0 Shares

ಬೆಂಗಳೂರು : ರಾಜ್ಯ ವಿದ್ಯಾರ್ಥಿಗಳ ಒಕ್ಕೂಟ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಹುದ್ದೆ ಭರ್ತಿ ಮಾಡಲು ಆಗಿಲ್ಲ. ಭಾಷಣ ಬಿಗಿಯುತ್ತಿದ್ದಾರೆಯೇ ಹೊರತು ಯುವ ಜನತೆಗೆ ನ್ಯಾಯ ಕೊಡಲು ಆಗಿಲ್ಲ. ಸಿಎಂ, ಡಿಸಿಎಂ ಯುವ ಜನತೆಯ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿದ್ದಾರೆ.

ಸಿಎಂ ಅಪಾಯಿಂಟ್ ಮೆಂಟ್ ಕೊಡಿಸಲು ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು. ಕುರ್ಚಿ ಉಳಿಸಿಕೊಳ್ಳಲು, ಕುರ್ಚಿ ಕಸಿದುಕೊಳ್ಳಲು ಬ್ಯುಸಿಯಾಗಿದ್ದಾರೆ. ವಿದ್ಯಾರ್ಥಿ ಒಕ್ಕೂಟ ನನ್ನನ್ನೂ ಬಂದು ಭೇಟಿ ಮಾಡಿತ್ತು. ಕಾಲಹರಣ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಕುಳಿತಿದೆ. ವಿದ್ಯಾರ್ಥಿ ಒಕ್ಕೂಟ ಕಲ್ಬುರ್ಗಿ, ಬೆಂಗಳೂರು, ಧಾರವಾಡ, ಬೆಳಗಾವಿಯಲ್ಲಿ ಹಿಂದೆ ಪ್ರತಿಭಟನೆ ಮಾಡಿದೆ.

ಸಿಎಂ, ಡಿಸಿಎಂ ಕಳೆದೆರಡು ವರ್ಷಗಳಲ್ಲಿ ರಾಜ್ಯದಲ್ಲಿ ಕಡಿದು ಕಟ್ಟೆ ಹಾಕಿದ್ದು ಗೊತ್ತಿದೆ. ಮೂರು ವರ್ಷ ಕಳೆದರೂ ನೇಮಕಾತಿ ಮಾಡದವರು ಇನ್ನು ಮಾಡುತ್ತಾರಾ? ಇನ್ನೂ ಎಷ್ಟು ದಿನಗಳ ಕಾಲ ತಾಳ್ಮೆ ಪರೀಕ್ಷೆ ಮಾಡುತ್ತೀರಿ ಮುಖ್ಯಮಂತ್ರಿಗಳೇ..? ಕೂಡಲೇ ಬಾಕಿ ಇರುವ ನೇಮಕಾತಿ ಪ್ರಾರಂಭ ಮಾಡಬೇಕು ಎಂದರು.

ಕೆಪಿಎಸ್ ಸಿ ವ್ಯವಸ್ಥೆಯನ್ನೂ ಸರಿಪಡಿಸಬೇಕು. ಹುಬ್ಬಳ್ಳಿಯಲ್ಲಿ ಮನೆ ಕೊಟ್ಟಿದ್ದೇವೆ ಅಂತಾ ಹೇಳಿಕೊಂಡು ಅವರ ಬೆನ್ನು ಅವರೇ ತಟ್ಟಿಕೊಂಡು ಬಂದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯ ಕೆಲಸಗಳನ್ನು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸಿಎಂ, ಡಿಸಿಎಂ ಹುಡುಗಾಟಿಕೆ ಮಾಡದೇ ಯುವ ಜನತೆಯ ಭಾವನೆ ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರದಲ್ಲಿ ಅನುಭವಿ ಸಿಎಂ ಇರುವಾಗ ಸರ್ಕಾರದ ಆದ್ಯತೆ ಏನು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು.

ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ಸರ್ಕಾರ ನಡೆಸಲು ಸಾಧ್ಯವೇ? ಶಿವಮೊಗ್ಗದಲ್ಲಿ ಬಾಲಕನ ಕೊಲೆ ಪ್ರಕರಣ ಖಂಡಿಸುತ್ತೇವೆ. ಶಿವಮೊಗ್ಗದಲ್ಲಿ ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದರೂ ಗೃಹ ಸಚಿವರು ಇದ್ದಾರಾ ಎಂಬ ಅನುಮಾನ ‌ಮೂಡುತ್ತಿದೆ. ರಾಜ್ಯದಲ್ಲಿ ಹಲವು ಘಟನೆ ನಡೆದಿದ್ದರೂ ಗೃಹ ಸಚಿವರು ಹಾರಿಕೆಯ ಉತ್ತರ ಕೊಡುತ್ತಾರೆ. ಸರ್ಕಾರ ಕೂಡಲೇ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು.

0 Shares

By admin

Leave a Reply

Your email address will not be published. Required fields are marked *