0 Shares

ಬೆಂಗಳೂರು : ಸರ್ಕಾರಿ ಕೆಲಸ ದೇವರ ಅಂತಾರೆ ಆದರೆ, ಇಲ್ಲೊಬ್ಬರು ನೌಕರ ಕಚೇರಿಯನ್ನು ಪಾರ್ಟಿ ಹಾಲ್ ಮಾಡಿಕೊಂಡಿದ್ದಾನೆ. ಸರ್ಕಾರಿ ಕಚೇರಿಯೊಂದರಲ್ಲಿ ತಮ್ಮ ಇಲಾಖೆಯ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಡಗೂಡಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಘಟನೆ ನಡೆದಿದೆ.

ಹೈಕೋರ್ಟ್ ಆದೇಶ ಇದ್ರೂ ಸರ್ಕಾರಿ ಅಧಿಕಾರಿಗಳು ಹುಟ್ಟು ಹಬ್ಬದ ನೆಪದಲ್ಲಿ ಕಚೇರಿಯಲ್ಲಿ ಭರ್ಜರಿ ಬರ್ತಡೆ ಪಾರ್ಟಿ ಮಾಡಿಕೊಂಡಿದ್ದಾರೆ. ಬೆಂಗಳೂರು ‌ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಹೆಚ್.ಆರ್.ಅನಿಲ್ ಕುಮಾರ್, ಒಂದಲ್ಲ ಎರಡರಲ್ಲಿ ಬರೋಬ್ಬರಿ 11 ಕೆಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕಳೆದ 7 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ‌ಕೆಲಸ ನಿರ್ವಹಿಸುತ್ತಿರುವ ಹೆಚ್.ಆರ್. ಅನಿಲ್ ಕುಮಾರ್ ಅವರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸರಿಯಾಗಿ ಸ್ಪಂದಿಸದೆ ತಮ್ಮ ಬೇಜವಾಬ್ದಾರಿ ನಡೆಯಿಂದ ಅಧಿಕಾರ, ಕಚೇರಿ ದುರ್ಬಳಕೆ ‌ಮಾಡಿಕೊಂಡಿದ್ದಾರೆ. ಇವರ ಮೇಲೆ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಇದರಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಿಬೇಕೆಂದು ಹೋರಾಟಗಾರರು ಮನವಿ ಮಾಡಿಕೊಂಡಿದ್ದಾರೆ.

0 Shares

By admin

Leave a Reply

Your email address will not be published. Required fields are marked *