0 Shares

ಭಾರತದ ಸಂವಿಧಾನ ದಿನಾಚರಣೆಯ ಇತಿಹಾಸ, ಅದರ ಮಹತ್ವ ಮತ್ತು ಹಿನ್ನೆಲೆಯನ್ನು ವಿವರಿಸುತ್ತಾ, ಸಂವಿಧಾನ ಶಿಲ್ಪಿ , ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಪ್ರತಿಷ್ಠಾಪಿಸಿದ ಮಹಾನ್ ಚಿಂತಕಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಫೂರ್ತಿದಾಯಕ ನುಡಿಮುತ್ತುಗಳು ಹಾಗೂ ಅವರ ಆದರ್ಶಗಳನ್ನು ಇಲ್ಲಿ ನೀಡಲಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತ ಕಂಡ ಮಹಾನ್ ನಾಯಕರಲ್ಲಿ ಒಬ್ಬರು. ನಮ್ಮ ದೇಶದ ಸಂವಿಧಾನದ ರೂಪಶಿಲ್ಪಿಯಾಗಿರುವ ಬಾಬಾಸಾಹೇಬ್ ಅಂಬೇಡ್ಕರ್, ಸಮಾನತೆ ಮತ್ತು ನ್ಯಾಯದ ಮೌಲ್ಯಗಳನ್ನು ಪ್ರತಿಷ್ಠಾಪಿಸಿದ ಮಹಾನ್ ಚಿಂತಕರು. ಅವರ ಜೀವನವು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದ್ದು, ಅವರ ಆದರ್ಶಗಳು ಸಮಾಜದ ಬೆಳವಣಿಗೆಗೆ ದಾರಿದೀಪವಾಗಿದೆ.

1891ರ ಏಪ್ರಿಲ್ 14ರಂದು ಮಧ್ಯಪ್ರದೇಶದ ಮಾಹೋದಲ್ಲಿ ಜನಿಸಿದ ಅಂಬೇಡ್ಕರ್ ಅವರು, ಅಸ್ಪೃಶ್ಯತೆ ಆಳವಾಗಿ ಬೇರೂರಿದ್ದ ಕಾಲದಲ್ಲಿ ಬಾಲ್ಯವನ್ನು ಕಳೆದರು. ಅನೇಕ ಸಂಕಷ್ಟಗಳನ್ನು ಎದುರಿಸಿದರೂ, ಶಿಕ್ಷಣ ಮತ್ತು ಸಂಕಲ್ಪದ ಮೂಲಕ ಅವರು ತಮ್ಮ ಜೀವನವನ್ನು ರೂಪಿಸಿಕೊಂಡರು. ಕಷ್ಟಗಳನ್ನು ಮೆಟ್ಟಿ ನಿಂತು, ಭವ್ಯ ಭಾರತದ ಕನಸನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಅವರು ಹೆಜ್ಜೆ ಹಾಕಿದರು.

ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ನಿರಂತರ ಹೋರಾಟ ನಡೆಸಿದ ಅಂಬೇಡ್ಕರ್ ಅವರು, ದಲಿತರು, ಕಾರ್ಮಿಕರು ಹಾಗೂ ಮಹಿಳೆಯರ ಹಕ್ಕುಗಳಿಗಾಗಿ ಧ್ವನಿಯಾದರು. ಸ್ವಾಭಿಮಾನದಿಂದ ಬದುಕುವ ಹಕ್ಕನ್ನು ಪ್ರತಿಯೊಬ್ಬರಿಗೂ ತಲುಪಿಸಲು ಶ್ರಮಿಸಿದರು. ಅವರ ಈ ಮಹಾನ್ ಕೊಡುಗೆಯನ್ನು ಸ್ಮರಿಸಲು ಪ್ರತಿವರ್ಷ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ.

