ಮಂಡ್ಯ : ಯತೀಂದ್ರ ಸಿದ್ದರಾಮಯ್ಯ ಪವರ್ ಫುಲ್ ಮ್ಯಾನ್, ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಎಂದು ಯತೀಂದ್ರ ಸಿದ್ದರಾಮಯ್ಯ ವಿರುದ್ದ ಶಾಸಕ ಗಣಿಗ ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
ಯತೀಂದ್ರ ನಮ್ಮ ಹೈಕಮಾಂಡ್ ಅಂತ ಡಿಕೆ ಸಾಹೇಬರು ಹೇಳಿದ್ದಾರೆ. ನಮ್ಮ ಹೈಕಮಾಂಡ್ ಯತೀಂದ್ರ ಸಿದ್ದರಾಮಯ್ಯ. ಟಿವಿಯಲ್ಲಿ ಮಾತನಾಡಿದ್ರಿ ಯಾರು ಬದಲಾವಣೆ ಆಗಲ್ಲ. ಯತೀಂದ್ರ ಅವರಿಗೆ ನೋಟೀಸ್ ಕೊಡಕ್ಕಾಗಲ್ಲ. 100% ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್ ಅಂತ ಒಪ್ಪಿಕೊಳ್ತೇವೆ.ಸಿಎಂ ವಿಚಾರವಾಗಿ ಸ್ಟೇಟ್ಮೆಂಟ್ ಕೊಡಬೇಡಿ ಅಂತ ಸೂಚನೆ ಇದೆ. ಸಿದ್ದರಾಮಯ್ಯರವರೇ ಸಿಎಂ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರ ಬಗ್ಗೆ ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ಆದ್ರೂ ಅವರು ಕೊಡ್ತಿದ್ದಾರೆ ಅಂದ್ರೆ ಅವರೇ ಸುಪ್ರೀಂ. ಯತೀಂದ್ರ ಸಿದ್ದರಾಮಯ್ಯ ಪವರ್ ಫುಲ್ ಮ್ಯಾನ್ ಕಾಲ ಬಂದಾಗ ಸಿಎಂ ಬದಲಾವಣೆ ಆಗಬೇಕು. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ. ಡಿಕೆಶಿ ಸಿಎಂ ಆಗುವುದನ್ನ ತಪ್ಪಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಡಿಕೆ ಶಿವಕುಮಾರ್ 40 ವರ್ಷ ರಾಜಕಾರಣ ಅರೆದು ಕುಡಿದಿದ್ದಾರೆ. ಗೆಮ್ ಗೆಲ್ಲುವ ರಾಜಕೀಯ ತಂತ್ರಗಾರಿಕೆ, ಚಾಣಾಕ್ಷ ತನ ಅವರಲ್ಲಿದೆ.
ಅವರು ಸೈಲೆಂಟ್ ಆಗಿ ಕಾಯಿನ್ ಮೂವ್ ಮಾಡ್ತಿದ್ದಾರೆ ಅಂದ್ರೆ ಗೇಮ್ ಗೆಲ್ತಾರೆ. ರಾಜಕಾರಣ ಅಂದ ಮೇಲೆ ಆಟ ಇರುತ್ತೆ. 136 ಜನ ಆಟಗಾರರು ಡಿಕೆ ಪರ ಇದ್ದೇವೆ. ಅತೀ ಶೀಘ್ರದಲ್ಲೇ ಉತ್ತರ ಬರುತ್ತೆ. ನಾವು ಬಿಜೆಪಿಗೆ ಯಾಕೆ ಹೋಗುವ..? ಡಿಕೆಶಿ ಅವರು ನಮ್ಮ ಪಕ್ಷದಿಂದಲೇ ಸಿಎಂ ಆಗ್ತಾರೆ ಎಂದರು.
