0 Shares

ಬೆಂಗಳೂರು : ಚಾಲಕನ ನಿರ್ಲಕ್ಷ್ಯದಿಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸೊಂದು ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ ಘಟನೆ ಪೀಣ್ಯ 2ನೇ ಹಂತದ ಬಿಎಂಟಿಸಿ ಡಿಪೋದಲ್ಲಿ ನಡೆದಿದೆ. ಅದೃಷ್ಟವಶಾತ್, ದೊಡ್ಡ ಅವಘಡ ತಪ್ಪಿದೆ.

KA 51 AK 4169 ಸಂಖ್ಯೆಯ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸನ್ನು ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ನಿಲ್ಲಿಸಿ ತೆರಳಿದ ಪರಿಣಾಮ, ಬಸ್ ಸ್ವಯಂಚಾಲಿತವಾಗಿ ಮುಂದೆ ಚಲಿಸಿ ಡಿಪೋ ಒಳಗೆ ನುಗ್ಗಿದೆ. ಈ ವೇಳೆ ಡಿಪೋದ ಸಂಚಾರ ನಿಯಂತ್ರಕರ ಕೊಠಡಿಗೆ ಬಸ್ ಡಿಕ್ಕಿ ಹೊಡೆದಿದೆ.

ಬಸ್ ಗುದ್ದಿದ ಪರಿಣಾಮ ನಾಲ್ಕು ಬೈಕ್‌ಗಳು ಜಖಂ ಆಗಿವೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ.

0 Shares

By admin

Leave a Reply

Your email address will not be published. Required fields are marked *