ಬಾಗಲಕೋಟೆ : ಉಪ ಚುನಾವಣೆಯಲ್ಲಿ ಪ್ರತಿ ಹಳ್ಳಿಗೂ ಸೂಟ್ ಕೇಸ್ ಗಳು ಬರುತ್ತಿವೆ. ಮೂರು ದಿನದ ಕೂಲಿಕೊಟ್ಟು ಮತ ಖರೀದಿ ಮಾಡುವ ಕೆಲಸ ನಡೆಯುತ್ತದೆ. ಮತದ ಮೌಲ್ಯ ಕಳೆಯಬೇಡಿ, ನೈತಿಕ ಶಕ್ತಿ ಉಳಿಸಿಕೊಂಡು ನಿಮ್ಮ ಕೆಲಸ ಮಾಡುವ ವೀರಣ್ಣ ಚರಂತಿಮಠ ಅವರನ್ನು ಆಯ್ಕೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಮನವಿ ಮಾಡಿದರು.
ಬಾಗಲಕೋಟೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಸರಿಕಟ್ಟಿ, ಕಡಿಯಾಲ, ಕಲ್ಲಾಪುರ, ಯರನಾಯ್ಕ್ ನಾಳ, ಸುರಳಿಕಲ್ಲು, ಎಕೆ ಬೂದಿಹಾಳ ಹಾಗೂ ಅಂಬ್ಲಿಕೊಪ್ಪ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ, ಅವರ ಪರವಾಗಿ ಮತಯಾಚನೆಯನ್ನು ಮಾಡಿದರು.
ಈ ಚುನಾವಣೆ ಕೇವಲ ಬಾಗಲಕೋಟೆಗೆ ಸೀಮಿತವಾಗಿಲ್ಲ ರಾಜ್ಯದ ರಾಜಕಾರಣ ಮತ್ತು ನಮ್ಮ ನಿಮ್ಮೆಲ್ಲರ ಬದುಕಿನ ಭವಿಷ್ಯ ಬದಲಾವಣೆ ಮಾಡುವ ಚುನಾವಣೆ ಕಾಂಗ್ರೆಸ್ ಬಹಳಷ್ಟು ಸುಳ್ಳು ಹೇಳುತ್ತ ಅಧಿಕಾರಕ್ಕೆ ಬಂದಿದೆ. ರೈತರಿಗೆ ನಾವು ನೀರಾವರಿ ಮಾಡಿ ಕೊಡುತ್ತೇವೆ ಎಂದು ಹೇಳಿದರು. ಈ ಭಾಗದಲ್ಲಿ ಮುಳುಗಡೆಯಾಗುವ ಪ್ರದೇಶ ತಾವು ಮುಳುಗಡೆಯಾಗಿ ಬೇರೆಯವರಿಗೆ ನೀರು ಕೊಡುವ ಅತಿ ಹೆಚ್ಚು ಜನರಿರುವುದು ಬಾಗಲಕೋಟೆಯಲ್ಲಿ.
ಮುಳುಗಡೆಯಾಗುವುದೆಂದರೆ ನಮ್ಮ ಅಜ್ಜ ಮುತ್ತಜ್ಞ ಕಟ್ಟಿಕೊಂಡ ಬದುಕನ್ನು ಬಿಟ್ಟು ನಾವು ಹೊಸ ಬದುಕು ಕಟ್ಟಿಕೊಳ್ಳಬೇಕು. ಅದಕ್ಕೆ ಎಷ್ಟು ಕೆಲಸ ಮಾಡಬೇಕು. ತಯಾರಿ ಮಾಡಬೇಕು. ನಾವು 21 ಹಳ್ಳಿಗಳನ್ನು ಸ್ಥಳಾಂತರ ಮಾಡಲು ತೀರ್ಮಾನ ಮಾಡಿದ್ದೇವು. ಯಾರು ಮುಳುಗಡೆಯಾಗುತ್ತಾರೆ. ಅವರು ನೀರಾವರಿ ಪಡೆದವರಿಗಿಂತ ಅನುಕೂಲವಾಗಬೇಕು. ರೈತರಿಗೆ ಇದೊಂದು ದರಿದ್ರ ಸರ್ಕಾರ. ನಮ್ಮ ಪಧಾನಿಗಳು ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 6 ಸಾವಿರ ಕೊಡುತ್ತಿದ್ದರು. ನಮ್ಮ ಸಿಎಂ ಆಗಿದ್ದ ಯಡಿಯೂರಪ್ಪ 4 ಸಾವಿರ ಕೊಡುತ್ತಿದ್ದರು ಕಾಂಗ್ರೆಸ್ ಸರ್ಕಾರ ಅದನ್ನು ನಿಲಿಸಿತ್ತು. ಐಹೊಳೆಯಿಂದ ಹಿಡಿದು ಮುಳುಗಡೆಯಾಗಿರುವ 64 ಹೊಸ ಗ್ರಾಮಗಳನ್ನ ಸ್ಥಳಾಂತರಿಸಿದೆವು.
