0 Shares

ಹುಬ್ಬಳ್ಳಿ : ರಾಜ್ಯ ಸರ್ಕಾರ 1000 ದಿನಗಳ ಪೂರೈಕೆ ಹಿನ್ನಲೆಯಲ್ಲಿ ಸಾಧನ ಸಮಾವೇಶ ನಡೆಸಿದ ವಿಚಾರ ಬಗ್ಗೆ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ಪಾರ್ಲಿಮೆಂಟ್ ಮೆಂಬರ್ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ ಮಾಡಿದ್ದಾರೆ ಗೊತ್ತಿಲ್ಲ, ಯಾವುದೇ ಸಮಾವೇಶ ಮಾಡಲಿ ಹೇಳಿದ್ದೇ, ಅದೇ ಐದು ಗ್ಯಾರಂಟಿ ಕೊಟ್ಟ ಕುರಿತು ಹೊಗಳಿಕೆಯಾಗಿದೆ. ಸಿಎಂ ಸಿದ್ದರಾಮಯ್ಯಾ ನವರ ಮೊದಲಿನ ಆಡಳಿತ ಈಗ ಇಲ್ಲ. ಸಾಕಷ್ಟು ಭರವಸೆ ಸಿಎಂ ಸಿದ್ದರಾಮಯ್ಯಾ ಮೇಲೆ ಇರಿಸಲಾಗಿತ್ತು.

ಅದು ಸುಳ್ಳು ಆಗಿಸಿದ್ದಾರೆ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಆರ್ಥಿಕ ವ್ಯವಸ್ಥೆ ಹಾಳಾಗಿದೆ. ಗುತ್ತಿಗೆದಾರರು ಕೆಲಸ ಇಲ್ಲದೇ ಕುಳಿತಿದ್ದಾರೆ. ಸಾಕಷ್ಟು ಬಿಲ್ ಬಾಕಿ ಇವೆ.

ಸಿಎಂ ಸಿದ್ದರಾಮಯ್ಯಾ ಕೇವಕ ಪಿಎಂ ಮೋದಿ ಅವರನ್ನ ಬೈಯ್ಯದು ಬಿಟ್ಟರೇ ಏನು ಮಾಡಿಲ್ಲ, ಸಾಕಷ್ಟು ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿವೆ. ಸಿದ್ದರಾಮಯ್ಯನವರು ಲಕ್ಷಾಂತರ ಜನರನ್ನ ಸೇರಿಸಿ ಶಕ್ತಿ ಪ್ರದರ್ಶನ ಮಾಡುವುದು. ಈಗ ಸಿಎಂ ಪವರ್ ಶೇರ್ ವಿಷಯ ಬಯಲಿಗೆ ಬರತಾ ಇದೆ. ಈಗ ಸಿಎಂ ಡಿಸಿಎಂ ಪರ ಹಿಂಬಾಲಕರು ಆರೋಪ ಪ್ರತ್ಯಾರೋಪ ಮಾಡತಾ ಇದ್ದಾರೆ.

ಸಿಎಂ ಸಿದ್ದರಾಮಯ್ಯಾ ತಮ್ಮ ಮಗ ಯತೀಂದ್ರ ಮೂಲಕ ಮಾತನಾಡಸತಾ ಇದ್ದಾರೆ. ಸಿಎಂ ಸಿದ್ದರಾಮಯ್ಯಾ ತಮ್ಮ ಮನಸ್ಸಿನಲ್ಲಿ ಏನು ಇದೆ ಅದನ್ನ ಹೇಳಸತಾ ಇದ್ದಾರೆ. ಇನ್ನು ಡಿಸಿಎಂ ಶಿವಕುಮಾರ್ ಅವರ ಹಿಂಬಾಲಕ ಶಾಸಕರ ಮೂಲಕ, ಸಿಎಂ ಡಿಸಿಎಂ ಇತ್ತೀಚಿನ ದಿನಗಳಲ್ಲಿ ಮುಖಾ ಮುಖಿ ಆಗಿ ಮಾತಾಡತಾ ಇಲ್ಲ ಎಂದರು.

0 Shares

By admin

Leave a Reply

Your email address will not be published. Required fields are marked *