0 Shares

ರಾಮನಗರ : ಧಾರವಾಡದಲ್ಲಿ ಯುವಕರ ಕಿಚ್ಚು ಆರಂಭವಾಗಿದೆ. ಇದು ಇಡೀ ರಾಜ್ಯ ವ್ಯಾಪಿಯಲ್ಲಿ ಹತ್ತಿ ಉರಿಯುವುದಲ್ಲಿ ಸಂಶಯವಿಲ್ಲ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಉದ್ಯೋಗ ಸೃಷ್ಟಿ ಮಾಡ್ಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.

ಧಾರವಾಡದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ವಿಚಾರಕ್ಕೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆಯುತ್ತಾ ಬಂದಿದೆ. ಒಂದೇ ಒಂದು ಹುದ್ದೆಯನ್ನು ಭರ್ತಿ ಮಾಡಿಲ್ಲ. ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಯುವಕರಿಗೆ ಉದ್ಯೋಗ ಒದಗಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ ಕುರ್ಚಿಗಾಗಿ ಫೈಟ್ ನಡೆಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಭವಿಷ್ಯದ ಯುವಕರಿಗೆ ಸ್ವಾಭಿಮಾನದ ಬದುಕು ರೂಪಿಸಿ – ಯುವನಿಧಿಯಲ್ಲಿ ಮೂರು ಸಾವಿರ ಕೊಡುತ್ತಿದ್ದೇವೆ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಲಘುವಾಗಿ ಮಾತನಾಡಿದ್ದಾರೆ. ಯುವನಿಧಿ ನಂಬಿಕೊಂಡು ಯಾವ ಯುವಕರು ಇಲ್ಲ, ಯುವಕರಿಗೆ ಸ್ವಾಭಿಮಾನ ಬದುಕು ರೂಪಿಸಿ, ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರಗಳ ಜವಾಬ್ದಾರಿ ಕೊಟ್ಟ ಮಾತಿನಂತೆ ಉಳಿಸಿಕೊಂಡಿಲ್ಲ, ಅವರು ಮಾತು ತಪ್ಪಿದ್ದಾರೆ ಎಂದು ಕುಟುಕಿದರು.

ಮಾತು ತಪ್ಪಿದ ಸರ್ಕಾರ-ನಿಖಿಲ್ ಕುಮಾರಸ್ವಾಮಿ – ಕಳೆದ ವರ್ಷ ಮೇ ತಿಂಗಳಲ್ಲಿ ಕೊಟ್ಟಿದ್ದ ಮಾತನ್ನ ಕಾಂಗ್ರೆಸ್ ಸರ್ಕಾರ ತಪ್ಪಿದ್ದಾರೆ. 2.85 ಲಕ್ಷಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಮಾಡುತ್ತೇವೆ ಎಂದು ಹೇಳಿ ಒಂದು ವರ್ಷ ಕಳೆದಿದೆ. ಆದರೆ ಒಂದು ಉದ್ಯೋಗ ಕೂಡ ಭರ್ತಿ ಅಗಿಲ್ಲ ಇದು ನಿಜಕ್ಕೂ ಖಂಡನೀಯ ಎಂದು ಹೇಳಿದರು.

8 ವರ್ಷ ಸಿಎಂ, 35 ವರ್ಷ ಅಧಿಕಾರ ಮತ್ತೇನು ಬೇಕು..? – ಸಿಎಂ ಸಿದ್ದರಾಮಯ್ಯರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಅವರು, 8 ವರ್ಷ ಮುಖ್ಯಮಂತ್ರಿಯಾಗಿ, 35 ವರ್ಷ ಅಧಿಕಾರ ಅನುಭವಿಸಿದ್ದಾರೆ, ದೇವರಾಜು ಅರಸು ದಾಖಲೆ ಬ್ರೇಕ್ ಮಾಡಿದ್ದಾರೆ. ಇಷ್ಟೆಲ್ಲಾ ಯೋಗ ಮಾಡಿರುವಂತ ಮುಖ್ಯಮಂತ್ರಿ ಬಾಯಲ್ಲಿ ಇಂಥ ಮಾತು ನಿರೀಕ್ಷಿಸಿರಲಿಲ್ಲ ಎಂದು ಕಿಡಿಕಾರಿದರು.

