3 Shares

ಚಾಮರಾಜನಗರ : ಮಹಾಶಿವರಾತ್ರಿ ಹಿನ್ನಲೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಅಪಾಯವನ್ನು ಲೆಕ್ಕಿಸದೆ, ಕಾವೇರಿ ನದಿಯನ್ನು ದಾಟಿ ಭಕ್ತರ ದಂಡು ಬರುತ್ತಿದ್ದಾರೆ. ಹಗ್ಗ ಹಿಡಿದು ನದಿಯನ್ನು ದಾಟಿ ಮಾದಪ್ಪನ ಭಕ್ತರು ದರ್ಶನಕ್ಕೆ ಬರುತ್ತಿದ್ದಾರೆ.

ಚಾಮರಾಜನಗರ ಹಾಗು ಬೆಂಗಳೂರು ದಕ್ಷಿಣ ಜಿಲ್ಲೆಯ ಗಡಿಯಂಚಿನಲ್ಲಿ ಹರಿಯುವ ಕಾವೇರಿ, ಕನಕಪುರ ತಾಲೋಕು ಸಂಗಮದಲ್ಲಿ ನದಿ ದಾಟಿ ಬರುತ್ತಿರುವ ಭಕ್ತರು, ಬೆಂಗಳೂರು, ಮಾಗಡಿ ರಾಮನಗರ, ಚನ್ನಪಟ್ಟಣ ಮದ್ದೂರು ಮಳವಳ್ಳಿ ಮೊದಲಾದ ಕಡೆಯಿಂದ ಭಕ್ತರ ಪಾದಯಾತ್ರೆ ನಡೆಯುತ್ತಿದೆ.

ಕಾವೇರಿ ನದಿ ದಾಟಿ ಕಾಡಿನ ಕಲ್ಲು ಮುಳ್ಳುಗಳ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಭಕ್ತರು ಮಾದಪ್ಪನ ಬೆಟ್ಟಕ್ಕೆ ಬರುತ್ತಿದ್ದಾರೆ. ಕಳೆದ ತಿಂಗಳು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಹೋಗುತ್ತಿದ್ದ ಭಕ್ತನ ಕೊಂದಿದ್ದ ಚಿರತೆ, ಮತ್ತೆ ಮೊನ್ನೆನೂ ಕೂಡ ಬಾಲಕ ಭಕ್ತನ ಮೇಲೆ ಚಿರತೆ ದಾಳಿ ನಡೆಸಿದೆ.

ಚಿರತೆ ದಾಳಿಯನ್ನು ಲೆಕ್ಕಿಸದೆ ಮಹದೇಶ್ವರನ ಸನ್ನಿಧಿಗೆ ಪಾದಯಾತ್ರೆ ಮೂಲಕ ಸಹಸ್ರಾರು ಭಕ್ತರು ಬರುತ್ತಿದ್ದಾರೆ. ಸುರಕ್ಷಿತವಾಗಿ ನದಿ ದಾಟಲು ಅರಣ್ಯ, ಅಗ್ನಿಶಾಮಕ ಹಾಗು ಪೊಲೀಸ್ ಸಿಬ್ಬಂದಿ ನೆರವಾಗಿದ್ದಾರೆ. ಕಾಡಿನೊಳಗೆ ಒಬ್ಬೊಬ್ಬರೆ, ಹೋಗದೆ ಗುಂಪುಗುಂಪಾಗಿ ತೆರಳುವಂತೆ ಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.

3 Shares

By admin

Leave a Reply

Your email address will not be published. Required fields are marked *