0 Shares

ಹೊಸಕೋಟೆ : ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ವಿಚಾರದ ಬಗ್ಗೆ, ನೆನ್ನೆ ಕೂಡ ವಿಮಾನ‌ ಬಂದಿವೆ, ಇಂದೂ ಕೂಡ ಬರಲಿವೆ. ಇನ್ನೂ ಯಾರು ಯಾರು ಬಾಕಿ ಇದ್ದಾರೆ, ಅವರ ಪಟ್ಟಿಯನ್ನು ಕೇಂದ್ರ ಸರ್ಕಾರ‌ಕ್ಕೆ ಕಳಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಅವರು ವಿದೇಶಿ ಎಂಬೆಸ್ಸಿಗೆ ಕಳಿಸಿಕೊಟ್ಟು ಎಲ್ಲಾ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೇವೆ. ನಮಗೆ ಪೋನ್ ಕಾಲ್ ಬರುವ ಎಲ್ಲಾ ಮಾಹಿತಿಯನ್ನ ಕೇಂದ್ರಕ್ಕೆ ಕಳಿಸಿಕೊಟ್ಟು ವ್ಯವಸ್ಥೆ ಮಾಡಲಾಗುತ್ತಿದೆ. ಕೆಲವರು ವಾಪಸ್ ಬಂದಿದ್ದಾರೆ, ಎಲ್ಲವನ್ನಾ ಚೆಕ್ ಮಾಡುತ್ತಿದ್ದೇವೆ. ನಾವು ಏನೇ ಮಾಡಿದರೂ ಕೇಂದ್ರದ ಮುಖಾಂತರವೇ ಮಾಡಬೇಕು ಎಂದರು.

ಪೋನ್ ಟ್ಯಾಪಿಂಗ್ ವಿಚಾರ; ಅದನೆಲ್ಲಾ ಮಾಡಿಸಿ ಅವರಿಗೆ ಅನುಭವ ಇದೆ ಅನ್ನಿಸುತ್ತದೆ. ಅನುಭವದಿಂದ ಹೇಳುತ್ತಿದ್ದಾರೆ. ಯಾರು ಹಿಂದೆ ಇದನೆಲ್ಲಾ ಮಾಡಿಸಿದ್ದಾರೆ ಅವರಿಗೆ ಈ ಟೆಕ್ನಿಕ್ ಗೊತ್ತಿರಬೇಕು. ನಮಗೆ ಅದು ಯಾವುದೂ‌ ಗೊತ್ತಿಲ್ಲ. ಅವರು ಹೇಳುತ್ತಿರುವುದು ಅವರ ನಡವಳಿಕೆಯ ಪ್ರತಿಬಿಂಬವಾಗಿದೆ. ಅವರು ಬೆಣ್ಣೆ ತಿಂದು ಇನ್ನೊಬ್ಬರ ಮೂತಿಗೆ ಸವರುವಂಥ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲಾ ರಾಜಕೀಯವಾಗಿ ಬಿಜೆಪಿಯವರಿಗೆ ಕರಗತ ಆಗಿರುವ ಕಲೆಗಳು ಎಂದು ಹೇಳಿದರು.

0 Shares

By admin

Leave a Reply

Your email address will not be published. Required fields are marked *