ಇಂತಹ ಮಹತ್ವದ ದಿನದಂದು, ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಫೂರ್ತಿದಾಯಕ ಮಾತುಗಳು ಮತ್ತು ಆದರ್ಶಗಳು ನಮ್ಮ ಜೀವನಕ್ಕೆ ದಿಕ್ಕು ತೋರಿಸುವ ಬೆಳಕಾಗಿವೆ. ಇಂತಹ ಮಹತ್ವದ ದಿನದಂದು ಸ್ಮರಿಸಿಕೊಳ್ಳಬಹುದಾದ ಅವರ ಸಂದೇಶಗಳು ಇಲ್ಲಿವೆ.

  1. ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ. ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ.
  2. ಜ್ಞಾನ ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರ, ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು.
  3. ಇತಿಹಾಸವನ್ನು ಮರೆತವರು ಇತಿಹಾಸ ನಿರ್ಮಿಸಲಾರರು.
  4. ಸಂವಿಧಾನ ದುರ್ಬಳಕೆಯಾಗುತ್ತಿದೆ ಎಂದು ಗೊತ್ತಾದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ.
  5. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಕಲಿಸುವ ಧರ್ಮ ನನಗೆ ಇಷ್ಟ.
  6. ಮಹಿಳೆಯರು ಸಾಧಿಸಿದ ಪ್ರಗತಿಯ ಆಧಾರದ ಮೇಲೆ ನಾನು ಸಮುದಾಯವೊಂದರ ಅಭಿವೃದ್ಧಿಯನ್ನು ಅಳೆಯುತ್ತೇನೆ.
  7. ಮನಸ್ಸನ್ನು ಬೆಳೆಸುವುದು ಮಾನವ ಅಸ್ತಿತ್ವದ ಅಂತಿಮ ಗುರಿಯಾಗಬೇಕು.
  8. ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ.
    ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ.
  9. ದೊಡ್ಡ ಪ್ರಯತ್ನಗಳನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿಲ್ಲ.
    ನೀವು ಮನಸ್ಸಿನಿಂದ ಮುಕ್ತರಾಗಿದ್ದರೆ ನೀವು ನಿಜವಾಗಿಯೂ ಸ್ವತಂತ್ರರು.
  10. ಚೆನ್ನಾಗಿ ಕಾಣಬೇಕು ಎಂದು ಬದುಕುವ ಬದಲು ಒಳ್ಳೆಯವರಾಗಿ ಬದಕಲು ಪ್ರಯತ್ನಿಸಿ.
  11. ಮನಸ್ಸಿನ ಅಭಿವೃದ್ಧಿ ಮಾನವ ಜನಾಂಗದ ಅಂತಿಮ ಗುರಿಯಾಗಿರಬೇಕು.
  12. ಎಲ್ಲಿಯವರೆಗೆ ನೀವು ಸಾಮಾಜಿಕ ಸ್ವಾತಂತ್ರ್ಯದಿಂದ ವಂಚಿತರಾಗಿರುತ್ತೀರೋ, ಅಲ್ಲಿಯವರೆಗೆ ನೀವು ಕಾನೂನಿನಿಂದ ಯಾವುದೇ ಸ್ವಾತಂತ್ರ್ಯವನ್ನು ಪಡೆದರೂ ಅದರ ಪ್ರಯೋಜನ ಬರುವುದಿಲ್ಲ.
  13. ನೀವು ಹುಲಿ ಸಿಂಹಗಳಾಗಿ ಬದುಕಿರಿ, ಯಾಕೆಂದರೆ ಬಲಿಕೊಡುವುದು ಕುರಿಕೋಳಿಗಳನ್ನೇ ಹೊರತು ಹುಲಿಸಿಂಹಗಳನ್ನಲ್ಲ.
  14. ನಾವು ಮೊದಲನೆಯದಾಗಿ ಮತ್ತು ಕೊನೆಯದಾಗಿ ಭಾರತೀಯರೇ ಆಗಿದ್ದೇವೆ.
0 Shares

By admin

Leave a Reply

Your email address will not be published. Required fields are marked *