0 Shares

ಚಿಕ್ಕೋಡಿ : ಸ್ಮಾರ್ಟ್ ಬಜಾರ್ ನಲ್ಲಿ ಆಹಾರ ಪದಾರ್ಥಗಳನ್ನು ಖರೀದಿಸುವ ಮುನ್ನ ಎಚ್ಚರವಿರಿ.
ಕೊಳೆತ ಪದಾರ್ಥಗಳನ್ನು ಗ್ರಾಹಕರಿಗೆ ಮಾರಾಟಕ್ಕಿಟ್ಟ ಸ್ಮಾರ್ಟ್ ಬಜಾರ್. ಚಿಕ್ಕೋಡಿ ಪಟ್ಟಣದ ರಿಲಯನ್ಸ್ ಸ್ಮಾರ್ಟ್ ಬಜಾರ್‌ನ ಕರ್ಮಕಾಂಡ. ಫಂಗಸ್ ಬಂದ್ ಡೇಟ್ಸ್ ಗಳನ್ನು ಗ್ರಾಹಕರಿಗೆ ಮಾರಾಟ ಮಾಡಿದ ಸ್ಮಾರ್ಟ್ ಬಜಾರ್. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಘಟನೆ ನಡೆದಿದೆ.

KIMIA ಕಂಪನಿಯ ಡೇಟ್ಸ್ ನಲ್ಲಿ ಕಂಡು ಬಂದ್ ಫಂಗಸ್. ಗ್ರಾಹಕರು ಖರೀದಿಸಿ ತಿನ್ನಲು ನೋಡಿದಾಗ ಫಂಗಸ್ ನಿಂದ ಕೆಟ್ಟು ಹಾಳಾದ ಡೇಟ್ಸ್ ಬೆಳಕಿಗೆ ಬಂದಿದೆ. ಸ್ಮಾರ್ಟ್ ಬಜಾರ್ ಮ್ಯಾನೇಜರ್‌ನ ಗ್ರಾಹಕರು ತರಾಟೆಗೆ ತೆಗೆದುಕೊಂಡರು. ಕೆಟ್ಟ ಪದಾರ್ಥಗಳನ್ನು ಪರಿಶೀಲಿಸದೆ ಮಾರಾಟ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣ್ಣು ತರಕಾರಿ ಸೇರಿದಂತೆ ಕೊಳೆತ ಆಹಾರ ಪದಾರ್ಥಗಳು ಮಾರಾಟ. ಸ್ಮಾರ್ಟ್ ಬಜಾರ್ ಎಂದ್ ಮಾತ್ರಕ್ಕೆ ಹೇಳುವರಿಲ್ಲ, ಕೇಳುವರಿಲ್ಲ. ಕಣ್ಮುಚ್ಚಿ ಕುಳಿತ ಚಿಕ್ಕೋಡಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು. ಸ್ಮಾರ್ಟ್ ಬಜಾರ್ ಹಾಗೂ FSSAI ಇಲಾಖೆ ವಿರುದ್ಧ ಗ್ರಾಹಕರ ಆಕ್ರೋಶ. ಸ್ಮಾರ್ಟ್ ಬಜಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

0 Shares

By admin

Leave a Reply

Your email address will not be published. Required fields are marked *