ಬೆಂಗಳೂರು : ಇಂದು ಆರ್ಸಿಬಿ ಪಂದ್ಯಗಳ ನಡೆಸುವ ಕುರಿತು ಸಭೆ ವಿಚಾರವಾಗಿ ನಮ್ಮ ಅಧಿಕಾರಿಗಳು ಇಂದು ವರದಿ ಸಲ್ಲಿಸ್ತಾರೆ. ಆರ್ಸಿಬಿ, ಕೆಎಸ್ಸಿಎ ನವ್ರು ಅವರ ಅಭಿಪ್ರಾಯ ಹೇಳ್ತಾರೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ನ್ಯಾ.ಕುನ್ಹಾ ಅವರ ವರದಿಯ ಶಿಫಾರಸುಗಳು ಎಷ್ಟು ಜಾರಿಮಾಡಲಾಗಿದೆ. ಇಂದು ಸಂಜೆ ಸಚಿವ ಸಂಪುಟ ಸಭೆ ಇದ್ದು, ಸಭೆಯಲ್ಲೂ ಚರ್ಚೆ ಮಾಡಿ, ಎಲ್ಲವನ್ನೂ ಗಮನಿಸಿ ತೀರ್ಮಾನ ಮಾಡುತ್ತೇವೆ. ಎಸ್ಐಆರ್ ಬಗ್ಗೆ ಚರ್ಚೆ ಸಹ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಸಂಪುಟ ಸಭೆಯಲ್ಲೂ ಎಸ್ಐಆರ್ಎ ಬಗ್ಗೆ ಚರ್ಚೆ, ಇನ್ನೂ ಹೆಚ್ಚಿನ ಮಾಹಿತಿ ಬೇಕು ಅಂತ ಕೇಳಿದ್ರು, ಸುಪ್ರೀಂಕೋರ್ಟ್ ಆದೇಶವೂ ಗಮನದಲ್ಲಿರಿಸಿಕೊಂಡು ಚರ್ಚಿಸಲಾಗುತ್ತದೆ ಎಂದರು.
