ಬೆಂಗಳೂರು : ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಜಂಟಿ ಆಯುಕ್ತರಾದ ಶ್ರೀ ಹೇಮಂತ್ ಶರಣ್ ರವರು ಸಿ.ವಿ.ರಾಮನ್ ನಗರ ವಿಭಾಗದ ವಾರ್ಡ್ ನಂ.58 ರ ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನ ಮಸ್ಟರಿಂಗ್ ಸೆಂಟರ್ ನಲ್ಲಿ ಪೌರಕಾರ್ಮಿಕರಿಗೆ, ತೋಟಗಾರಿಕೆ ಮಾಲಿಗಳಿಗೆ, ಗ್ಯಾಂಗ್ ಮೇನ್‌ಗಳಿಗೆ ಸಿಹಿ ವಿತರಿಸಿದರು. ಈ ಸಂದರ್ಭದಲ್ಲಿ BSWML, DGM ಭೀಮೇಶ್ ನಾಯಕ್, ಎಜಿಎಂ ಹಾಜರಿದ್ದರು.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಸುಮಾರು 4,000 ಜನ ಪೌರಕಾರ್ಮಿಕರು, ತೋಟಗಾರಿಕೆ ಮಾಲಿಗಳು, ಗ್ಯಾಂಗ್ ಮೇನ್ ಗಳಿಗೆ ಎಲ್ಲಾ 6 ವಿಭಾಗಗಳಲ್ಲಿ ಕೆ. ಎಂ.ಎಫ್ ಉತ್ಪಾದಿತ ಸಿಹಿಯನ್ನು ಆಯಾ ವಿಭಾಗಗಳಲ್ಲಿ ವಿತರಣೆ ಮಾಡಲಾಗಿದೆ.
