0 Shares

ಜನ ನಾಯಗನ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆಗಳನ್ನು ಕೆಲ ಕಾಣದ ಕೈಗಳು ಹಾಳು ಮಾಡಿವೆ. ಸಿನಿಮಾ ರಿಲೀಸ್​​ಗೂ ಮೊದಲೇ ಪ್ರಮುಖ ದೃಶ್ಯಗಳನ್ನು ಲೀಕ್ ಮಾಡಲಾಯಿತು. ಈಗ ಎಸ್​​ಎಸ್​ ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಚಿತ್ರಕ್ಕೂ ಇದೇ ರೀತಿಯ ತೊಂದರೆ ಎದುರಾಗಿದೆ. ಸಿನಿಮಾದ ಕೆಲ ಆ್ಯಕ್ಷನ್ ದೃಶ್ಯಗಳನ್ನು ಸೋರಿಕೆ ಮಾಡಲಾಗಿದೆ. ಇದು ಚಿತ್ರತಂಡದ ಚಿಂತೆ ಹೆಚ್ಚಿಸಿದೆ.

ರಾಜಮೌಳಿ ಅವರು ತಮ್ಮ ಸಿನಿಮಾ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳಲು ಬಯಸುತ್ತಾರೆ. ಯಾವುದೇ ಘೋಷಣೆ ಇದ್ದರೂ ದೊಡ್ಡ ಮಟ್ಟದಲ್ಲಿ ಮಾಡಲು ಅವರು ಬಯಸುತ್ತಾರೆ. ಈಗ ಈ ಎಲ್ಲಾ ಎಗ್ಸೈಟ್​​ಮೆಂಟ್​​ಗಳನ್ನು ಹಾಳು ಮಾಡುವ ಕೆಲಸ ಆಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸಿನಿಮಾದ ಸೆಟ್ ಹಾಕಿ ಶೂಟ್ ಮಾಡುತ್ತಿದ್ದರೂ ಕೆಲವರು ಪ್ರಮುಖ ದೃಶ್ಯಗಳನ್ನು ಲೀಕ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಆ್ಯಕ್ಷನ್ ದೃಶ್ಯ ಶೂಟ್ ಮಾಡಲಾಗಿದೆ. ಅವುಗಳನ್ನು ಸೋರಿಕೆ ಮಾಡಲಾಗಿದೆ. ಈ ಮೊದಲು ವಿದೇಶದಲ್ಲಿ ಶೂಟ್ ಮಾಡಿದ ದೃಶ್ಯಗಳನ್ನು ಕೂಡ ಲೀಕ್ ಮಾಡಲಾಗಿತ್ತು.

ದೊಡ್ಡ ಸಿನಿಮಾಗಳ ಬಗ್ಗೆ ಎಲ್ಲರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ, ಈ ರೀತಿಯ ದೃಶ್ಯಗಳನ್ನು ಲೀಕ್ ಮಾಡಿದರೆ ಆ ಪೇಜ್​​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂಬಾಲಕರು ಸಿಗುತ್ತಾರೆ. ಹೀಗಾಗಿ ಆ ರೀತಿ ಮಾಡಲಾಗಿದೆ. ರಾಜಮೌಳಿ ಸಿನಿಮಾ ಆಲೋಚನೆಗಳು ಬೇರೆಯದೇ ರೀತಿ ಇರುತ್ತವೆ. ಸಾಮಾನ್ಯ ದೃಶ್ಯಗಳನ್ನು ವಿಎಫ್​ಎಕ್ಸ್ ಬಳಸಿ ಅದ್ದೂರಿಯಾಗಿ ಕಾಣುವಂತೆ ಮಾಡುತ್ತಾರೆ.

ಹೀಗಾಗಿ, ಲೀಕ್ ಆಗುವ ದೃಶ್ಯಗಳನ್ನು ನೋಡಿದರೂ ಏನೂ ವಿಶೇಷ ಎನಿಸುವುದಿಲ್ಲ. ಸಿನಿಮಾ ಮೇಲಿನ ನಿರೀಕ್ಷೆ ಇದರಿಂದ ಕಡಿಮೆ ಆಗುವ ಭಯ ರಾಜಮೌಳಿ ಅವರನ್ನು ಬಹುವಾಗಿ ಕಾಡುತ್ತಿದೆ. ‘ವಾರಣಾಸಿ’ ಸಿನಿಮಾಗೆ ರಾಜಮೌಳಿ ನಿರ್ದೇಶನ ಇದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಮುಂದಿನ ವರ್ಷ ಏಪ್ರಿಲ್​​ನಲ್ಲಿ ಚಿತ್ರ ತೆರೆಗೆ ಬರಲಿದೆ.

0 Shares

By admin

Leave a Reply

Your email address will not be published. Required fields are marked *