ಬೆಂಗಳೂರು : ಮಾಜಿ ಸಚಿವ ಹಾಗೂ ಹಾಲಿ ಶಾಸಕ ಭೈರತಿ ಬಸವರಾಜ್ ಬಂಧನದ ವಿಚಾರದ ಬಗ್ಗೆ ಸಿಐಡಿನಿಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದರು. ಅವರು ಸುಪ್ರೀಂ ಕೋರ್ಟ್‌ಗೂ ಹೋಗಿ ಬೇಲ್‌ಗೆ ಅಪ್ಲೈ ಮಾಡಿದ್ದರು. ಅಲ್ಲಿಯೂ ಕೂಡ ರಿಜೆಕ್ಟ್ ಆಯಿತು ಎಂದರು.
ಅವರ ಮುಂದೆ ಇದ್ದಿದ್ದು ಕೇವಲ ಎರಡು ದಾರಿಗಳು, ಒಂದು ಸರಂಡರ್ ಆಗುವುದು ಇಲ್ಲ ಬಂಧನಕ್ಕೆ ಒಳಪಡುವುದು. ಈ ಕಾರಣದಿಂದ ಅವರು ಸರಂಡರ್ ಆಗಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆ ಮುಂದುವರೆಯುತ್ತೆ. ಅಷ್ಟು ಬಿಟ್ಟರೆ ಸದ್ಯ ಬೇರೇನೂ ಹೇಳಲು ಬರುವುದಿಲ್ಲ ಎಂದು ಬೆಂಗಳೂರಿನ ಸದಾಶಿವನಗರ ನಿವಾಸ ಬಳಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡದಂತೆ, ಹೈಕಮಾಂಡ್ ಹೇಳಿದ ಬಳಿಕವೂ ಚನ್ನರಾಜ್ ಹಟ್ಟಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆಸಿದ್ದಾರೆ. ನಮ್ಮ ಎಐಸಿಸಿ ಅಧ್ಯಕ್ಷರು ಎಷ್ಟರಮಟ್ಟಿಗೆ ಹೇಳಿದ್ದಾರೆ. ಬಾಯಿ ಮುಚ್ಚಿಕೊಂಡು ಸುಮ್ಮನಿರಿ., ಅದಕ್ಕಿಂತ ಕಠಿಣವಾಗಿ ಹೇಳಲು ಅವರಿಗೆ ಆಗುವುದಿಲ್ಲ.
ಅಷ್ಟು ಹೇಳಿದ ಮೇಲೂ ಕೂಡ ನಮ್ಮ ಶಾಸಕರು ಮುಖಂಡರು ಪದೇ ಪದೇ ಮಾತನಾಡುತ್ತಾ ಇದ್ದಾರೆ. ಇದು ಸರಿ ಕಾಣಿಸುತ್ತಿಲ್ಲ, ಕೂಡಲೇ ನಿಲ್ಲಬೇಕು. ಜನ ಸಮುದಾಯ ನಮ್ಮಿಂದ ನಿರೀಕ್ಷೆ ಮಾಡಿರುವುದೇ ಬೇರೆ, ನಾಯಕರು ಆಡಳಿತದ ಕಡೆ ಗಮನ ಹರಿಸಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಒಬ್ಬೊಬ್ಬರ ಒಂದೊಂದು ರೀತಿ ಮಾತನಾಡುವುದು ಸರಿ ಕಾಣಿಸುವುದಿಲ್ಲ ಎಂದರು.
ಹೈಕಮಾಂಡ್ ಕೂಡ ಇದನ್ನ ಗಮನಿಸುತ್ತಿದ್ದಾರೆ ಅಂತ ಅಂದುಕೊಂಡಿದ್ದೇನೆ. ಸಮಯ ಬಂದಾಗ ನಾನು ಕೂಡ ಹೈಕಮಾಂಡ್‌ಗೆ ಈ ವಿಚಾರವನ್ನು ಮಾತನಾಡುತ್ತೇನೆ. Enough is Enough ಇದು ಕೂಡಲೇ ನಿಲ್ಲಲೇಬೇಕು. ಅಭಿವೃದ್ಧಿ ಕಡೆ ನಾವು ಗಮನಕೊಡಬೇಕು ಹೊರತು ಇದರ ಬಗ್ಗೆ ಮಾತನಾಡುವುದು ಅಲ್ಲ, ಹೈಕಮಾಂಡ್‌ಗೆ ಯಾವಾಗ ಏನು ಮಾಡಬೇಕು ಅಂತ ಗೊತ್ತಿದೆ ಎಂದು ಹೇಳಿದರು.
ಅವರಿಗೇನು ಈ ರೀತಿ ಸಂದರ್ಭಗಳು ಹೊಸದಲ್ಲ, ಬಹಳಷ್ಟು ಸನ್ನಿವೇಶಗಳನ್ನು ನೋಡಿದ್ದಾರೆ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಕರ್ನಾಟಕದಲ್ಲಿ ಈ ಹಿಂದೆ ಈ ರೀತಿ ಆಗಿದ್ದಾಗ ಕ್ರಮ ತೆಗೆದುಕೊಂಡಿದ್ದಾರೆ. ಸಹನೆಯಿಂದ ವರ್ತಿಸುವುದನ್ನು ಕಲಿಯಬೇಕು ಎಂದ್ರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಅನುಮತಿ ವಿಚಾರವಾಗಿ ಪ್ರತಿಕ್ರಿಯೆ, In principal ಅನುಮತಿಯನ್ನು ಕೊಡುತ್ತೇವೆ ಅಂತ ಹೇಳಿದ್ದೇವೆ, ಜಸ್ಟೀಸ್ ಕುನ್ಹಾ ಶಿಫಾರಸುಗಳನ್ನು ಅನುಷ್ಠಾನ ಮಾಡೋದಕ್ಕೆ ತಿಳಿಸಿದ್ದೇವೆ. ಅದರಲ್ಲಿ ಮೂರು ಭಾಗಗಳಿವೆ ಎಂದು ಹೇಳಿದ್ದಾರೆ.
ಮ್ಯಾಚ್‌ಗೆ ಮೊದಲು ಏನೆಲ್ಲಾ ಮಾಡಬೇಕು. ಮೂಲಭೂತ ಸೌಕರ್ಯದ ವಿಚಾರವಾಗಿಯೂ ತಿಳಿಸಲಾಗಿದೆ. ಮ್ಯಾಚ್ ಆರಂಭಿಸುವುದಕ್ಕೂ ಮೊದಲು ಏನೆಲ್ಲಾ ಮಾಡಬೇಕು. ಇದಕ್ಕಾಗಿ ಒಂದು ಸಮಿತಿಯನ್ನು ಕೂಡ ಮಾಡಲಾಗಿತ್ತು. GBA ಆಯುಕ್ತರು, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಎಲ್ಲ ಇಲಾಖೆಗಳ ವಿಧಿ ಅಧಿಕಾರಿಗಳ ಒಳಗೊಂಡ ಸಮಿತಿ ಮಾಡಲಾಗಿದೆ.
ಐಪಿಎಲ್ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತಾರೆ, ಒಂದಕ್ಕಿಂತ ನಾಲ್ಕು ಬಾರಿ ಹೆಚ್ಚುವರಿಯಷ್ಟು ಕ್ರಮವನ್ನು ಈ ಬಾರಿ ತೆಗೆದುಕೊಳ್ಳಲಾಗುತ್ತದೆ. ಕಳೆದ 50 ವರ್ಷಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿ ಘಟನೆ ನಡೆದಿರಲಿಲ್ಲ. ಜನರ ಭದ್ರತೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.
