0 Shares

ಬೆಂಗಳೂರು : ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದವರನ್ನು ಮತಬ್ಯಾಂಕಾಗಿ ದುರ್ಬಳಕೆ
ಸಿಎಂ ಸಿದ್ದರಾಮಯ್ಯನವರು ಹಿಂದೆ 170 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ಮಾಡಿಸಿ ರಾಹುಲ್ ಗಾಂಧಿಯವರು ಆದೇಶ ಮಾಡಿದರೆಂಬ ಕಾರಣಕ್ಕೆ ಜಾತಿಗಣತಿ ವರದಿಯನ್ನು ತಿಪ್ಪೆಗೆಸೆದಿದ್ದರು. ಈಗ ಎರಡನೇ ಬಾರಿ 450 ಕೋಟಿ ರೂ. ಖರ್ಚು ಮಾಡಿ ಜಾತಿಗಣತಿ ಮಾಡಿಸಿ, ತಮ್ಮ ಸ್ವಕ್ಷೇತ್ರದ ಪಕ್ಕದಲ್ಲಿರುವ ಕೆಆರ್‍ಎಸ್ ಡ್ಯಾಮಿಗೆ ಬಿಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಗಳು, ಕಾಂಗ್ರೆಸ್ ಸರಕಾರಕ್ಕೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದವರನ್ನು ಕೇವಲ ಮತಬ್ಯಾಂಕಾಗಿ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ವಿನಾ, ಈ ಸಮುದಾಯಗಳಿಗೆ, ಕಾಯಕ ಸಮುದಾಯಗಳಿಗೆ ಬದುಕು ಕಟ್ಟಿಕೊಡುವ ಕೆಲಸವನ್ನು ಮಾಡಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಜನರಿಗೆ ಕಿವಿಗೆ ಹೂವು ಮುಡಿಸುವ ಕೆಲಸ – ಹಿಂದೆ ಬಿಜೆಪಿ ಸರಕಾರ ರಾಜ್ಯದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರು ಅನೇಕ ಜನಪರ ಯೋಜನೆಗಳನ್ನು ನೀಡಿದ್ದರು. ಚುನಾವಣೆ ಸಂದರ್ಭ ದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿಯ ಆಸೆಯನ್ನು ಜನರ ಮುಂದೆ ಬಿಚ್ಚಿಟ್ಟಿತ್ತು. ಮತ್ತೊಂದು ಕಡೆ ಅಂದಿನ ಬಿಜೆಪಿ ಸರಕಾರದ ಮೇಲೆ ಶೇ 40 ಭ್ರಷ್ಟಾಚಾರದ ಆರೋಪ ಮಾಡಿ, ಕರ್ನಾಟಕದಲ್ಲಿ ರಾಮರಾಜ್ಯ, ಭ್ರಷ್ಟಾಚಾರರಹಿತ ಆಡಳಿತ ಕೊಟ್ಟು, ಅಭಿವೃದ್ಧಿಯ ಪರ್ವ ಪ್ರಾರಂಭಿಸುವುದಾಗಿ ಜನರ ಮುಂದೆ ಅವರ ಕನಸುಗಳನ್ನು ಬಿಚ್ಚಿಟ್ಟರು. ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಜನರಿಗೆ ಕಿವಿಗೆ ಹೂವು ಮುಡಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಭ್ರಷ್ಟಾಚಾರದ ವಿಷಯದಲ್ಲಿ ದೇಶಕ್ಕೇ ಇವರು ಮಾದರಿ – ಮುಡಾ ಮತ್ತಿತರ ಭ್ರಷ್ಟಾಚಾರದ ಹಗರಣಗಳನ್ನು ಪ್ರಸ್ತಾಪಿಸಿದ ಅವರು, ಭ್ರಷ್ಟಾಚಾರವನ್ನು ಯಾವ ರೀತಿ ಮಾಡಬಹುದು ಎಂಬುದಕ್ಕೆ ದೇಶಕ್ಕೇ ಇವರು ಮಾದರಿ ಆಗಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ಕಳೆದ ಎರಡೂಮುಕ್ಕಾಲು ವರ್ಷದಲ್ಲಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿಕೊಂಡು ಹಿಂದೂಗಳನ್ನು ಅಪಮಾನ ಮಾಡುತ್ತಿದೆ. ಅಲ್ಲದೇ ಯುವಜನತೆಗೂ ಅನ್ಯಾಯ ಮಾಡುತ್ತ ಬರುತ್ತಿದೆ ಎಂದು ಆಕ್ಷೇಪಿಸಿದರು.

