0 Shares

ದೇವನಹಳ್ಳಿ : ರಾಜ್ಯ ಕಾಂಗ್ರೇಸ್ ಸರ್ಕಾರ ಜನರಿಗೆ ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ದಿವಾಳಿಯಾಗಿದೆ ಅದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾಚ್೯ 07 ರ ಶನಿವಾರದಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರರವರ ನೇತೃತ್ವದಲ್ಲಿ ನಡೆಯಲಿರುವ “ವಿಬಿಜಿ ರಾಮ್ ಜೀ “ಯೋಜನೆಯ ಸಮಾವೇಶ ನಡೆಯಲಿದ್ದು, ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಹಲವು ವರಿಷ್ಠರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ತಾಲೂಕು ಮಂಡಲ ಅಧ್ಯಕ್ಷ ಅಂಬರೀಶಗೌಡರವರ ನೇತೃತ್ವದಲ್ಲಿ “ವಿಬಿಜಿ ರಾಮ್ ಜೀ “ಯೋಜನೆಯ ಸಮಾವೇಶದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮತದಾರರಿಗೆ ಬಿಟ್ಟಿ ಭಾಗ್ಯಗಳು ಮೂಲಕ ಆಸೆ ಆಮಿಷಗಳನ್ನ ತೋರಿಸಿ ಆಡಳಿತಕ್ಕೆ ಬಂದ ಕಾಂಗ್ರೇಸ್ ಪಕ್ಷದ ಕಾರ್ಯವೈಖರಿ ಈಗ ಜನರಿಗೂ ತಮ್ಮ ತಪ್ಪಿನ ಅರಿವಾಗಿದೆ ಎಂದರು.

ಸಚಿವರಿಗೆ ಮಂತ್ರಿ ಆದಾಗಿನಿಂದ ಸರ್ಕಾರಿ ಗೋಮಾಳಗಳನ್ನು ದೋಚುವುದು ಬಿಟ್ಟರೇ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕಾನೂನಿನ ಚೌಕ್ಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಷ್ಠಾವಂತ ಅಧಿಕಾರಿಗಳನ್ನು ತೆಗೆದು,ತಮ್ಮ ಸಂಬಂಧಿಕರಿಗೆ ಸ್ಥಾನ ನೀಡಲು ಇಂತಹ ಕೆಲಸಗಳು ಮಾಡುವುದು ಸಮಂಜಸವಲ್ಲ, ಯುವಕರಿಗೆ ಹುದ್ದೆಗಳನ್ನು ನೀಡಲು ಕಾಂಗ್ರೇಸ್ ಪಕ್ಷಕ್ಕೆ ಆಗುತ್ತಿಲ್ಲ ಬಿಟ್ಟಿ ಭಾಗ್ಯಗಳ ಹೆಸರಲ್ಲಿ ಅವರವರ ಇಲಾಖೆಯಲ್ಲಿ ಲೂಟಿ ಮಾಡುವುದು ಇವರ ಕಾರ್ಯ .ತಾಲೂಕಿನಲ್ಲಿ ಪೋಕ್ಸೋ ಕಾಯ್ದೆ ದಾಖಲಾಗಿದ್ದು, ಶಾಲೆಯ ಮುಖ್ಯಸ್ಥನೇ ಈ ಕಾರ್ಯ ಮಾಡುವುದಾದರೇ ಇನ್ನೆಷ್ಟು ಶಿಕ್ಷಣ ವ್ಯವಸ್ಥೆ ಹದಗೆಟ್ಟಿವೆ ಎಂಬುದು ತಿಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಚಂದ್ರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ತಾಲೂಕು ಮಂಡಲ ಅಧ್ಯಕ್ಷ ಅಂಬರೀಶ ಗೌಡ, ಉಪಾಧ್ಯಕ್ಷ ಮುನಿಕೃಷ್ಣ (ತಮ್ಮಯ್ಯ), ಮನ್ ಕಿ ಬಾತ್ ಕಾರ್ಯಕ್ರಮದ ತಾಲೂಕು ಸಂಚಾಲಕ ಅರುವನಹಳ್ಳಿ ವೆಂಕಟೇಗೌಡ, ಮುಖಂಡರುಗಳಾದ ನಾಗೇಶ್ ಬಾಬು, ನವೀನ್, ವಿಜಯ ರಾಘವೇಂದ್ರ, ಅನಿಲ್ ಕುಮಾರ್, ರಾಜೇಶ್ವರಿ, ಮುನೀಂದ್ರ ಸೇರಿದಂತೆ ತಾಲೂಕು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

0 Shares

By admin

Leave a Reply

Your email address will not be published. Required fields are marked *