0 Shares

ವಿಜಯನಗರ : ಹೊಸಪೇಟೆ ನಗರದಲ್ಲಿ ಪಟ್ಟಣ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ಬೈಕ್ ಕಳ್ಳನೊಬ್ಬನನ್ನು ಬಂಧಿಸಿ, ಆತನಿಂದ 12.81ಲಕ್ಷ ರೂಪಾಯಿ ಬೆಲೆ ಬಾಳುವ 14ವಿವಿಧ ಕಂಪನಿಯ ಬೈಕ್‍ಗಳನ್ನು ವಶಪಡೆಸಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್‍ನ ನಿವಾಸಿ ಮೆಹಬೂಬ್(37) ಬಂಧಿತ ಆರೋಪಿ ಎನ್ನಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್. ಅವರು, ಬಂಧಿತ ಆರೋಪಿ ಹೊಸಪೇಟೆಯಲ್ಲಿ 3ಬೈಕ್, ಬಳ್ಳಾರಿಯಲ್ಲಿ 2, ಮುನಿರಾಬಾದ್, ಗದಗ, ಸಂಡೂರು, ಗಂಗಾವತಿ, ಕಂಪ್ಲಿಯಲ್ಲಿ ತಲಾ ಒಂದು ಬೈಕ್ ಹಾಗೂ ಮಂಡ್ಯ ಜಿಲ್ಲೆಯಲ್ಲಿ 2ಬೈಕ್‍ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು ಎಂದು ಮಾಹಿತಿ ನೀಡಿದರು.

ಈ ಕುರಿತು 2022ರಲ್ಲಿ ಹೊಸಪೇಟೆಯ ಪಟ್ಟಣ ಠಾಣೆಯಲ್ಲಿ ಹಾಗೂ 2008ರಲ್ಲಿ ಕೊಪ್ಪಳ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ಆರೋಪಿಯ ಮೇಲೆ ದಾಖಲಾಗಿವೆ ಎಂದು ಅವರು ತಿಳಿಸಿದರು.

ಅಲ್ಲದೆ 2026ರ ಫೆ.21ರಂದು ಫಿರ್ಯಾದಿದಾರ ವೆಂಕಟೇಶ್ ಅವರು ಪಟ್ಟಣ ಪೊಲೀಸ್ ಠಾಣೆಗೆ ಬಮದು ಫೆ.15ರಂದು ನಗರದ ಶ್ಯಾನ್‍ಭಾಗ್ ಟಿಫಿನ್ ರೂಂ ಬಳಿಯ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಬಗ್ಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ವಿಶೇಷ ತಂಡವನ್ನು ರಚಿಸಿದ್ದರು. ಹೆಚ್ಚುವರಿ ಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಡಿವೈಎಸ್ಪಿ ಮಂಜುನಾಥ ತಳವಾರ ಅವರು ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆಯ ಪಿಐ ಫೈಜುಲ್ಲಾ, ಪಿಐ ಡಿ.ಹುಲುಗಪ್ಪ ಅವರ ನೇತೃತ್ವದಲ್ಲಿ ರಾಜಶೇಖರ್, ಪರಮೇಶ್ವರಪ್ಪ ಹಾಗೂ ಸಿಬ್ಬಂದಿಗಳ ಒಳಗೊಂಡ ತಂಡವನ್ನು ರಚಿಸಿದ್ದರು.

ಪಿಎಸ್‍ಐ ಪರಮೇಶ್ವರಪ್ಪ ಹಾಗೂ ಸಿಬ್ಬಂದಿ ಗಸ್ತಿನಲ್ಲಿ ತಿರುಗುತ್ತಿದ್ದಾಗ, ನಗರದ ಕನಕದಾಸ ವೃತ್ತದ ಬಳಿ ಅನುಮಾನಸ್ಪದವಾಗಿ ಬೈಕ್ ಮೇಲೆ ಬರುತ್ತಿದ್ದ ವ್ಯಕ್ತಿಯನ್ನು ಹಿಡಿದು, ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡಿದ ಬಗ್ಗೆ ತಿಳಿಸಿದ್ದಾನೆಂದು ಮಾಹಿತಿ ನೀಡಿದರು.

ನಂತರ ಆತನನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದಾಗ, ಸುಮಾರು ದಿನಗಳಿಂದ ಬೈಕ್‍ಗಳನ್ನು ಕಳ್ಳತನ ಮಾಡಿದ ಬಗ್ಗೆ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಗರ ಸೇರಿದಂತೆ ವಿವಿಧ ಕಡೆ ರಸ್ತೆ ಬದಿ ನಿಲ್ಲಿದ್ದ ಬೈಕ್‍ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಅವರು ಮಾಹಿತಿ ನೀಡಿದರು.

0 Shares

By admin

Leave a Reply

Your email address will not be published. Required fields are marked *