ಬಿಜೆಪಿಯಿಂದ ಉಚ್ಚಾಟಿತನಾಗಿರುವ ದೇಶದ್ರೋಹಿ ಮಾಜಿ ಕೇಂದ್ರ ಸಚಿವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಪಂಡಿತ್ ಜವಾಹರ್ ಲಾಲ್ ಅವರ ಹೆಸರನ್ನು ಬಳಸಿ ಅವಹೇಳನ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕೂಡಲೇ ಈ ಹುಚ್ಚನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಾಗೂ ಪ್ರತಿಕೃತಿ ಸುಡಲಾಯಿತು.
ವಿಜಯಪುರ ಜಿಲ್ಲೆಯ ಅರೇ ಹುಚ್ಚ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತನ್ನ ನೀಚನಾಲಿಗೆಯ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನ ದೇಶದ ರಾಷ್ಟ್ರಪಿತ ಅಲ್ಲ ಅವರು ಪಾಕಿಸ್ತಾನದ ರಾಷ್ಟ್ರಪಿತ ಎಂದು ಹೇಳುವ ಮೂಲಕ ದೇಶದ್ರೋಹಿ ಹೇಳಿಕೆ ನೀಡಿದ್ದಾನೆ. ಕೂಡಲೇ ಈ ದೇಶದ್ರೋಹಿಯನ್ನು ಬಂಧಿಸಿ ಗಡಿಪಾರು ಮಾಡಬೇಕು ಹಾಗೂ ದೇಶದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಹರಲಾಲ್ ನೆಹರು ರವರು ದೇಶದ ಪ್ರಧಾನ ಮಂತ್ರಿ ಅಲ್ಲ ಎಂಬುವ ಹೇಳಿಕೆ ನೀಡುವ ಮೂಲಕ ಇಬ್ಬರು ಮಹಾನ್ ಸ್ವಾತಂತ್ರ ಹೋರಾಟಗಾರರನ್ನು ಅಪಮಾನಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಕಿಡಿಗೇಡಿ ದೇಶದ್ರೋಹಿಯನ್ನ ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿ ಬಾರಿಯೂ ರಾಷ್ಟ್ರಪಿತ ಮಹಾತ್ಮ ಗಾಂಧಿ ರವರನ್ನು ಮಾಜಿ ಪ್ರಧಾನಿ ಪಂಡಿತ್ ಜವಹಲಾಲ್ ನೆಹರು ರವರನ್ನ ಮತ್ತು ಗಾಂಧಿ ಮನೆತನವನ್ನು ಟೀಕಿಸುವ ಮೂಲಕ ಪ್ರಚಾರ ಪಡೆಯುವ ಈ ರಣಹೇಡಿ ತನ್ನ ನಾಲಿಗೆಯ ಮೂಲಕ ಅತ್ಯಂತ ಕೀಳು ಪದವನ್ನು ಬಳಸುತ್ತಾನೆ ಇಂತಹ ರಣಹೇಡಿಗಳನ್ನು ಬೆಂಬಲಿಸುತ್ತಿರುವ ರಾಜ್ಯದಲ್ಲಿರುವ ಕೆಲವು ಕಿಡಿಗೇಡಿಗಳು ಅವನನ್ನ ಹಾಗೂ ಅವನ ಹೇಳಿಕೆಯನ್ನು ಸ್ವಾಗತಿಸುತ್ತಿದ್ದಾರೆ.
ಇಂತಹ ರಣೆಹೇಡಿಗಳು ಕರ್ನಾಟಕ ರಾಜ್ಯದಿಂದ ತೊಲಗಬೇಕು ಇವರು ನಿಜವಾದ ದೇಶದ್ರೋಹಿಗಳು. ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ದ್ವೇಷಿಸುವುದು ಎಂದರೆ ಅದು ದೇಶದ್ರೋಹಕ್ಕಿಂತ ಅತಿ ಹೆಚ್ಚಿನ ಅಪರಾಧ, ಇಂಥ ನೀಚ ನಾಲಿಗೆಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿ ಬಾರಿಯೂ ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಶಾಂತಿ ಕದಡುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದು ಹಾಗೂ ಕೋಮುವಾದದ ಹೇಳಿಕೆಗಳನ್ನು ನೀಡಿ ಪ್ರಚೋದನೆ ಮಾಡುವುದು.
ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಈ ಕಿಡಿಗೇಡಿಯನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಈತನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಪ್ರತಿ ಬಾರಿ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸುತ್ತನೆ ಆದ್ದರಿಂದ ಈತನಿಗೂ ಪಾಕಿಸ್ತಾನಕ್ಕೂ ಇರುವ ಸಂಬಂಧ ಏನೆಂಬುದನ್ನ ಕೂಡಲೇ ತನಿಖೆ ನಡೆಸಬೇಕು ಹಾಗೂ ತಜ್ಞ ವೈದ್ಯರಿಂದ ಈತನನ್ನ ಚಿಕಿತ್ಸೆಗೆ ಒಳಪಡಿಸಿ ಈತನ ಮೇಲೆ ಕೂಡಲೇ ದೇಶದ್ರೋಹದ ಪ್ರಕರಣ ದಾಖಲಿಸಿ ಈತನನ್ನ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ಈತನ ಭಾವಚಿತ್ರವನ್ನು ದಹಿಸಲಾಯಿತು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್ ಕಾಂಗ್ರೆಸ್ ಮುಖಂಡರಾದ ಎ.ಆನಂದ್, ಕುಶಾಲ್ ಹಾರುವೇಗೌಡ ಗೌಡ,ಆನಂದ್ ಕುಮಾರ್, ಪುಟ್ಟರಾಜು, ಉಮೇಶ್, ನವೀನ್ ಸುಂಕದಕಟ್ಟೆ, ಹೇಮರಾಜ್, ನವೀನ್ ಸಾಯಿ, ಪ್ರವೀಣ್ ರಾವ್, ಒಬ್ಬಲೇಶ್, ಪವನ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
