0 Shares

ಬೆಂಗಳೂರು : ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ, ಸಚಿವ ಸಂಪುಟ ಸಭೆ ಬಗ್ಗೆ ಕೇಳಿದಾಗ, “ಕ್ರೀಡಾಂಗಣದ ಸಾಮರ್ಥ್ಯದಷ್ಟು ಮಾತ್ರ ಟಿಕೆಟ್ ಮಾರಾಟ ಮಾಡಬೇಕು, ಜನದಟ್ಟಣೆ ಅಗತ್ಯಕ್ಕೆ ತಕ್ಕಂತೆ ದೊಡ್ಡ ಗೇಟ್ ಗಳ ಅಳವಡಿಕೆ, ಆಂಬುಲೆನ್ಸ್ ನಿಯೋಜನೆ ಸೇರಿದಂತೆ ಕುನ್ಹಾ ಅವರ ವರದಿಯ ಶಿಫಾರಸ್ಸುಗಳ ಅನುಗುಣವಾಗಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.

“ಇದು ಕ್ರಿಕೆಟ್ ಪ್ರಿಯರಿಗೆ ಇದೊಂದು ಶುಭ ಸುದ್ದಿಯಾಗಿದ್ದು, ಇಷ್ಟು ದಿನಗಳ ಕಾಲ ಅನುಭವಿಸಿದ ನೋವಿಗೆ ವಿಷಾದಿಸುತ್ತೇನೆ. ನಾವು ಒಂದು ಪ್ರತಿಷ್ಠಿತ ಪಂದ್ಯಾವಳಿ ಕಳೆದುಕೊಂಡಿದ್ದೇವೆ. ಮುಂದಿನ ಬಾರಿ ನಾವು ಜಾಗೃತರಾಗಿರೋಣ” ಎಂದು ತಿಳಿಸಿದರು.

0 Shares

By admin

Leave a Reply

Your email address will not be published. Required fields are marked *