0 Shares

ಇತ್ತೀಚೆಗೆ ಕನ್ನಡಿಗರಿಗೆ ಅಪ್ಪ–ಮಗನ ಬಾಂಧವ್ಯವನ್ನು ಭಾವನಾತ್ಮಕವಾಗಿ ಹೇಳಿದ ಸನ್ ಆಫ್ ಮುತ್ತಣ್ಣ ಚಿತ್ರದ ತಂಡ ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಯಾವುದೇ ಆಡಂಬರ ಅಥವಾ ಮೇಕಿಂಗ್ ವೈಭವೀಕರಣವಿಲ್ಲದೆ, ತಣ್ಣಗೆ ಕಥೆ ಹೇಳುವ ದಾರಿಯನ್ನು ನಿರ್ದೇಶಕ ಶ್ರೀಕಾಂತ್ ಹುಣಸೂರು ಹಾಗೂ ಶ್ರೀ ಪುರಾತನ ಫಿಲ್ಮ್ಸ್‘ಸನ್ ಆಫ್ ಮುತ್ತಣ್ಣ’ ಚಿತ್ರದ ಮೂಲಕ ಪರಿಚಯಿಸಿದ್ದರು.

ಈಗ ಅದೇ ತಂಡ ತಮಿಳು ಚಿತ್ರವೊಂದರ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಶ್ರೀ ಪುರಾತನ ಫಿಲ್ಮ್ಸ್ ಬ್ಯಾನರ್‌ನಡಿ ತಮಿಳಿನ ಖ್ಯಾತ ನಟ ಸೆಲ್ವರಾಘವನ್ ಅವರೊಂದಿಗೆ ಹೊಸ ಪ್ರಾಜೆಕ್ಟ್ ಕುರಿತು ಮಾತುಕತೆ ನಡೆದಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಚಿತ್ರದ ಮುಹೂರ್ತ ನೆರವೇರಲಿದೆ ಎಂದು ತಂಡ ತಿಳಿಸಿದೆ.

ಈ ತಮಿಳು ಚಿತ್ರದಲ್ಲಿ ನಾಯಕ ನಟಿಯ ಜೊತೆಗೆ ಹಲವು ಕನ್ನಡ ಕಲಾವಿದರಿಗೆ ಪ್ರಾಮುಖ್ಯ ಪಾತ್ರಗಳು ದೊರಕಲಿವೆ. ಕನ್ನಡ–ತಮಿಳು ಕಲಾವಿದರ ಸಂಗಮದೊಂದಿಗೆ, ಕಥಾ ಪ್ರಧಾನ ಚಿತ್ರವನ್ನು ರೂಪಿಸುವ ಉದ್ದೇಶ ತಂಡದದು ಎಂದು ಹೇಳಲಾಗಿದೆ.

0 Shares

By admin

Leave a Reply

Your email address will not be published. Required fields are marked *