0 Shares

ಹುಬ್ಬಳ್ಳಿ : ತಾಯಿಯೇ ತನ್ನ 10 ವರ್ಷದ ಮಗನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ, ಕಿಮ್ಸ್ ಆಸ್ಪತ್ರೆಗೆ ಪೋಲಿಸ್ ಕಮಿಷನ‌ರ್ ಎನ್ ಶಶಿಕುಮಾ‌ರ್ ಬೇಟಿ ನೀಡಿ ಬಾಲಕನ ಆರೋಗ್ಯ ವಿಚಾರಿಸಿ, ಬಳಿಕ ತಾಯಿ ಲಕ್ಷ್ಮಿಯಿಂದ ಮಾಹಿತಿ ಪಡೆದಿದ್ದಾರೆ.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಾಲಕ ಓದುವುದಿಲ್ಲ, ಕಿರಿಕಿರಿ ಮಾಡುತ್ತಾನೆ ಎಂಬ ಕಾರಣಕ್ಕೆ ತಾಯಿ ಹೊಡೆದಿರುವುದಾಗಿ ಹೇಳಿದ್ದಾಳೆ. ಬಾಲಕನ ದೇಹದಲ್ಲಿ ಹಳೆಯ ಗಾಯಗಳೂ ಕಾಣುತ್ತಿದ್ದು, ನಿರಂತರ ಹಲ್ಲೆ ನಡೆದಿರುವ ಅನುಮಾನವಿದೆ ಎಂದು ಹೇಳಿದರು.

ಬಾಲಕ ಮಾತನಾಡುವ ಸ್ಥಿತಿಯಲ್ಲಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಕ್ಕಳ ರಕ್ಷಣಾ ಘಟಕದ ಮೂಲಕ ದೂರು ದಾಖಲಿಸಿ, ಪ್ರಕರಣದ ಬಗ್ಗೆ ಕೂಲಂಕುಶ ತನಿಖೆ ನಡೆಸಲಾಗುವುದು. ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.

0 Shares

By admin

Leave a Reply

Your email address will not be published. Required fields are marked *