ಸಮಾಜ ಮತ್ತು ಸಮುದಾಯವನ್ನು ಮುಂದಿಟ್ಟುಕೊಂಡು ರಕ್ಷಣೆ ಪಡೆಯುವಂತ ಕೆಲಸ ಮಾಡ್ಬೇಡಿ, ಸಮಾಜ ಮತ್ತು ಸಮುದಾಯವನ್ನು ಮುಂದಿಟ್ಟುಕೊಂಡು ರಕ್ಷಣೆ ಪಡೆಯುವಂತ ಕೆಲಸ ಮಾಡ್ಬೇಡಿ, ನೀವು ಏನಾದ್ರು ಈ ರಾಜ್ಯದ ಮುಖ್ಯಮಂತ್ರಿಯಾಗಿ 18ನೇ ಬಜೆಟ್ ಮಂಡನೆ ಮಾಡ್ತಿದ್ದೀರಾ, ಅದ್ಕಕೆ ದೇವೇಗೌಡರು ಹಾಗೂ ಜನತಾದಳ ಪಕ್ಷವೇ ಕಾರಣ , ಅಂದು ಪಕ್ಷದಲ್ಲಿ ಅಗ್ರಗಣ್ಯ ನಾಯಕರಿದ್ರೂ ಸಿದ್ದರಾಮಯ್ಯ ಅವರ ಕೈಯಲ್ಲಿ ಸಾಮಾಜಿಕ ನ್ಯಾಯ ಬದ್ಧತೆಯಿಂದ ಬಜೆಟ್ ಮಂಡನೆ ಮಾಡಿಸಿದ್ದು ಇದೇ ದೇವೇಗೌಡರು ಎಂದು ಹೇಳಿದರು.

ಅಂದು ದೇವೇಗೌಡರು ಬಜೆಟ್ ಮಂಡನೆ ಮಾಡಿಸಿಲ್ಲ ಎಂದಿದ್ದರೆ, ಇಂದು ಸಿದ್ದರಾಮಯ್ಯ ಅವರು 18ನೇ ಬಜೆಟ್ ಮಂಡಿಸುತ್ತಿದ್ರಾ..? ಇತಿಹಾಸ ತಿಳಿದುಕೊಂಡು ಮಾತಾಡೋಣ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಈಗಲೇ ಚುನಾವಣೆ ಮಾಡಿದ್ರೆ ಕಾಂಗ್ರೆಸ್ ಬೀದಿಗೆ ಬರುತ್ತದೆ – 31ಕಾಂಗ್ರೆಸ್ ಶಾಸಕರ ಪತ್ರ ವಿಚಾರಕ್ಕೆ ಮಾತನಾಡಿದ ಅವರು, ಸಚಿವರ ಬದಲಾವಣೆಯಲ್ಲ, ಕಾಂಗ್ರೆಸ್ ಸರ್ಕಾರವನ್ನೇ ಬದಲಾವಣೆ ಮಾಡುವ ಕೆಲಸ ಮಾಡ್ಬೇಕು ಎಂದು ಏಳೂ ಕೋಟಿ ಕನ್ನಡಿಗರು ಚರ್ಚೆ ಮಾಡ್ತಿದ್ದಾರೆ. 9ಸಾವಿರ ಕಿ.ಮೀ ಪ್ರವಾಸ ಮಾಡಿದ್ದೇನೆ, ಈ ಕೂಡಲೇ ಕಾಂಗ್ರೆಸ್ ನನ್ನ ತಿರಸ್ಕಾರ ಮಾಡಿ, ಬೀದಿಗೆ ತಳ್ಳುತ್ತಾರೆ ಎಂದು ಕಿಡಿ ಕಾರಿದರು.

ಯಾರೇ ಶಾಸಕರನ್ನ ಬದಲಾವಣೆ ಮಾಡಿದ್ರು ಅಭಿವೃದ್ಧಿ ಆಗುವುದಿಲ್ಲ – ಯಾರೇ ಶಾಸಕರನ್ನ ಬದಲಾವಣೆ ಮಾಡಿದ್ರು, ಏನು ಅಭಿವೃದ್ಧಿಯನ್ನ ಕಾಣುವುದಕ್ಕೆ ಆಗುವುದಿಲ್ಲ, ಇವರ ಮನಸ್ಥಿತಿ ಇನ್ನು ಎರಡು ವರ್ಷದಲ್ಲಿ ಎಷ್ಟಾಗುತ್ತೋ ಲೂಟಿ ಮಾಡಿ ಜನ ಸಾಮಾನ್ಯರನ್ನ ಸಾಲಗಾರರನ್ನಾಗಿ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

0 Shares

By admin

Leave a Reply

Your email address will not be published. Required fields are marked *