0 Shares

ಶಿವಮೊಗ್ಗ : ಊರಗಡೂರಿನ 9ನೇ ತಿರುವಿನಲ್ಲಿ ಎಸ್‌ಎಸ್‌ಎಲ್‌ಸಿ ಹುಡುಗನೋರ್ವನ ಹತ್ಯೆಯಾಗಿದೆ. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿಶೇಷ ತರಬೇತಿ ಮುಗಿಸಿಕೊಂಡು ಹೊರಬಂದ ನಂತರ ನಡೆದ ಜಗಳದಿಂದಾಗಿ ಹತ್ಯೆಯಾಗಿದೆ ಎನ್ನಲಾಗಿದೆ.

ಊರಗಡೂರಿನಲ್ಲಿ 9 ನೇ ತಿರುವಿನಲ್ಲಿ ಸರ್ಕಾರಿ ಶಾಲೆಯಿದ್ದು, ಕಳೆದ ಎರಡು ತಿಂಗಳಿಂದ ವಿಶೇಷ ತರಗತಿ ನಡೆಯುತ್ತಿದೆ. ಇಂದು ಹರೀಶ್ ಮತ್ತು ಇತರೆ ಸಹಪಾಠಿಯೊಂದಿಗೆ ಗಲಾಟೆಯಾಗಿದೆ. ರಾತ್ರಿ 8 ಗಂಟೆಯ ವೇಳೆಗೆ ತರಗತಿ ಮುಗಿದಿದೆ. ಹೊರಗೆ ಬಂದ ತಕ್ಷಣ ಜಗಳವಾಗಿ ಬಾಲಕನ ಹತ್ಯೆಯಾಗಿದೆ.

ಬಾಲಕನ ಹೆಸರು ಸಂಕೇತ್ (15) ಎಂದು ತಿಳಿದು ಬಂದಿದೆ. ಸಂಕೇತ್ ಊರಗಡೂರು ನಿವಾಸಿ ಕುಮಾರ್ ಅವರ ಮಗ ಆಗಿದ್ದಾನೆ. ಕುಮಾರ ಚಾಲಕ ವೃತ್ತಿ ಮಾಡಿಕೊಂಡಿದ್ದಾರೆ. ಹತ್ಯೆ ಮಾಡಿದ ಮೂವರು ಓಡಿಹೋದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಊರಗಡೂರಿನಲ್ಲಿ ಸ್ಥಳದಲ್ಲಿ ಮೃತನಕಡೆಯವರು ಗುಂಪು ಸೇರಿದ್ದಾರೆ. ಡಿವೈಎಸ್ಪಿ ಸಂಜೀವ್ ಕುಮಾರ್, ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಕೆಟಿ, ರಾಘವೇಂದ್ರ ಖಂಡಿಕೆ, ದೀಪಕ್ ಮೊದಲಾದವರು ಮೊಕ್ಕಂ ಹೂಡಿದ್ದಾರೆ. ಕ್ರಿಕೆಟ್ ಆಟದ ವಿಷಯದಲ್ಲಿ ಗಲಾಟೆ ಆಗಿದೆ ಎಂಬುದು ಸ್ಥಳೀಯ ಮಾಹಿತಿ ಸಂಗ್ರಹವಾಗಿದೆ. ಮರ್ಡರ್ ರಾಜಕೀಯ ಬಣ್ಣ ಪಡೆದುಕೊಳ್ಳುವ ಸಾಧ್ಯತೆಯಿದೆ.

0 Shares

By admin

Leave a Reply

Your email address will not be published. Required fields are marked *