0 Shares

ಇಂದು ಸಿಬಿಐ ಕೋರ್ಟ್ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ಒಳಗೊಂಡಂತೆ ಹಿರಿಯ ನಾಯಕರುಗಳ ಮೇಲಿನ ಅಬಕಾರಿ ಮೊಕದ್ದಮೆಯ ತೀರ್ಪನ್ನು ಸ್ವಾಗತಿಸಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು, ದೆಹಲಿಯ ಎಎಪಿ ಸರ್ಕಾರದಲ್ಲಿ ಯಾವುದೇ ಅಬಕಾರಿ ಹಗರಣಗಳು ಆಗಿರುವುದಿಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆಮ್ ಆದ್ಮಿ ಪಕ್ಷದ ಮೇಲೆ ಸುಳ್ಳು ಹಗರಣದ ಆರೋಪವನ್ನು ಮಾಡಿ ಪಕ್ಷದ ನಿರ್ನಾಮಕ್ಕಾಗಿ ತನ್ನ ಸಾಂವಿಧಾನಿಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಸಿಬಿಐ ಸಂಸ್ಥೆ ವಿರುದ್ಧ ತನಿಖೆ ಕೈಗೊಳ್ಳಬೇಕೆಂದು ನ್ಯಾಯಾಲಯ ಸ್ಪಷ್ಟವಾಗಿ ಆದೇಶ ನೀಡಿದೆ.

ಕಾಂಗ್ರೆಸ್ ಮತ್ತು ಬಿಜೆಪಿಯವರ ಟ್ಯಾಗ್ ಗುಂಪುಗಳಿಂದ ಆಮ್ ಆದ್ಮಿ ಪಕ್ಷವನ್ನು ಭ್ರಷ್ಟಾಚಾರಿಗಳೆಂಬಂತೆ ಬಿಂಬಿಸ ಹೊರಟಿರುವುದಕ್ಕೆ ಅಂತಿಮ ತೆರೆ ಬಿದ್ದಿದೆ. ಮಾರ್ಚ್ 2022 ರಲ್ಲಿ ಪಂಜಾಬ್ ನಲ್ಲಿ ವಿಜಯಭೇರಿಯನ್ನು ಸಾಧಿಸಿದ ಆಮ್ ಆದ್ಮಿ ಪಕ್ಷವು ಕಾಲಿಟ್ಟ ರಾಜ್ಯಗಳಲ್ಲೆಲ್ಲ ವಿಜಯಭೇರಿ ಬಾರಿಸುತ್ತದೆ ಎಂಬ ಭೀತಿಯಿಂದ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಅಕ್ರಮ ಕೂಟಗಳು ಈ ರೀತಿಯ ಷಡ್ಯಂತ್ರಕ್ಕೆ ಇಳಿದಿದ್ದವು. ಇನ್ನು ಇವುಗಳ ಷಡ್ಯಂತ್ರ ನಡೆಯುವುದಿಲ್ಲ ಎಂದು ತಿಳಿಸಿದರು.

ಇಂದು ಭಾರತದ ನ್ಯಾಯಾಂಗ ವ್ಯವಸ್ಥೆ ಈ ತೀರ್ಪಿನ ಮೂಲಕ ತನ್ನ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಯಾವುದೇ ಬೇದ ಭಾವವಿಲ್ಲದೆ ಸತ್ಯದ ಪರ ಇರುತ್ತದೆಯೆಂಬುದನ್ನು ಸಾಬೀತುಪಡಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಭಾರತದ ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣ ಆವರಿಸಿಕೊಂಡು, ದುರಡಳಿತದಲ್ಲಿ ಮುಳುಗಿ, ಆಡಳಿತ ವ್ಯವಸ್ಥೆಯನ್ನು ಕುಸಿತಗೊಳಿಸಿ, ರಾಜಕೀಯ ಕ್ಷೇತ್ರವನ್ನೇ ಕಲುಷಿತ ಗೊಳಿಸಿದ್ದಾರೆ. ಭಾರತದ ಜನಸಾಮಾನ್ಯರು ಈ ಎರಡು ಪಕ್ಷಗಳ ವಿರುದ್ಧ ಹೋರಾಡಬೇಕಾದಂತಹ ಸಂದರ್ಭ ಇದೀಗ ಬಂದಿದೆ. ಜನಸಾಮಾನ್ಯರೆಲ್ಲರೂ ಈ ರಾಜಕೀಯ ಆಂದೋಲನದಲ್ಲಿ ಭಾಗವಹಿಸುವ ಮೂಲಕ ಈ ಎರಡು ಪಕ್ಷಗಳ ಸ್ಥಾಪಿತ ಹಿತಾಸಕ್ತಿಯನ್ನು ಕಿತ್ತೊಗೆಯುವ ಮೂಲಕ ಭಾರತಾಂಬೆಗೆ ಸೇವೆ ಸಲ್ಲಿಸಬೇಕು ” ಎಂದು ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ , ಪ್ರಧಾನ ಕಾರ್ಯದರ್ಶಿ, ಸಂಚಿತ್ ಸೆಹ್ವಾನಿ ,ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ , ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ,ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಮುದಿಗೌಡರ್ ಉಪಸ್ಥಿತರಿದ್ದರು. ನಂತರ ಕುಮಾರ ಕೃಪಾ ರಸ್ತೆಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಸಂಭ್ರಮೋತ್ಸವವನ್ನು ಆಚರಿಸಿದರು.

0 Shares

By admin

Leave a Reply

Your email address will not be published. Required fields are marked *