0 Shares

ದೇವನಹಳ್ಳಿ : ಹೋಟೇಲ್ ಸಿಬ್ಬಂದಿ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆಸಿದ್ದಾರೆ. ಹೋಟೇಲ್ ಮ್ಯಾನೇಜರ್ ಪೊಲೀಸರ ಮೇಲೆ ದೇವನಹಳ್ಳಿ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಎಫ್‌ಐಆರ್‌ ದಾಖಲಿಸಿರುವ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಏರ್‌ಪೋರ್ಟಿನ ಆಲ್ಫಾ ಬಿಲ್ಡಿಂಗ್‌ನ ಹೋಟೇಲ್‌ನಲ್ಲಿ ನಡೆದಿದೆ.

ರಾತ್ರಿ ಪಾಳಿಯದಲ್ಲಿದ್ದ, ಸಿಬ್ಬಂದಿ ಹೋಟೇಲ್‌ಗೆ ಹೋಗಿ ಕಾಫಿ ತರಲು ಡಿಮ್ಯಾಂಡ್ ಮಾಡಿದ್ದಾರೆ. ಕಾಫಿ ಕೊಡಲು ಟೋಕನ್ ತರಲು ತಿಳಿಸಿದ್ದ, ಹೋಟೇಲ್ ಸಿಬ್ಬಂದಿ. ನಮ್ಮ ಬಳಿಯೇ ಟೋಕನ್ ಕೇಳ್ತೀಯ ಎಂದು ಸಿಬ್ಬಂದಿಗೆ ಪೊಲೀಸ್‌ ಅವಾಜ್ ಹಾಕಿ ಹಲ್ಲೆ ಮಾಡಿದ್ದಾರೆ.

ಕೈಗಳಿಂದ ಮುಷ್ಠಿಕಟ್ಟಿ ಮುಖಕ್ಕೆ ಮತ್ತು ಭುಜಕ್ಕೆ ಹಲ್ಲೆ ನಡೆಸಿ, ಕೆಂಪೇಗೌಡ ಏರ್ ಪೋರ್ಟ್ ಠಾಣಾ ಸಿಬ್ಬಂದಿ ಗಂಗರಾಜು, ಬಾಲಪ್ಪ,ಕುಮಾರ್ ಎಂಬ ಪೊಲೀಸರ ಮೇಲೆ ದೂರು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಕೆಂಪೇಗೌಡ ಏರ್‌ಪೋರ್ಟ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

0 Shares

By admin

Leave a Reply

Your email address will not be published. Required fields are marked *