0 Shares

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಕ್ರೇಜ್ ಶುರುವಾಗಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯಗಳನ್ನು ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ಗುಡ್​ ನ್ಯೂಸ್​ ನೀಡಿದೆ.

ಏಪ್ರಿಲ್ 15, 18 ಮತ್ತು 24ರಂದು ನಡೆಯಲಿರುವ ಪಂದ್ಯಗಳ ದಿನದಂದು ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ನಮ್ಮ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ಏಪ್ರಿಲ್ 15, 18 ಮತ್ತು 24ರಂದು ನಡೆಯುವ ಐಪಿಎಲ್ ಪಂದ್ಯಗಳಿಗೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಬಿಎಂಆರ್​ಸಿಎಲ್​ ಘೋಷಿಸಿದೆ. ಐಪಿಎಲ್ ಅಭಿಮಾನಿಗಳಿಗೆ ಸಹಕಾರಿ ಆಗುವ ದೃಷ್ಟಿಯಲ್ಲಿ ಹೆಚ್ಚುವರಿ ಸೇವೆಯನ್ನು ಒದಗಿಸಲಾಗುತ್ತಿದೆ. ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ಮೆಟ್ರೋ ಸಂಚಾರ ಇರಲಿದೆ.

ಕೊನೆಯ ರೈಲುಗಳ ಸಮಯ – ವೈಟ್‌ಫೀಲ್ಡ್ : ರಾತ್ರಿ 12:30 ಗಂಟೆಗೆ, ಚಲ್ಲಘಟ್ಟ : ರಾತ್ರಿ 12:45 ಗಂಟೆಗೆ, ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಮಾದವಾರ : ರಾತ್ರಿ 12:45 ಗಂಟೆಗೆ, ಬೊಮ್ಮಸಂದ್ರ : ರಾತ್ರಿ 1 ಗಂಟೆಗೆ, ಆರ್.ವಿ. ರಸ್ತೆ : ರಾತ್ರಿ 2 ಗಂಟೆಗೆ, ಮೆಜೆಸ್ಟಿಕ್‌ನಿಂದ ನಾಲ್ಕೂ ದಿಕ್ಕುಗಳಿಗೆ ತಡರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ.

ಐಪಿಎಲ್ ಟಿಕೆಟ್‌ನಲ್ಲೇ ಮೆಟ್ರೋ ಕ್ಯೂಆರ್ ಕೋಡ್ ಲಭ್ಯವಿದ್ದು, ಎರಡು ಮಾರ್ಗಗಳ ಪ್ರಯಾಣಕ್ಕೆ ಇದನ್ನು ಬಳಸಬಹುದಾಗಿದೆ. ಸ್ಟೇಡಿಯಂಗೆ ಹತ್ತಿರವಿರುವ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳನ್ನು ಬಳಸಲು ಸೂಚಿಸಲಾಗಿದೆ. ಅದೇ ರೀತಿಯಾಗಿ ನಿಲ್ದಾಣಗಳಲ್ಲಿ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 30 ರೂ, ಕಾರುಗಳಿಗೆ 60 ರೂ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗಿದೆ.

ಆ ಮೂಲಕ ಟ್ರಾಫಿಕ್ ಜಾಮ್ ತಪ್ಪಿಸಲು ಮೆಟ್ರೋ ಬಳಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲ ದೃಷ್ಟಿಯಿಂದ ಬಿಎಂಟಿಸಿ ಬಸ್​ಗಳು ವಿಶೇಷ ಕಾರ್ಯಾಚರಣೆ ನಡೆಸಲಿವೆ. ಪಂದ್ಯ ನಡೆಯುವ ದಿನದಂದು ಬಿಎಂಟಿಸಿ ಬಸ್‌ಗಳ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ಬಿಎಂಟಿಸಿ ಬಸ್​ಗಳನ್ನು ನಿಯೋಜಿಸಿದೆ.

0 Shares

By admin

Leave a Reply

Your email address will not be published. Required fields are marked *