ಮಾಣ ಮಾಡಿದ್ದೇವೆ, ಇದಕ್ಕೆ ಎಸ್ ಬಿಐ ಸಹಯೋಗವು ಹೊಂದಿದೆ.
ಇದೇ ರೀತಿ ಹಲವು ಸಮಾಜಮುಖಿ ಕಾರ್ಯಕ್ರಮಗಳು, ಅನಾಥಾಶ್ರಮಗಳನ್ನು ಸಹ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳಿಗೆ ಆಟಿಕೆಗಳು ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸುರಭಿ ಟ್ರಸ್ಟ್ ನ ಸಿಎಸ್ಆರ್ ಎಸ್ ಮ್ಯಾನೇಜರ್ ವಿಶಾಲ್ ,ಕಾರ್ತಿಕ್ ಗೌಡ ,ದೇವನಹಳ್ಳಿಯ ಎಸಿಡಿಪಿ ಸುನಿತಾ ,ಅಂಗನವಾಡಿ ಶಿಕ್ಷಕಿ ಸುಜಾತ ಮೇಲ್ವಿಚಾರಕರಾದ ಲಲಿತಾ, ಅನಿತಾ , ಕವಿತಾ ,ಚಿದ್ದಾನಂದ್ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದರು.
