0 Shares

ಬೆಂಗಳೂರು : ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂಭ್ರಮದ ನಡುವೆ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಂಗಮ್ಮನಪಾಳ್ಯದಲ್ಲಿ ವಿಶಿಷ್ಟ ಕಾರ್ಯಕ್ರಮವೊಂದು ಗಮನ ಸೆಳೆದಿದೆ. ಉಚಿತವಾಗಿ ಕೋಳಿ ಪಡೆಯಲು ಸಾವಿರಾರು ಜನರು ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.

ಯುಗಾದಿ ಹಬ್ಬದ ಮರುದಿನದ ‘ಹೊಸತೊಡಕು’ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬಡವರಿಗೆ ಹಾಗೂ ಸಾರ್ವಜನಿಕರಿಗೆ ಸುಮಾರು 3,000 ಕೋಳಿಗಳನ್ನು ಉಚಿತವಾಗಿ ವಿತರಿಸಲಾಯಿತು. ಹೆಚ್.ಎಸ್.ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಘವೇಂದ್ರ ಅವರ ನೇತೃತ್ವದಲ್ಲಿ ಈ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 7 ಗಂಟೆಯಿಂದಲೇ ಜನ ಮಂಗಮ್ಮನಪಾಳ್ಯಕ್ಕೆ ಲಗ್ಗೆ ಇಟ್ಟಿದ್ದರು. ಕೋಳಿ ಪಡೆಯುವ ಉತ್ಸಾಹದಲ್ಲಿ ಜನರು ರಸ್ತೆಯ ಉದ್ದಕ್ಕೂ ಕಿಲೋಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದು, ಮಂಗಮ್ಮನಪಾಳ್ಯದ ರಸ್ತೆಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದವು. ಇಂದು ಹೊಸತೊಡಕು ಆಚರಣೆ ಇರುವುದರಿಂದ ಮಾಂಸಕ್ಕೆ ಭಾರಿ ಬೇಡಿಕೆಯಿದೆ. ಈ ಸಮಯದಲ್ಲಿ ಉಚಿತ ಕೋಳಿ ದೊರೆತಿರುವುದು ಸ್ಥಳೀಯ ಜನರಲ್ಲಿ ಸಂಭ್ರಮ ಮೂಡಿಸಿದೆ.

0 Shares

By admin

Leave a Reply

Your email address will not be published. Required fields are marked *