60 ಸಾವಿರ ಮನೆಗಳನ್ನು ಕಟ್ಟಿದ್ದೇವೆ. ಕಾಂಗ್ರೆಸ್ ಕಾಲದಲ್ಲಿ ಪ್ರವಾಹ ಬಂದಾಗ ರೈತರಿಗೆ ನಯಾ ಪೈಸೆ ಕೊಟ್ಟಿಲ್ಲ. ನಾವು ಸುಮಾರು 7 ಲಕ್ಷ ರೈತರಿಗೆ ಎರಡು ಪಟ್ಟು ಪರಿಹಾರ ನೀಡಿದೆವು. ಕೇಂದ್ರ ಸರ್ಕಾರ ಒಣ ಬೇಸಾಯಕ್ಕೆ 6 ಸಾವಿರ ಕೊಟ್ಟರೆ ನಾವು 13 ಸಾವಿರ ಕೊಟ್ಟೆವು. ನೀರಾವರಿ 13 ರ ಕೊಟ್ಟರೆ ನಾವು 18 ಸಾವಿರ ಕೊಟೆವು. ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಟ್ಟೆವು. ಪೆಟ್ರೋಲ್, ಡಿಸೇಲ್ ಕೊಟ್ಟೆವು ಅದನ್ನು ನಿಲ್ಲಿಸಿದರು. ಯಶಸ್ವಿನಿ ಜಾರಿ ಮಾಡಿದೆವು ಅದು ಕುಂಟತ್ತ ಸಾಗುತ್ತಿದೆ. ಈ ಸರ್ಕಾರ ರೈತರಿಗೆ ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ಗಾರೆಂಟಿ ಅಂತ ಹೇಳುತ್ತಾರೆ. ಮನೆಯಲ್ಲಿ ಐದಾರು ಜನ ಹೆಣುಮಕ್ಕಳಿರುತ್ತಾರೆ, ಒಬ್ಬರಿಗೆ ಮಾತ್ರ ಗೃಹಲಕ್ಷ್ಮಿ ಕೊಡುತ್ತಾರೆ. ಇದರಿಂದ ಮನೆಯಲ್ಲಿ ಜಗಳ ಹಚ್ಚುತ್ತಿದ್ದಾರೆ. ಬಸ್ ಫ್ರೀ ಮಾಡಿ ವಿದ್ಯಾರ್ಥಿಗಳಿಗೆ, ಆರೋಗ್ಯ ಕೆಟ್ಟವರಿಗೆ ಸೀಟು ಸಿಗದಂತೆ ಆಗಿದೆ. ಗ್ಯಾರೆಂಟಿ ಕೊಡುವ ಮೊದಲು ಸಾಲಾ ಮಾಡದೇ ಹೇಗೆ ಹಣ ಹೊಂದಿಸುತ್ತೀರಿ, ಅಭಿವೃದ್ಧಿ ನಿಲ್ಲಿಸದೇ ಗ್ಯಾರೆಂಟಿ ಕೊಡಿ, ಆಸ್ಪತ್ರೆ, ಶಾಲೆ ಕಟ್ಟಡ ಇಲ್ಲ. ಶಿಕ್ಷಣ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ.
