ಧಾರವಾಡ : ಕಳೆದ ಮೂರು ವರ್ಷಗಳಿಂದ ಇವರ ಯೋಗ್ಯತೆಗೆ ಹುದ್ದೆ ಸೃಷ್ಟಿ ಮಾಡಲು ಆಗಿಲ್ಲ. ಯಾವುದೇ ನೇಮಕಾತಿ ಮಾಡದೆ ಇರುವ ಸರ್ಕಾರ ಇದು ಎಂದು ಧಾರವಾಡದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಎಲ್ಲಾ ಬಡವರ ಮಕ್ಕಳು ಹುದ್ದೆಗಳಿಗೆ ಕೋಚಿಂಗ್‌ಗಳನ್ನು ತೆಗೆದುಕೊಂಡು ಕಾಯುತ್ತಿದ್ದಾರೆ. 2.85 ಲಕ್ಷ ಖಾಲಿ ಹುದ್ದೆಗಳು ಇವೆ. ಫೈನಾನ್ಸ್ ಡಿಪಾರ್ಪಮೆಂಟ್ ಸಹ ಈಗಾಗಲೇ ಕ್ಲಿಯರೆನ್ಸ್ ಕೊಟ್ಟಿದೆ. ಸರ್ಕಾರದಲ್ಲಿ ಹಣ ಇಲ್ಲ ಹೀಗಾಗಿ ಇವರು ಮಾಡುತ್ತಿಲ್ಲ. ಹುದ್ದೆ ನೇಮಕ ಮಾಡಿದರೆ, ಸರ್ಕಾರದಲ್ಲಿ ವೇತನ ಕೊಡಲು ದುಡ್ಡಿಲ್ಲ ಎಂದರು.
ಇಲ್ಲದಿದ್ದರೆ ಮೀನಾಮೇಷ ಯಾಕೆ ಮಾಡುತ್ತಿದ್ದರು. ಉದ್ಯೋಗ ಖಾತ್ರಿ ನೇಮಕಕ್ಕೆ ವಿರೋಧ ಮಾಡುತ್ತಾರೆ. ಹೀಗಾಗಿಯೇ ಇವರಿಗೆ ಎಡಬಿಡಂಗಿ ಕಾಂಗ್ರೆಸ್ ಅಂತ ಹೇಳುವುದು. ವಿದ್ಯಾರ್ಥಿಗಳ ಪ್ರತಿಭಟನೆಗೆ ಅನುಮತಿ ನೀಡುತ್ತಿಲ್ಲ. ಸರ್ಕಾರ ಯಾವುದೇ ರೀತಿಯಲ್ಲಿ ಏನು ಹೇಳುತ್ತಿಲ್ಲ.
ಹಿಂದೆ ನನ್ನ ಖಾತೆಯಲ್ಲಿ ತಹಶೀಲ್ದಾರ್, ವಿಎ ಗಳನ್ನು ನೇಮಕ ಮಾಡಿದ್ದೇನೆ ಗೊತ್ತಾ, ಕೂಡಲೇ ನೇಮಕಾತಿ ಶುರು ಮಾಡಿದರು. ನೇಮಕಾತಿ ಮಾಡಲು ಸಿಎಂ ಒಪ್ಪುತ್ತಿಲ್ಲ, ಹಂತ ಹಂತವಾಗಿ ಮಾಡ್ತೀವಿ ಅಂತ ಹೇಳ್ತಾರೆ. ಡಿಕೆಶಿ ಇವತ್ತು ಹೇಳ್ತಾರೆ, ಇದು ರಾಜಕೀಯ ಪ್ರೇರಿತ ಅಂತ ಹೇಳಿದರು.
ನಮ್ಮ ಸರ್ಕಾರ ಇದ್ದಾಗ ಫ್ರೀಡಂ ಪಾರ್ಕ್ ನಲ್ಲಿ ಇವರೇ ಹೋಗಿದ್ರು, ನಾವು ಮಾಡಿದ್ರೆ ರಾಜಕಾರಣಿ ನೀವು ಮಾಡಿದ್ರೆ ಏನು? ಇವತ್ತು ನೀವು ನೇಮಕಾತಿ ಮಾಡಲಿಲ್ಲ ಅಂದ್ರೆ ರಾಜ್ಯಾದ್ಯಂತ ಪ್ರತಿಭಟನೆ ಆಗುತ್ತೆ ಹಾಗೂ ಇದನ್ನು ರಾಜ್ಯ ಸರ್ಕಾರ ಅರಿಯಬೇಕು ಕೂಡಲೇ ಮಾಡಬೇಕು ಎಂದು ಹೇಳಿದರು.
