0 Shares

ಟಾಲಿವುಡ್​ನ ಜನಪ್ರಿಯ ಸೆಲೆಬ್ರಿಟಿಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ. ಫೆಬ್ರವರಿ 26ರಂದು ಉದಯಪುರದಲ್ಲಿ ಈ ವಿವಾಹ ನಡೆಯಲಿದೆ ಎನ್ನಲಾಗಿದೆ.

ಈಗ ಅವರ ವಿವಾಹದ ಬಗ್ಗೆ ದೊಡ್ಡ ವರದಿ ಒಂದು ಕೇಳಿ ಬಂದಿದೆ. ಪ್ರಮುಖ ಅಂತಾರಾಷ್ಟ್ರೀಯ ಒಟಿಟಿ ಕಂಪನಿ ವಿಜಯ್ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ ಭಾರಿ ಮೊತ್ತದ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಆದರೆ, ಅವರು ಇದನ್ನು ತಿರಸ್ಕರಿಸಿದ್ದಾರಂತೆ.

ಸೆಲೆಬ್ರಿಟಿಗಳ ವಿವಾಹ ನೋಡಬೇಕು ಎಂಬ ಆಸೆ ಅಭಿಮಾನಿಗಳಿಗೆ ಇರುತ್ತದೆ. ಈ ಕಾರಣದಿಂದಲೇ ಸೆಲೆಬ್ರಿಟಿಗಳ ವಿವಾಹದ ಹಕ್ಕನ್ನು ಪಡೆಯಲು ಒಟಿಟಿ ತಾಣಗಳು ಪ್ರಯತ್ನಿಸುತ್ತವೆ. ಈಗ ವಿಜಯ್ ಹಾಗೂ ರಶ್ಮಿಕಾ ವಿಷಯದಲ್ಲಿ ಹಾಗೆಯೇ ಮಾಡಲು ನೆಟ್​​ಫ್ಲಿಕ್ಸ್ ಮುಂದಾಗಿತ್ತು ಎನ್ನಲಾಗಿದೆ. ಆದರೆ, ಇದು ಅಸಾಧ್ಯ ಎಂದು ವಿಜಯ್ ಹೇಳಿದ್ದಾರಂತೆ. ಅವರು ಈ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದ್ದಾರೆ.

60 ಕೋಟಿ ರೂಪಾಯಿ ಕೊಟ್ಟು ಈ ಡೀಲ್ ಪಡೆಯಲು ನೆಟ್​​ಪ್ಲಿಕ್ಸ್ ಪ್ರಯತ್ನಿಸಿತ್ತು. ಆದರೆ, ವಿವಾಹ ಅನ್ನೋದು ಖಾಸಗಿ ವಿಷಯ. ಅದನ್ನು ಎಲ್ಲರಿಗೂ ತೋರಿಸುವ ಉದ್ದೇಶ ವಿಜಯ್​ಗೆ ಇಲ್ಲ. ಒಂದೊಮ್ಮೆ ವಿವಾಹದ ಹಕ್ಕನ್ನು ಒಟಿಟಿಗೆ ನೀಡಿದರೆ ಆ ಬಳಿಕ ಸಾಕಷ್ಟು ಷರತ್ತುಗಳು ಕೂಡ ಬರುತ್ತವೆ. ಇದರಿಂದ ಬಂದ ಅತಿಥಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ, ಇದಕ್ಕೆ ದಂಪತಿ ನೋ ಎಂದಿದ್ದಾರೆ ಎನ್ನಲಾಗಿದೆ.

ನಯನತಾರಾ – ವಿಘ್ನೇಶ್ ಶಿವನ್ ವಿವಾಹ ವೀಡಿಯೊದ ಸ್ಟ್ರೀಮಿಂಗ್ ಹಕ್ಕನ್ನು ನೆಟ್​​ಫ್ಲಿಕ್ಸ್ ಪಡೆದುಕೊಂಡಿತ್ತು. ನಂತರ ಇದನ್ನು ಸಾಕ್ಷ್ಯಚಿತ್ರ ಆಗಿ ಬಿಡುಗಡೆ ಮಾಡಲಾಯಿತು. ಆದರೆ, ಇದಕ್ಕೆ ಸಾಕಷ್ಟು ಕಾನೂನು ತೊಂದರೆ ಎದುರಾಯಿತು. ಅಲ್ಲದೆ, ಇದು ರಿಲೀಸ್ ಆಗಲು ಸಾಕಷ್ಟು ಸಮಯ ತೆಗೆದುಕೊಂಡಿತು. ಹೀಗಾಗಿ, ಕಾನೂನು ವಿವಾದಗಳನ್ನು ಕೂಡ ಪರಿಗಣಿಸಿ ದಂಪತಿಗಳು ಎಚ್ಚರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯ್ ಹಾಗೂ ರಶ್ಮಿಕಾ ವಿವಾಹ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರ ಅರಮನೆಯಲ್ಲಿ ನಡೆಯಲಿದೆ ಎಂಬ ವದಂತಿ ಇದೆ. ಕೆಲವು ವೀಡಿಯೊಗಳು ವೈರಲ್ ಆಗುತ್ತಿದ್ದು, ಇದಕ್ಕಾಗಿ ಈಗಾಗಲೇ ಸಿದ್ಧತೆ ಪ್ರಾರಂಭವಾಗಿವೆ ಎನ್ನಲಾಗಿದೆ.

0 Shares

By admin

Leave a Reply

Your email address will not be published. Required fields are marked *