ಹೆಣ್ಣು ಮಕ್ಕಳಿಗೆ ಸುರಕ್ಷತೆ ಇಲ್ಲ. ಹಳ್ಳಿಗಳಲ್ಲಿ ಇಸ್ಪೀಟು ಒಸಿ ಮುಕ್ತವಾಗಿ ನಡೆಯುತ್ತಿದೆ. ಡಗ್ಸ್ ಕಿರಾಣಿ ಅಂಗಡಿಯಲ್ಲಿ ಸಿಗುತ್ತಿದೆ ಸಿದ್ದರಾಮಯ್ಯ ಸಾರಾಯಿ ಆದಾಯದ ಮೇಲೆಯೇ ಸರ್ಕಾರ ನಡೆಸುತ್ತಿದ್ದಾರೆ. ಇಡೀ ರಾಜ್ಯವನ್ನು ಹಾಳು ಮಾಡಿರುವ ಶ್ರೇಯಸ್ಸು ಕಾಂಗ್ರೆಸ್‌ಗೆ ಸಲ್ಲತ್ತದೆ ಎಂದರು.
ಮತ ಮಾರಿಕೊಳ್ಳಬೇಡಿ – ಮೂರು ವರ್ಷಗಳ ಹಿಂದೆ ವೀರಣ್ಣ ಚರಂತಿಮಠ ಶಾಸಕರಾಗಿದ್ದರು. ಆಗ ಪ್ರತಿ ಗ್ರಾಮದಲ್ಲಿ ಐದಾರು ಕೆಲಸ ಮಾಡಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕಾಂಗ್ರೆಸ್ ಶಾಸಕರು ಏನು ಮಾಡಿದ್ದಾರೆ ಎಂದು ತಿಳಿಸಬೇಕು. ವೀರಣ್ಣ ಚರಂತಿಮಠ ಅವರು ನಯಾ ಪೈಸೆ ಕೇಳುವುದಿಲ್ಲ. ದೀಪಾ ಹಚ್ಚಿ ಹುಡುಕಿದರೂ ಇಂತಹ ವ್ಯಕ್ತಿ ಸಿಗುವುದಿಲ್ಲ. ಇದು ನಿಮ್ಮ ಪುಣ್ಯ ಬಾಗಲಕೋಟೆಗೆ 2300 ಕೋಟಿ ರೂ. ಪಡೆದುಕೊಂಡಿದ್ದಾರೆ.
ನಾನು ಸಿಎಂ ಆಗಿ ಕೊಟ್ಟಿದ್ದೇನೆ ಎನ್ನುವುದಕ್ಕಿಂತ ಶಾಸಕರಾಗಿ ಜನರ ಪರವಾಗಿ ಚರಂತಿಮಠ ಪಡೆದುಕೊಂಡಿದ್ದಾರೆ. ಗ್ರಾಮೀಣ ಪ್ರದೇಶ ಬಾಗಲಕೋಟೆ ಸಮಗ್ರ ಅಭಿವೃದ್ಧಿ ಆಗಬೇಕೆಂದರೆ ವೀರಣ್ಣ ಚರಂತಿ ಮಠ ಅವರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು. ಚರಂತಿಮಠ ಅವರ ಗೆಲುವನ್ನು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಸೂಟ್ ಕೇಸ್‌ಗಳು ಹಳ್ಳಿಹಳ್ಳಿಗೆ ಬಂದಿವೆ.
ಏಜೆಂಟರು ಬಂದು ಮನೆ ಮನೆಗೆ ರೇಟ್ ಫಿಕ್ಸ್ ಮಾಡುತ್ತಾರೆ. ಮೂರು ದಿನದ ಕೂಲಿಕೊಟ್ಟು ಮತ ಖರೀದಿ ಮಾಡುವ ಕೆಲಸ ನಡೆಯುತ್ತದೆ. ಮತದ ಮೌಲ್ಯ ಕಳೆಯಬೇಡಿ, ನೈತಿಕ ಶಕ್ತಿ ಉಳಿಸಿಕೊಂಡು ನಿಮ್ಮ ಕೆಲಸ ಮಾಡುವ ವೀರಣ್ಣ ಚರಂತಿಮಠ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ, ಅಭ್ಯರ್ಥಿಯಾದ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ ಸಂಕನೂರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