ರಾಜ್ಯವನ್ನು ದಿವಾಳಿ ಮಾಡಿದ ಮುಖ್ಯಮಂತ್ರಿ.. ಇವರ ಆಡಳಿತದ ವೈಖರಿಯು ಅಭಿವೃದ್ಧಿ ಇಲ್ಲದೇ ಕರ್ನಾಟಕ ರಾಜ್ಯ ಎಲ್ಲ ವಿಚಾರದಲ್ಲಿ 20-25 ವರ್ಷ ಹಿಂದಕ್ಕೆ ಹೋಗುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ವಿಷಯದಲ್ಲಿ ರಾಜ್ಯವನ್ನು ದಿವಾಳಿ ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಪೂರೈಸಿದ್ದಾರೆ ಎಂದು ತಿಳಿಸಿದರು. ಸರಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಅತಿ ಶೀಘ್ರವೇ ನೇಮಕಾತಿ ಮಾಡುವುದಾಗಿ ಹೇಳಿದ್ದರು. ಸುಮಾರು 2.85 ಲಕ್ಷ ನೇಮಕಾತಿ ಪ್ರಕ್ರಿಯೆ ನೇಮಕಾತಿ ಮಾಡದೇ ಯುವಜನತೆಗೆ ದೋಖಾ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯ ಹೈಕೋರ್ಟಿನಲ್ಲಿ ಸಮರ್ಪಕ ವಾದ ಮಂಡಿಸದೇ, ಮೀಸಲಾತಿ ಮ್ಯಾಟ್ರಿಕ್ಸ್ ನೆಪ ಮಾಡಿಕೊಂಡು ಖಾಲಿ ಹುದ್ದೆ ಭರ್ತಿ ಮಾಡಿಲ್ಲ. ಯುವಜನತೆಗೆ ಅನ್ಯಾಯ ಮಾಡಿದ್ದಾರೆ. ಬೆಳಗಾವಿಯಲ್ಲಿ ಯುವಜನರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮುಂದಾದರೆ ರಾಜ್ಯ ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭ ಸೃಷ್ಟಿಯಾದುದು ನಿಜವಾದ ದುರಂತ ಎಂದು ಟೀಕಿಸಿದರು.

ಹಳೆಯ ಪಿಂಚಣಿ ಸ್ಕೀಂ ಜಾರಿ ಮಾಡಿಲ್ಲ.. 2006ರಿಂದ ಸೇವೆಗೆ ಸೇರಿದ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಸ್ಕೀಂ (ಒಪಿಎಸ್) ವಿಸ್ತರಿಸುವುದಾಗಿ ಹೇಳಿದ್ದರು. ಅದನ್ನೂ ತುದಿ ಮುಟ್ಟಿಸಿಲ್ಲ ಎಂದು ದೂರಿದರು. ಅಂಗನವಾಡಿ ಕಾರ್ಯಕರ್ತರ ಗೌರವಧನ 15 ಸಾವಿರಕ್ಕೆ ಏರಿಸುವುದಾಗಿ ಹೇಳಿದ್ದರು. ಆ ವಿಷಯದಲ್ಲೂ ಮುಖ್ಯಮಂತ್ರಿಗಳು ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು. ಆಶಾ ಕಾರ್ಯಕರ್ತರ ಗೌರವಧನವನ್ನೂ ಹೆಚ್ಚಿಸಿಲ್ಲ ಎಂದು ಆಕ್ಷೇಪಿಸಿದರು. ಬಿಸಿಯೂಟ ತಯಾರಕರ ಗೌರವಧನದ ಕುರಿತು ಚಕಾರ ಎತ್ತಿಲ್ಲ ಎಂದು ದೂರಿದರು.

ನೀರಾವರಿಗೆ ಹಣ ಹೇಳಿಕೆಗೇ ಸೀಮಿತ.. 5 ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗಾಗಿ 1.50 ಲಕ್ಷ ಕೋಟಿ ಕೊಡುವುದಾಗಿ ಭರವಸೆ ನೀಡಿ ಎಷ್ಟೋ ವರ್ಷವಾಗಿದೆ. ಇವತ್ತಿಗೂ ಅದರ ಕುರಿತು ಚಕಾರ ಎತ್ತುತ್ತಿಲ್ಲ. ಮೈಸೂರು- ಮಂಗಳೂರು- ಹುಬ್ಬಳ್ಳಿಗಳಲ್ಲಿ ಟೆಕ್ ಪಾರ್ಕ್ ನಿರ್ಮಿಸಿ 1 ಲಕ್ಷಕ್ಕೂ ಹೆಚ್ಚು ಯುವಜನತೆಗೆ ಉದ್ಯೋಗ ಸೃಷ್ಟಿಸುವ ಹೇಳಿಕೆ ಹಾಗೇ ಉಳಿದಿದೆ. 10 ಕೆಜಿ ಅಕ್ಕಿ ಕೊಡುವುದಾಗಿ ಜಾಹೀರಾತು ಕೊಟ್ಟಿದ್ದರು. ಆದರೆ, ಇವರು ಕೇಂದ್ರ ಸರಕಾರದ 5 ಕೆಜಿ ಕೊಡುತ್ತಿದ್ದು, ಇವರ 5 ಕೆಜಿ ಸರಿಯಾಗಿ ಕೊಡುತ್ತಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಸರಕಾರ ಕೇವಲ ಬೆಂಗಳೂರು, ಮೈಸೂರಿಗೆ ಸೀಮಿತ – ರಾಜ್ಯದ ಜನರಿಗೆ ಸುಳ್ಳು ಹೇಳಿಕೊಂಡು, ಅಹಿಂದ ನಾಯಕರೆಂದು ಹೇಳಿಕೊಂಡು 1.41 ಲಕ್ಷ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ನೀಡಲು ಇವರಿಗೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಪ್ರಾದೇಶಿಕ ಅಸಮಾನತೆ ನಿವಾರಣೆ ವರದಿ ಗಮನಿಸಿದರೆ ಈ ಕಾಂಗ್ರೆಸ್ ಸರಕಾರ ಕೇವಲ ಬೆಂಗಳೂರು, ಮೈಸೂರಿಗೆ ಸೀಮಿತ ಆಗಿರುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಭಾಗವಹಿಸಿದ್ದರು.

0 Shares

By admin

Leave a Reply

Your email address will not be published. Required fields are marked *