ಗದಗ : ಜಗತ್ತಿನಲ್ಲಿ ಒಂದು ದೊಡ್ಡ ಗಂಡಾಂತರ ತಲೆದೋರಿದೆ. ಶ್ರೀಮಂತ ರಾಷ್ಟ್ರಗಳು ತಮ್ಮ ಮನಬಂದಂತೆ ವರ್ತಿಸುತ್ತಿವೆ. ಹೆಚ್ಚಿನ ಆರ್ಥಿಕ ಶಕ್ತಿಯ ಮೇಲೆ ತಮ್ಮ ಸಾಮ್ರಾಜ್ಯ ಸ್ಥಾಪಿಸಬೇಕು. ವೈರಮನೋಭಾವದಿಂದ ಹತ್ಯೆ ಮಾಡಬೇಕು ಎಂದು ವಾರ್ ಕುರಿತು ಗದಗನಲ್ಲಿ ಸಚಿವ ಎಚ್.ಕೆ ಪಾಟೀಲ ಹೇಳಿಕೆ ನೀಡಿದ್ದಾರೆ.
ಒಟ್ಟಾರೆ ಜಗತ್ತಿನಲ್ಲಿ ಅಶಾಂತಿಯನ್ನು ಹಬ್ಬಿಸುತ್ತಿದ್ದಾರೆ. ಇದು ಅತ್ಯಂತ ಖಂಡನೀಯ.
ಅಶಾಂತಿಯನ್ನು ಯಾರೇ ಹಬ್ಬಿಸುವಂತಹ ಪ್ರಯತ್ನ ಮಾಡಲಿ, ಅವರನ್ನು ಭಾರತ ಖಂಡಿಸುತ್ತದೆ. ಇದು ಮಾನವ ಕುಲಕ್ಕೆ ಒಳ್ಳೆಯದಲ್ಲ, ನಿಮ್ಮಲ್ಲಿ ಶಕ್ತಿ, ಸಾಮರ್ಥ್ಯ ಇರಬಹುದು. ಆದ್ರೆ ಮನುಕುಲವನ್ನು ಶಾಂತವಾಗಿ ತೆಗೆದುಕೊಂಡು ಹೋಗುವ ಔದಾರ್ಯ ಮನೋಭಾವ ಇರಬೇಕು ಎಂದರು.
ನಮ್ಮ ದೇಶ ವಿಶ್ವ ಶಾಂತಿಗಾಗಿ ಹೋರಾಟ ಮಾಡುತ್ತವೆ. ವಿಶ್ವ ಶಾಂತಿ ಮತ್ತೆ ಸ್ಥಾಪನೆ ಆಗಬೇಕು. ಜಗತ್ತಿನಲ್ಲಿ ಪ್ರೀತಿ, ವಿಶ್ವಾಸ, ಗೌರವ ಸೌಹಾರ್ದತೆ ಇದು ಮರು ಸ್ಥಾಪನೆ ಆಗಬೇಕು. ಕನ್ನಡಿಗರು ಅಲ್ಲಲ್ಲಿ ಸಿಲುಕಿದ್ದಾರೆ. ಅವರನ್ನು ಶಾಂತವಾಗಿ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭಿರವಾದ ಹೆಜ್ಜೆ ಇಟ್ಟು ಕರೆತರಬೇಕು.
ನಮಗೆ ವಿಶ್ವಾಸವಿದೆ, ನಮ್ಮ ಭಾರತೀಯರನ್ನು ಯಾರೂ ಮುಟ್ಟಲಾರರು. ನಾವು ಯಾರ ಪರವಾಗಿ ನಿಂತವರಲ್ಲ, ವಿಶ್ವ ಶಾಂತಿಗಾಗಿ ನಿಂತವರು, ನಮ್ಮ ಭಾರತೀಯರು, ಕನ್ನಡಿಗರು ಸುರಕ್ಷಿತವಾಗಿ ವಾಪಾಸ್ ಆಗಲೆಂದು ಕೇಳಿಕೊಳ್ಳುತ್ತೇನೆ. ನಮ್ಮ ದೇಶ ಪಂಚ ಶೀಲ ತತ್ವಗಳಲ್ಲಿ ವಿಶ್ವಾಸ ಇಟ್ಟ ದೇಶ ನಮ್ಮದು, ಶಾಂತಿಯತ್ತ ನಮ್ಮ ಒಲವು, ಶಾಂತಿಗೆ ಯಾರು ಒಲವು ತೋರಿಸುತ್ತಾರೆ ಅವರಿಗೆ ಬಲ ತುಂಬಬೇಕೆಂದು ನಾನೊಬ್ಬ ಭಾರತೀಯನಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ.
ಕೇಂದ್ರ ಸರ್ಕಾರ ವಿಶ್ವಶಾಂತಿ ಮರುಸ್ಥಾಪನೆಗಾಗಿ ಏನೆಲ್ಲಾ ಹೆಜ್ಜೆಗಳನ್ನು ಇಡಬೇಕು. ಆ ಹೆಜ್ಜೆ ಇಡಬೇಕೆಂದು ಒತ್ತಾಯಿಸುತ್ತೇನೆ. ಗದಗ ಜಿಲ್ಲೆಯವರು ಯಾರೂ ಆ ಯುದ್ಧ ಸ್ಥಳದಲ್ಲಿ ಇಲ್ಲ ಎಂದು ಮಾಹಿತಿ ಬಂದಿದೆ. ಕಾನೂನು, ನ್ಯಾಯ ಸಂಸದೀಯ ವ್ಯವಹಾರಗಳು ಎಂದರು.
