0 Shares

ಬೆಂಗಳೂರು : ನಗರದ ಬನಶಂಕರಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಬೊಲೆರೊ ವಾಹನದಲ್ಲಿ ಓಡಾಟ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಶೀರ್ವಾದ ಮಾಡುವ ನೆಪದಲ್ಲಿ ಹೆಣ್ಣುಮಕ್ಕಳನ್ನು ಗ್ಯಾಂಗ್​​ ಕರೆಯುತ್ತಿದೆ ಎಂದು ದೂರಲಾಗಿದೆ.

ರಸ್ತೆಯಲ್ಲಿ ತೆರಳುತ್ತಿರುವ ಬೊಲೆರೋ ವಾಹನ ಮನೆಯೊಂದರ ಗೇಟ್​​ ಬಳಿ ಶಾಲಾ ಬಾಲಕಿ ಕಾಣುತ್ತಿದ್ದಂತೆ ನಿಂತಿದೆ. ಬಳಿಕ ಹಿಮ್ಮುಖವಾಗಿ ಹೋಗಿ ಬಾಲಕಿ ಬಳಿ ವಾಹನದಲ್ಲಿದ್ದವರು ಮಾತನಾಡಿದ್ದಾರೆ. ಈ ವೇಳೆ ಆಕೆ ಮನೆಯವರನ್ನು ಕರೆದಿದ್ದು, ಅವರು ವಿಚಾರಿಸುತ್ತಿದ್ದಂತೆ ವಾಹನ ಸಮೇತ ಗ್ಯಾಂಗ್​​ ಸ್ಥಳದಿಂದ ಕಾಲ್ಕಿತ್ತಿದೆ. ವೈರಲ್​​ ವಿಡಿಯೋ ಬಗ್ಗೆ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದು, ಈ ಸಂಬಂಧ ಇಲ್ಲಿಯವರೆಗೂ ಯಾವುದೇ ಕೇಸ್​​ ದಾಖಲಾಗಿಲ್ಲ ತಿಳಿದುಬಂದಿದೆ.

0 Shares

By admin

Leave a Reply

Your email address will not be published. Required fields are marked *